KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್

India’s ODI squad for SA tour: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟ ಮಾಡಿದೆ. ರೋಹಿತ್ ಶರ್ಮಾ ಇಂಜುರಿಯಿಂದ ಗುಣಮುಖರಾಗದ ಕಾರಣ ಕೆಎಲ್ ರಾಹುಲ್​ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಜಸ್​ಪ್ರೀತ್ ಬುಮ್ರಾ ಉಪ ನಾಯಕ. ಆದರೆ, ರಿಷಭ್ ಪಂತ್​ಗೆ ಯಾವುದೇ ಪಟ್ಟವಿಲ್ಲ.

KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್
KL Rahul - India’s ODI squad for SA tour - Jasprit Bumrah
Follow us
TV9 Web
| Updated By: Vinay Bhat

Updated on: Jan 01, 2022 | 10:15 AM

ದಕ್ಷಿಣ ಆಫ್ರಿಕಾ (South Africa vs India) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಟೀಮ್ ಇಂಡಿಯಾ (Team India) ಸದ್ಯ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 18 ಸದಸ್ಯರ ಭಾರತ ತಂಡವನ್ನ ಪ್ರಕಟ ಮಾಡಿದೆ. ಇಂಜುರಿಯಿಂದ ಗುಣಮುಖರಾಗದ ಕಾರಣ ಸೀಮಿತ ಓವರ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಏಕದಿನ ಸರಣಿಗೂ ಅಲಭ್ಯರಾಗಿದ್ದಾರೆ. ಇದರಿಂದ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಹಂಗಾಮಿ ನಾಯಕರನ್ನಾಗಿ ನೇಮಿಸಲಾಗಿದೆ. ಇವರ ಜೊತೆಗೆ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಹಂಗಾಮಿ ಉಪನಾಯಕರಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಟೀಮ್ ಇಂಡಿಯಾದ ಕ್ಯಾಪ್ಟನ್ ಪಟ್ಟದ ಕನಸು ಕಾಣುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್​ಗೆ (Rishabh Pant) ದೊಡ್ಡ ಆಘಾತ ಉಂಟಾಗಿದೆ.

ಹೌದು, ರೋಹಿತ್ ಶರ್ಮಾ ನಂತರಕ್ಕೆ ಟೀಮ್ ಇಂಡಿಯಾ ಕ್ಯಾಪ್ಟನ್ ಪಟ್ಟ ಕೆಎಲ್ ರಾಹುಲ್​ಗೆ ಎಂಬುದು ತಿಳಿದಿರುವ ವಿಚಾರ. ಉಪ ನಾಯಕ ಸ್ಥಾನ ರಿಷಭ್ ಪಂತ್​​ಗೆ ಎಂದೇ ನಂಬಲಾಗಿತ್ತು. ಮುಂದೆ ನಾಯಕನಾಗುವ ಅವಕಾಶ ಕೂಡ ಇವರಿಗಿತ್ತು. ಆದರೆ, ಸದ್ಯ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ ನಾಯಕನಾದರೆ ಉಪ ನಾಯಕನ ಜವಾಬ್ದಾರಿ ಪಂತ್​ ಬದಲು ಜಸ್​ಪ್ರೀತ್ ಬುಮ್ರಾಗೆ ಅವರಿಗೆ ಬಿಸಿಸಿಐ ನೀಡಿದೆ. ಬಿಸಿಸಿಐ ಉಪ ನಾಯಕನನ್ನು ಆರಿಸಿದ ನಿರ್ಧಾರ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದು ಸುಳ್ಳಲ್ಲ.

ಪಂತ್​ಗೆ ಉಪ ನಾಯಕನ ಪಟ್ಟ ಕೈ ತಪ್ಪಲು ಕಾರಣವೇನು?:

ಜಸ್​ಪ್ರೀತ್ ಬುಮ್ರಾ ಅವರನ್ನು ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಉಪ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ಪಂಡಿತರು ಪಂತ್ ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಬಹಿದಿತ್ತು ಹೇಳುತ್ತಿದ್ದಾರೆ. ಅಷ್ಟಕ್ಕೂ ಪಂತ್​ ಕೈಯಿಂದ ಈ ಸ್ಥಾನ ಕಳಚಲು ಪ್ರಮುಖ ಕಾರಣ ಕನ್​​​ಸಿಸ್ಟೆನ್ಸಿ. ಒಂದು ಪಂದ್ಯದಲ್ಲಿ ಆಡಿದರೆ ಮತ್ತೊಂದು ಪಂದ್ಯದಲ್ಲಿ ಇವರ ಪ್ರದರ್ಶನ ಶೂನ್ಯವಾಗಿರುತ್ತದೆ. ಅಲ್ಲದೆ ಪಂತ್​​ಗೆ ಹೋಲಿಸಿದರೆ ಬುಮ್ರಾ ಸಾಕಷ್ಟು ಅನುಭವಹೊಂದಿದ್ದಾರೆ. ಹೀಗಾಗಿ ಪಂತ್ ಬದಲು ಬುಮ್ರಾ ಅವರನ್ನು ಮುಂದಿನ ನಾಯಕನಾಗಿಸಲು ಬಿಸಿಸಿಐ ಈಗಲೇ ತಯಾರು ಮಾಡುತ್ತಿದೆ ಎನ್ನಲಾಗಿದೆ.

ಪಂತ್​ಗೆ ಇನ್ನೂ ಇದೆ ಅವಕಾಶ:

ಹೌದು, ರಿಷಭ್ ಪಂತ್​ಗೆ ಟೀಮ್ ಇಂಡಿಯಾ ನಾಯಕನಾಗು ಅವಕಾಶ ಇನ್ನೂ ಇದೆ. ಇವರು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ರೀತಿ ಎಲ್ಲರೂ ಕಂಡಿದ್ದಾರೆ. ಇವರ ನಾಯಕತ್ವದ ಅಡಿಯಲ್ಲಿ ಡೆಲ್ಲಿ ಐಪಿಎಲ್ 2021 ರಲ್ಲಿ ಪ್ಲೇ ಆಫ್ ವರೆಗೆ ತಲುಪಿತ್ತು. ಆದರೆ, ಐಪಿಎಲ್​ನಲ್ಲಿ ನೀಡಿದ ಪ್ರದರ್ಶನ ಇವರು ಭಾರತ ತಂಡದಲ್ಲಿ ನೀಡುತ್ತಿಲ್ಲ. ಇದೇ ಕಾರಣಕ್ಕೆ ಇವರ ನಾಯಕತ್ವದ ಕನಸು ಭಗ್ನಗೊಂಡಿದೆ. ಮ್ಯಾನೇಜ್ಮೆಂಟ್ ಪಂತ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಇವರು ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಬೇಕಷ್ಟೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 3 ಪಂದ್ಯಗಳು ಜನವರಿ 19, 21 (ಪಾರ್ಲ್) ಮತ್ತು 23ರಂದು (ಕೇಪ್‌ಟೌನ್) ನಡೆಯಲಿವೆ. 18 ಆಟಗಾರರ ತಂಡದಲ್ಲಿ ಸೀಮಿತ ಓವರ್ ತಂಡದ ರಿಯ ಸ್ಪಿನ್ನರ್ ಆರ್. ಅಶ್ವಿನ್ ಟಿ20 ಬಳಿಕ ಏಕದಿನ ತಂಡಕ್ಕೂ 4 ವರ್ಷಗಳ ಬಳಿಕ ಪುನರಾಗಮನ ಕಂಡಿದ್ದಾರೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

New Year 2022: ಒಬ್ಬ ಆಟಗಾರ ಮಾತ್ರ ಮಿಸ್: ಟೀಮ್ ಇಂಡಿಯಾದ ಹೊಸ ವರ್ಷದ ಆಚರಣೆ ಹೇಗಿತ್ತು ನೋಡಿ

Monu Goyat: ಎಂಥಾ ರೋಚಕ ಪಂದ್ಯ: ಒಂದೇ ರೇಡ್​ನಲ್ಲಿ ಎಲ್ಲರನ್ನೂ ಆಲೌಟ್ ಮಾಡಿದ ಪಟ್ನಾ ಪೈರೇಟ್ಸ್ ರೇಡರ್

(KL Rahul captain Jasprit Bumrah vice captain For South Africa ODI Series now Rishabh Pant Captain dream Shattered)

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ