Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟ್​ ಕಂಪೆನಿ ಕೋಟಿ ಕೋಟಿ ಡೀಲ್ ಕುದುರಿಸಿದ ಬಾಬರ್ ಆಝಂ

Babar Azam: ಬಾಬರ್ ಆಝಂ ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್​ನಲ್ಲಿದ್ದರು. ಆದರೀಗ ಬ್ಯಾಟ್ ಬದಲಾಗುತ್ತಿದ್ದಂತೆ ಅದೃಷ್ಟ ಕೂಡ ಬದಲಾಗಿದೆ. ಸೌತ್ ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಬಾಬರ್ ಆಝಂ ಮಿಂಚಿದ್ದಾರೆ. ಈ ಅರ್ಧಶತಕಗಳೊಂದಿಗೆ ಫಾರ್ಮ್​ಗೆ ಮರಳಿರುವ ಬಾಬರ್ ಮುಂಬರುವ ದಿನಗಳಲ್ಲಿ ಕೋಟಿ ಎಣಿಸಲಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 09, 2025 | 2:03 PM

ಪಾಕಿಸ್ತಾನ್ ತಂಡದ ಮಾಜಿ ನಾಯಕ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊಸ ಬ್ಯಾಟ್​ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯಿದ್ದ ಗ್ರೇ ನಿಕಲ್ಸ್ ಕಂಪೆನಿ ಜತೆಗಿನ ಒಪ್ಪಂದ ಕೊನೆಗೊಳಿಸಿರುವ ಬಾಬರ್ ಇದೀಗ ಪಾಕಿಸ್ತಾನದ ಸಿಎ ಸ್ಪೋರ್ಟ್ಸ್ ಕಂಪೆನಿ ಜೊತೆ ಹೊಸ ಡೀಲ್ ಕುದುರಿಸಿಕೊಂಡಿದ್ದಾರೆ.

1 / 5
ಪಾಕ್ ಮಾಧ್ಯಮ ವರದಿಗಳ ಪ್ರಕಾರ, ಸಿಎ ಸ್ಪೋರ್ಟ್ಸ್‌ನಿಂದ ಬಾಬರ್ ಪ್ರತಿ ವರ್ಷ 7 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಅವರು ಇಂಗ್ಲೆಂಡ್​ನ ಗ್ರೇ ನಿಕೋಲ್ಸ್ ಜೊತೆ ಸುಮಾರು 5 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದರು.

2 / 5
ಇದೀಗ ತಮ್ಮ ಬ್ಯಾಟ್ ಮೇಲೆ ಸಿಎ ಸ್ಪೋರ್ಟ್ಸ್ ಸ್ಟಿಕ್ಕರ್ ಹಾಕಿಕೊಳ್ಳಲು ಬಾಬರ್ ಆಝಂ 7 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅರ್ಧಶತಕ ಮತ್ತು ಶತಕಗಳಿಗೂ ಹೆಚ್ಚುವರಿ ಮೊತ್ತ ಪಡೆಯಲಿದ್ದಾರೆ. ಅಂದರೆ ಬಾಬರ್ ಅರ್ಧಶತಕ ಮತ್ತು ಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿ ತೋರಿಸಿದರೆ ಅದಕ್ಕೆ ಬೋನಸ್ ಮೊತ್ತ ನೀಡಲಿದ್ದಾರೆ.

3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಡೀಲ್ ಬೆನ್ನಲ್ಲೇ ಬಾಬರ್ ಆಝಂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದಾರೆ. 2022 ರಿಂದ ಟೆಸ್ಟ್​ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸದಿದ್ದ ಬಾಬರ್, ಸಿಎ ಬ್ಯಾಟ್​ನೊಂದಿಗೆ ಕಣಕ್ಕಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ 58 ಮತ್ತು 81 ರನ್ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದ್ದಾರೆ.

4 / 5
ಇನ್ನು ಬಾಬರ್ ಆಝಂ ಜೊತೆಗಿನ ಒಪ್ಪಂದ ಬಳಿಕ ಸಿಎ ಬ್ಯಾಟ್ ಮಾರಾಟದಲ್ಲಿ ಏರಿಕೆ ಕಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಲ್ಲೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಈ ವೇಳೆ ಬಾಬರ್ ಆಝಂ ಬಳಸುವ ಸಿಎ ಬ್ಯಾಟ್ ಪಾಕ್ ತಂಡದ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಬ್ರಾಂಡ್ ಆಗುವ ನಿರೀಕ್ಷೆಯಲ್ಲಿದೆ ಸಿಎ ಸ್ಪೋರ್ಟ್ಸ್​.

5 / 5
Follow us
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ

0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ

ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?

ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ