ಸುಳ್ಳು ಹೇಳಿದ್ರಾ ಕೊಹ್ಲಿ? ಟಿ20 ನಾಯಕತ್ವ ಬಿಡದಂತೆ ಮನವಿ ಮಾಡಿದ್ದೆವು; ಸೆಲೆಕ್ಟರ್ ಚೇತನ್ ಶರ್ಮಾ ಶಾಕಿಂಗ್ ಹೇಳಿಕೆ
ಟೆಸ್ಟ್ ತಂಡದ ಆಯ್ಕೆಗೆ 90 ನಿಮಿಷಗಳ ಮೊದಲು ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಹೇಳಿದ್ದೇನೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಕೆಎಲ್ ರಾಹುಲ್ ಅವರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದಾಗ್ಯೂ, ತಂಡದ ಘೋಷಣೆಯ ನಂತರ, ಮುಖ್ಯ ಆಯ್ಕೆದಾರರು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದರು. ಟಿ20 ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ವಿರಾಟ್ ಕೊಹ್ಲಿಗೆ ಎಲ್ಲರೂ ಹೇಳಿದ್ದೇವು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವ ತೊರೆಯುವುದಾಗಿ ಹೇಳಿದ್ದರು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಇದಾದ ನಂತರ, ವಿರಾಟ್ ಎದುರು ಕುಳಿತಿದ್ದ ಎಲ್ಲರೂ ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡರು.
ಏಕದಿನ ತಂಡದ ಘೋಷಣೆಯ ನಂತರ ಚೇತನ್ ಶರ್ಮಾ ಮಾತನಾಡಿ, ವಿರಾಟ್ ಕೊಹ್ಲಿ ಟಿ20 ನಾಯಕತ್ವ ತೊರೆಯುವ ಬಗ್ಗೆ ಮಾತನಾಡುವಾಗ ಎಲ್ಲರೂ ದಿಗ್ಭ್ರಮೆಗೊಂಡರು. ಎಲ್ಲರೂ ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವ ಬಿಟ್ಟುಕೊಡಬೇಡಿ ಎಂದು ಕೇಳಿಕೊಂಡೆವು. ವಿರಾಟ್ ಕೊಹ್ಲಿಯಂತಹ ಆಟಗಾರರು ಏಕಾಏಕಿ ಟಿ20 ನಾಯಕತ್ವ ತೊರೆಯುವ ಬಗ್ಗೆ ಮಾತನಾಡಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ವಿರಾಟ್ ಕೊಹ್ಲಿಯ ಈ ಘೋಷಣೆ 2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೇಲೂ ಪರಿಣಾಮ ಬೀರಬಹುದ್ದಾಗಿದ್ದರಿಂದ ಆಯ್ಕೆಗಾರರು ಅವರ ನಿರ್ಧಾರವನ್ನು ಪರಿಶೀಲಿಸುವಂತೆ ಕೇಳಿಕೊಂಡರು ಎಂದಿದ್ದಾರೆ.
ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಅವರನ್ನು ತೆಗೆದುಹಾಕುವುದು ಆಯ್ಕೆಗಾರರ ನಿರ್ಧಾರವಾಗಿತ್ತು. ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತೊರೆಯಲು ನಿರ್ಧರಿಸಿದಾಗ, ಆಯ್ಕೆಗಾರರು ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಬೇಕಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ODI ಮತ್ತು T20 ಮಾದರಿಗಳಲ್ಲಿ ಒಬ್ಬನೇ ನಾಯಕನನ್ನು ಹೊಂದಿರಬೇಕೆಂದು ಆಯ್ಕೆಗಾರರು ಬಯಸಿದ್ದರು. ವಿರಾಟ್‌ಗೆ ನಾಯಕತ್ವ ತೊರೆಯುವಂತೆ ಯಾರೂ ಹೇಳಿಲ್ಲ. ಅವರು ಟಿ20 ನಾಯಕತ್ವವನ್ನು ತೊರೆದಾಗ, ಆಯ್ಕೆದಾರರು ಬಿಳಿ ಚೆಂಡಿನ ಕ್ರಿಕೆಟಿಗೆ ಒಬ್ಬನೇ ನಾಯಕನಿರಬೇಕು ಎಂಬುದು ನಮ್ಮ ತೀರ್ಮಾನವಾಗಿತ್ತು. ಈ ಬಗ್ಗೆ ವಿರಾಟ್ ಕೊಹ್ಲಿಗೆ ತಿಳಿಸಿದ್ದೆವು. ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವುದು ನಮ್ಮ ನಿರ್ಧಾರವಾಗಿತ್ತು. ಟಿ20 ನಾಯಕತ್ವದಿಂದ ಕೆಳಗಿಳಿಯುವುದು ಅವರ ನಿರ್ಧಾರವಾಗಿತ್ತು.
ಟೆಸ್ಟ್ ತಂಡದ ಆಯ್ಕೆಗೂ ಮುನ್ನ ವಿರಾಟ್‌ಗೆ ಮಾಹಿತಿ- ಚೇತನ್ ಶರ್ಮಾ ಟೆಸ್ಟ್ ತಂಡದ ಆಯ್ಕೆಗೆ 90 ನಿಮಿಷಗಳ ಮೊದಲು ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಹೇಳಿದ್ದೇನೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ಚೇತನ್ ಶರ್ಮಾ, ‘ನಾನೇ ವಿರಾಟ್ ಕೊಹ್ಲಿಗೆ ಕರೆ ಮಾಡಿದ್ದೆ. ನಾನು ವಿರಾಟ್ ಜೊತೆ ಚೆನ್ನಾಗಿ ಮಾತನಾಡಿದೆ. ಪ್ರಮುಖ ವಿಷಯವೆಂದರೆ ವಿರಾಟ್ ಕೊಹ್ಲಿ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರು. ಟೆಸ್ಟ್ ತಂಡದ ಆಯ್ಕೆ ಸಭೆಗೂ ಮುನ್ನವೇ ಅವರಿಗೆ ತಿಳಿಸಿದ್ದೆವು. ವಿರಾಟ್ ಮತ್ತು ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. 90 ನಿಮಿಷಗಳ ಹಿಂದೆ, ಏಕದಿನ ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರದ ಬಗ್ಗೆ ವಿರಾಟ್‌ಗೆ ತಿಳಿಸಲಾಗಿತ್ತು ಎಂದು ಹೇಳುವ ಮೂಲಕ ಎಲ್ಲಾ ಊಹಪೋಹಗಳಿಗೂ ಚೇತನ ಶರ್ಮ ತೆರೆ ಎಳೆದಿದ್ದಾರೆ.