Salman Butt: ಭಾರತದ ಐತಿಹಾಸಿಕ ಜಯದ ಬಗ್ಗೆ ಮಾತನಾಡಿದ ಪಾಕ್ ಮಾಜಿ ನಾಯಕ ಸಲ್ಮಾನ್ ಭಟ್
South Africa vs India: ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಟೆಸ್ಟ್‌ನಲ್ಲಿ ಭಾರತ ಈಗ ಅತ್ಯಂತ ಬಲಿಷ್ಠವಾಗಿದೆ. ಟೀಮ್ ಇಂಡಿಯಾವನ್ನು ಟೆಸ್ಟ್‌ನಲ್ಲಿ ಸೋಲಿಸುವುದು ಕಷ್ಟ ಅಂತ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಮೊದಲನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಟೀಮ್ ಇಂಡಿಯಾವನ್ನು (Team India) ಕ್ರಿಕೆಟ್ ಜಗತ್ತು ಕೊಂಡಾಡುತ್ತಿದೆ. ಈಗ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ (Salman Butt) ಕೂಡ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಟೆಸ್ಟ್‌ನಲ್ಲಿ ಭಾರತ ಈಗ ಅತ್ಯಂತ ಬಲಿಷ್ಠವಾಗಿದೆ. ಟೀಮ್ ಇಂಡಿಯಾವನ್ನು ಟೆಸ್ಟ್‌ನಲ್ಲಿ ಸೋಲಿಸುವುದು ಕಷ್ಟ ಅಂತ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ವಿದೇಶಿ ವಾತಾವರಣದಲ್ಲಿ ಗೆಲುವು ಸಾಧಿಸಿದರೆ ಅದು ನಮ್ಮ ಛಲವನ್ನು ಮತ್ತಷ್ಟು ಭದ್ರ ಪಡಿಸುತ್ತದೆ. ಪರಿಸ್ಥಿತಿಯನ್ನು ಲೆಕ್ಕಿಸದೆ ಅತ್ಯುತ್ತಮ ಕ್ರಿಕೆಟ್ ಆಡುವ ತಂಡಕ್ಕೆ ಗೆಲುವು ಕಂಡಿತಾ ಸಿಗುತ್ತದೆ. ಮತ್ತು ಅದು ಭಾರತ ತಂಡವಾಗಿದೆ. ಟೆಸ್ಟ್‌ನಲ್ಲಿ ಈ ತಂಡವನ್ನು ಸೋಲಿಸುವುದು ಕಷ್ಟವಾಗಿದೆ. ಅವರು ಜಗತ್ತಿನ ಯಾವುದೇ ಕಡೆ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ತಂಡವಾಗಿ ಹೊರಹೊಮ್ಮಿದೆ. ತಂಡದಲ್ಲಿರುವ ವೀಕ್ ಪಾಯಿಂಟ್ ಮೇಲೆ ಅವರು ಹೆಚ್ಚು ಕೆಲಸ ಮಾಡುತ್ತಾರೆ. ಇದೇ ಅವರಿಗೆ ವರದಾನವಾಗುತ್ತಿದೆ” ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ಕೂಡ ಟೀಮ್ ಇಂಡಿಯಾವನ್ನು ಶ್ಲಾಘಿಸಿದ್ದಾರೆ. ಯಾವುದೇ ನೆಲದಲ್ಲಿ 20 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದು ಹೇಳಿದ್ದಾರೆ. “ವಿಶ್ವದ ಯಾವುದೇ ಭಾಗದಲ್ಲಿ ಆಡಿದರೂ ಪಂದ್ಯದ 20 ವಿಕೆಟ್‌ಗಳನ್ನು ಕಬಳಿಸುವ ಅದ್ಭುತವಾದ ಬೌಲಿಂಗ್ ವಿಭಾಗ ಭಾರತ ತಂಡದಲ್ಲಿದೆ. ಗೆಲುವು ಪಡೆದ ಟೀಮ್ ಇಂಡಿಯಾಗೆ ಅಭಿನಂದನೆ. ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಮೊಹಮ್ಮದ್ ಶಮಿ ತಮ್ಮ ಬೌಲಿಂಗ್ ಮೂಲಕ ಸಮಸ್ಯೆಯನ್ನು ತಂದೊಡ್ಡಿದ್ದರು. ನಿಸ್ಸಂಶಯವಾಗಿ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಪಡೆದಿದ್ದ ವಿಕೆಟ್‌ಗಳು ನಮ್ಮ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಬುಮ್ರಾ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಓಡುವ ಅಥವಾ ಓಡದೇ ಇದ್ದರೂ ಅಧಿಕ ಶಕ್ತಿಯಿಂದ ಬೌಲ್ ಮಾಡುತ್ತಾರೆ,” ಎಂದು ಸಚಿನ್ ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs South Africa) ಐತಿಹಾಸಿಕ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 211 ರನ್ ಅಗತ್ಯವಿತ್ತು. ಆದರೆ, ಭಾರತದ ಬೌಲಿಂಗ್ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ತಂಡ 68 ಓವರ್‌ಗಳಿಗೆ 191 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಒಪ್ಪಿಕೊಂಡಿತು. ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ನಾಲ್ಕನೇ ಟೆಸ್ಟ್ ಗೆಲುವು ಇದಾಯಿತು. ಇದೀಗ ಜೊಹಾನ್ಸ್ಬರ್ಗ್ನಲ್ಲಿ ಎರಡನೇ ಫೈಟ್ಗೆ ಭಾರತ ಸಜ್ಜಾಗುತ್ತಿದೆ.
KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್
(Salman Butt said that the Virat Kohli-led side are setting a benchmark by dominating top teams in their backyard)