U19 Asia Cup: ಅಜ್ಜ ಒಲಿಂಪಿಕ್ ಪದಕ ವಿಜೇತ, ತಂದೆ ಕೋಚ್! ಈಗ ಏಷ್ಯಾಕಪ್‌ನಲ್ಲಿ ಮಿಂಚಿದ ಮಗ
U19 Asia Cup: ಆಲ್ ರೌಂಡರ್ ರಾಜ್ ಈ ಟೂರ್ನಿಯಲ್ಲಿ ಅವಕಾಶ ಸಿಕ್ಕಾಗ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ತಂಡದ ಪ್ರಶಸ್ತಿ ಗೆಲುವಿನ ಕಥೆ ಬರೆದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.
ಭಾರತದ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಅಂಡರ್-19 ಏಷ್ಯಾಕಪ್ ವಶಪಡಿಸಿಕೊಂಡಿದ್ದಾರೆ. ಭಾರತದ ಅಂಡರ್-19 ತಂಡ ಶುಕ್ರವಾರ ಶ್ರೀಲಂಕಾವನ್ನು ಸೋಲಿಸಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಹಲವು ಯುವಕರು ಮಿಂಚಿದರು. ಅವರಲ್ಲಿ ಒಬ್ಬರು ರಾಜ್ ಅಂಗದ್ ಬಾವಾ. ಆಲ್ ರೌಂಡರ್ ರಾಜ್ ಈ ಟೂರ್ನಿಯಲ್ಲಿ ಅವಕಾಶ ಸಿಕ್ಕಾಗ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ತಂಡದ ಪ್ರಶಸ್ತಿ ಗೆಲುವಿನ ಕಥೆ ಬರೆದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಅವರು ಇಡೀ ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿ ಅವರ ಹೆಸರಿನಲ್ಲಿ ಎಂಟು ವಿಕೆಟ್ಗಳನ್ನು ಪಡೆದರು.
ಏಷ್ಯಾಕಪ್‌ನಲ್ಲಿ ರಾಜ್ ಅವರ ಪ್ರದರ್ಶನವನ್ನು ನೋಡಿದರೆ, ಅವರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 56 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ಅಫ್ಘಾನಿಸ್ತಾನ ವಿರುದ್ಧ 66 ರನ್ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶದ ವಿರುದ್ಧ ಅವರು ಶಾರ್ಜಾದಲ್ಲಿ 26 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಫೈನಲ್‌ನಲ್ಲೂ ರಾಜ್ ಉತ್ತಮವಾಗಿ ಬೌಲಿಂಗ್ ಮಾಡಿ 23 ರನ್‌ಗಳಿಗೆ ಬ್ರೇಕ್‌ಥ್ರೂ ಪಡೆಯುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಬ್ಯಾಟ್‌ನಿಂದ ಅವರ ಪ್ರದರ್ಶನವನ್ನು ನಾವು ನೋಡಿದರೆ, ಅವರು ಮೂರು ಪಂದ್ಯಗಳಲ್ಲಿ ಬ್ಯಾಟ್ ಮಾಡಿ 91 ರನ್ ಗಳಿಸಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನ ವಿರುದ್ಧ ಔಟಾಗದೆ 43 ರನ್ ಗಳಿಸಿದ್ದು ಅತ್ಯುತ್ತಮ ಸ್ಕೋರ್ ಆಗಿತ್ತು. ಆದಾಗ್ಯೂ, ರಾಜ್ ಅವರು ಆಟವನ್ನು ಆನುವಂಶಿಕವಾಗಿ ಪಡೆದಿದ್ದಾರೆ. ತಂದೆಯಿಂದ ಅಜ್ಜನವರೆಗೆ ಎಲ್ಲರೂ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ ಮತ್ತು ಈಗ ರಾಜ್ ಆ ಕೆಲಸವನ್ನು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ.
ತಂದೆ ಕೋಚ್, ಅಜ್ಜ ಒಲಿಂಪಿಕ್ ಪದಕ ವಿಜೇತ ರಾಜ್, ಅವರ ಅಜ್ಜರ ಜೊತೆ ಹೆಚ್ಚು ಬಾಲ್ಯ ಕಳೆಯಲಾಗಲಿಲ್ಲ. ಏಕೆಂದರೆ ಅವರ ತಾತಾ 2008 ರಲ್ಲಿ ನಿಧನರಾದರು. ಆ ವೇಳೆಯಲ್ಲಿ ರಾಜ್ ತುಂಬಾ ಚಿಕ್ಕವರಾಗಿದ್ದರು. ಅವರ ಅಜ್ಜನ ಹೆಸರು ತ್ರಲೋಚನ್ ಸಿಂಗ್ ಬಾವಾ, ಅವರು ಲಂಡನ್ ಒಲಿಂಪಿಕ್ಸ್-1948 ರಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದರು. ಆದರೆ ರಾಜ್ ತನ್ನ ತಂದೆ ಮತ್ತು ಇತರರಿಂದ ಅಜ್ಜನ ಕಥೆಗಳನ್ನು ಕೇಳಿದರು. ಇಲ್ಲಿಂದಲೇ ಅವರ ಹೃದಯದಲ್ಲಿ ಟೀಂ ಇಂಡಿಯಾ ಪರ ಆಡುವ ಬೀಜ ಮೊಳಕೆಯೊಡೆದಿತ್ತು. ಆದರೆ, ರಾಜ್ ಅವರು ವಿಭಿನ್ನ ಆಟವನ್ನು ಆಯ್ಕೆ ಮಾಡಿಕೊಂಡರು. ಹಾಕಿಯ ಬದಲಾಗಿ, 22 ಯಾರ್ಡ್‌ಗಳ ವಿಕೆಟ್‌ನಲ್ಲಿ ಅದ್ಭುತಗಳನ್ನು ಪ್ರದರ್ಶಿಸಲು ಅವರು ನಿರ್ಧರಿಸಿದರು. ಇದರಲ್ಲಿ ಅವರ ತಂದೆ ಸುಖ್ವಿಂದರ್ ಸಿಂಗ್ ಬಾವಾ ಅವರ ಕೈವಾಡವಿದೆ. ಅವರ ತಂದೆ ಯುವರಾಜ್ ಸಿಂಗ್ ಅವರ ಬಾಲ್ಯದ ತರಬೇತುದಾರರಾಗಿದ್ದಾರೆ.
ಏಷ್ಯಾ ಕಪ್‌ಗೆ ಹೊರಡುವ ಮೊದಲು, ರಾಜ್ ಸ್ಪೋರ್ಟ್‌ಸ್ಟಾರ್ ಜೊತೆ ಮಾತನಾಡಿ, “ನನ್ನ ತಂದೆ ಅನೇಕ ರಾಜ್ಯಗಳ ತಂಡಗಳಿಗೆ ತರಬೇತುದಾರರಾಗಿದ್ದರು ಮತ್ತು ನಾನು ಅವರೊಂದಿಗೆ ಹೋಗುತ್ತಿದ್ದೆ. ನಾನು ಕ್ರಿಕೆಟಿಗರೊಂದಿಗೆ ಸಮಯ ಕಳೆಯುತ್ತಿದ್ದೆ. ನಿಧಾನವಾಗಿ ನಾನು ಈ ಆಟವನ್ನು ಇಷ್ಟಪಡಲು ಪ್ರಾರಂಭಿಸಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ ಎಂದಿದ್ದರು.
ಕುಟುಂಬ ಸಮೇತ ಚಂಡೀಗಢಕ್ಕೆ ವಲಸೆ ಕೆಲವು ವರ್ಷಗಳ ಹಿಂದೆ ಅವರ ಕುಟುಂಬವು ಗುರುಗ್ರಾಮ್‌ನಿಂದ ಚಂಡೀಗಢಕ್ಕೆ ಸ್ಥಳಾಂತರಗೊಂಡಿತು ಮತ್ತು ರಾಜ್ ಡಿಎವಿ ಪಬ್ಲಿಕ್ ಶಾಲೆಗೆ ಸೇರಿದರು. ಇಲ್ಲಿಂದ ನಿರಂತರವಾಗಿ ವಯೋಮಿತಿಯಲ್ಲಿ ಆಡತೊಡಗಿದರು. ಕೆಲವು ವರ್ಷಗಳ ಹಿಂದೆ ಚಂಡೀಗಢ ಬಿಸಿಸಿಐನಿಂದ ಮಾನ್ಯತೆ ಪಡೆದಾಗ, ನಾನು ಪಿಸಿಎಯಿಂದ ಯುಟಿಸಿಎಗೆ ಸ್ಥಳಾಂತರಗೊಂಡೆ. ಅಂದಿನಿಂದ ತಂಡದೊಂದಿಗೆ ಆಡುತ್ತಿದ್ದೇನೆ ಎಂದರು.
ಅಂಡರ್-19 ವಿಶ್ವಕಪ್‌ನಲ್ಲಿ ಬದಲಾವಣೆ ತರಲಿದೆ ರಾಜ್ ತನ್ನ ಅಜ್ಜ ಮತ್ತು ತಂದೆಯ ಪರಂಪರೆಯನ್ನು ಮುಂದುವರಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ. ನನ್ನ ಅಜ್ಜ 2008 ರಲ್ಲಿ ನಿಧನರಾದಾಗ, ನಾನು ತುಂಬಾ ಚಿಕ್ಕವನಾಗಿದ್ದೆ. ಆದರೆ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಒಂದು ಗೌರವವೂ ಹೌದು.
ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ಗೆ ರಾಜ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ರಾಜ್ ಅವರು ವಿಶ್ವಕಪ್‌ನಲ್ಲಿ ಏಷ್ಯಾಕಪ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಾರೆ ಮತ್ತು ತಂಡಕ್ಕೆ ಮತ್ತೊಂದು ಪ್ರಶಸ್ತಿಯನ್ನು ನೀಡುತ್ತಾರೆ. ಜೊತೆಗೆ ರಾಷ್ಟ್ರೀಯ ತಂಡ ಮತ್ತು ಐಪಿಎಲ್‌ಗಾಗಿ ತಮ್ಮ ಸಾಮಥ್ರ್ಯವನ್ನು ಸಾಭೀತುಪಡಿಸಲಿದ್ದಾರೆ.