IND vs SA: ಗೆಲುವಿನ ಸಂಭ್ರಮದಲ್ಲಿರುವ ಭಾರತಕ್ಕೆ ದಂಡದ ಬರೆ! ಡಬ್ಲ್ಯುಟಿಸಿ ಪಾಯಿಂಟ್​ಗೂ ಕತ್ತರಿ ಹಾಕಿದ ಐಸಿಸಿ

IND vs SA: ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಪ್ರತಿ ಓವರ್‌ಗೆ ವಿಳಂಬದ ಅಪರಾಧಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲು ಅವಕಾಶವಿದೆ.

IND vs SA: ಗೆಲುವಿನ ಸಂಭ್ರಮದಲ್ಲಿರುವ ಭಾರತಕ್ಕೆ ದಂಡದ ಬರೆ! ಡಬ್ಲ್ಯುಟಿಸಿ ಪಾಯಿಂಟ್​ಗೂ ಕತ್ತರಿ ಹಾಕಿದ ಐಸಿಸಿ
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Dec 31, 2021 | 9:45 PM

ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತೀಯ ಟೆಸ್ಟ್ ತಂಡವು 2021 ರ ವರ್ಷವನ್ನು ಅದ್ಭುತ ರೀತಿಯಲ್ಲಿ ಕೊನೆಗೊಳಿಸಿತು ಮತ್ತು ಐತಿಹಾಸಿಕ ವಿಜಯವನ್ನು ಸಾಧಿಸಿತು. ಭಾರತಕ್ಕಿಂತ ಮೊದಲು ಯಾವುದೇ ಏಷ್ಯಾದ ತಂಡವು ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿರಲಿಲ್ಲ. ಈ ಗೆಲುವಿನ ನಂತರ ವಿರಾಟ್ ಅಂಡ್ ಕಂಪನಿ ಆಲ್ ರೌಂಡ್ ಪ್ರಶಂಸೆ ಪಡೆಯುತ್ತಿದ್ದು, ಎಲ್ಲರೂ ಈ ತಂಡವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಈ ನಡುವೆ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಐಸಿಸಿ ಅವರಿಗೆ ಈ ಹೊಡೆತ ನೀಡಿದೆ. ಐಸಿಸಿ ಭಾರತಕ್ಕೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದೆ. ನಿಧಾನಗತಿಯ ಓವರ್ ರೇಟ್ ನಿಂದಾಗಿ ಟೀಂ ಇಂಡಿಯಾಗೆ ದಂಡ ಬಿದ್ದಿದೆ.

ಪಂದ್ಯದ ರೆಫರಿ ಆಂಡ್ರ್ಯೂ ಪೈಕ್ರಾಫ್ಟ್ ಭಾರತವು ನಿಗದಿತ ಸಮಯದಲ್ಲಿ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಗುರಿಗಿಂತ ಒಂದು ಓವರ್ ಹಿಂದೆ ಇರುವುದರ ಆದಾರದ ಮೇಲೆ ಈ ದಂಡ ಹಾಕಿದ್ದಾರೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಪ್ರತಿ ಓವರ್‌ಗೆ ವಿಳಂಬದ ಅಪರಾಧಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲು ಅವಕಾಶವಿದೆ. ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 113 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಸೋಲು ಭಾರತ ಕೇವಲ ಪಂದ್ಯ ಶುಲ್ಕದ ರೂಪದಲ್ಲಿ ಮಾತ್ರ ಸೋತಿಲ್ಲ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಅವರು ಇದರ ತೀವ್ರತೆಯನ್ನು ಅನುಭವಿಸಿದ್ದಾರೆ. ICC ಪುರುಷರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರ್ಟಿಕಲ್ 16.11 ರ ಪ್ರಕಾರ, ನಿಗದಿತ ಸಮಯದೊಳಗೆ ತಂಡವು ಒಂದು ಓವರ್ ಕಡಿಮೆಯಾದರೆ, ಪ್ರತಿ ಓವರ್‌ಗೆ ಒಂದು ಪಾಯಿಂಟ್‌ಗೆ ದಂಡ ವಿಧಿಸಲಾಗುತ್ತದೆ. ಅಂದರೆ ಭಾರತ ತನ್ನ ಖಾತೆಯಿಂದ ಒಂದು ಅಂಕ ಕಳೆದುಕೊಳ್ಳಬೇಕಾಗುತ್ತದೆ.

ನಾಯಕ ವಿರಾಟ್ ಕೊಹ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ. ಅಂಪೈರ್‌ಗಳಾದ ಮರೈಸ್ ಎರಾಸ್ಮಸ್, ಅಡ್ರಿಯನ್ ಹೋಲ್ಡ್‌ಸ್ಟಾಕ್, ಅಲ್ಲಾವುದ್ದೀನ್ ಪಾಲೇಕರ್ ಮತ್ತು ಬೊಂಗಾನಿ ಜೆಲ್ಲೆ ಅವರ ಮೇಲೆ ಈ ಆರೋಪಗಳನ್ನು ಹೊರಿಸಿದ್ದರು.

ಇದು ಉಳಿದ ತಂಡಗಳ ಪರಿಸ್ಥಿತಿ ಈಗ ನಾವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಸ್ತುತ ಕೋಷ್ಟಕವನ್ನು ನೋಡಿದರೆ, ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಅವರು ನಾಲ್ಕು ಗೆಲುವು, ಒಂದು ಸೋಲು ಮತ್ತು ಎರಡು ಡ್ರಾ ಪಂದ್ಯಗಳೊಂದಿಗೆ 53 ಅಂಕಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ ಮತ್ತು ಅವರ ಶೇಕಡಾವಾರು ಅಂಕಗಳು 63.09 ಆಗಿದೆ. ಆದರೆ ಅವರ ಖಾತೆಯಲ್ಲಿ ಮೂರು ಪೆನಾಲ್ಟಿ ಅಂಕಗಳಿವೆ. ಆಸ್ಟ್ರೇಲಿಯ 35 ಅಂಕಗಳು ಮತ್ತು 100% ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ ಮತ್ತು ಅದರ ಶೇಕಡಾವಾರು ಆಸ್ಟ್ರೇಲಿಯಕ್ಕೆ ಸಮಾನವಾಗಿದೆ. ಅವರು 24 ಅಂಕಗಳನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನ, ಅವರ ಶೇಕಡಾವಾರು ಅಂಕಗಳು 75 ಮತ್ತು ಅದು 36 ಅಂಕಗಳನ್ನು ಹೊಂದಿದೆ. ಭಾರತವನ್ನು ಹೊರತುಪಡಿಸಿದರೆ ಇಂಗ್ಲೆಂಡ್ ಮಾತ್ರ ತನ್ನ ಖಾತೆಯಲ್ಲಿ ಪೆನಾಲ್ಟಿಯನ್ನು ಹೊಂದಿದೆ. ಇಂಗ್ಲೆಂಡ್ ಖಾತೆಯಲ್ಲಿ 10 ಅಂಕಗಳ ಪೆನಾಲ್ಟಿ ಇದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ