ರಾಯಚೂರು: 22 ರಾಜ್ಯಗಳಲ್ಲಿ ಕರಾಮತ್ತು ತೋರಿದ್ದ ಮೋಸಗಾತಿಯ ಬಂಧನ; ಒಂದಲ್ಲ, ಎರಡಲ್ಲ ಇವಳ ಆಟ

| Updated By: ಆಯೇಷಾ ಬಾನು

Updated on: Nov 30, 2022 | 12:26 PM

ಆರೋಪಿ ನಿಹಾರಿಕಾ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಆಂಧ್ರದ ಯುವತಿಯರನ್ನ ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಳು.

ರಾಯಚೂರು: 22 ರಾಜ್ಯಗಳಲ್ಲಿ ಕರಾಮತ್ತು ತೋರಿದ್ದ ಮೋಸಗಾತಿಯ ಬಂಧನ; ಒಂದಲ್ಲ, ಎರಡಲ್ಲ ಇವಳ ಆಟ
ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದ ವಸ್ತುಗಳು
Follow us on

ರಾಯಚೂರು: 22 ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಖತರ್ನಾಕ್ ಕಿಲಾಡಿ ಮಹಿಳೆ ಹಾಗೂ ಆಕೆಯ ಗ್ಯಾಂಗನ್ನು ಇದೇ ಮೊದಲ ಬಾರಿಗೆ ಸಿಂಧನೂರು ಪೊಲೀಸರು ಬಂಧಿಸಿದ್ದಾರೆ. ಸುಜಾತಾ ಅಲಿಯಾಸ್ ನಿಹಾರಿಕಾ ಬಂಧಿತ ಮಹಿಳೆ. ಈಕೆ ಮಾಡೋದು ವೇಶ್ಯಾವಾಟಿಕೆ ದಂಧೆ. ಆದ್ರೆ ಹೇಳ್ಕೊಳ್ಳೋದು ಬ್ಯಾಂಕ್ ಉದ್ಯೋಗಿ, ಇವೆಂಟ್ ಮ್ಯಾನೇಜ್ಮೆಂಟ್ ಮಾಡುವವರು ಅಂತ. ಸದ್ಯ 45 ದಿನಗಳ ಕಾರ್ಯಾಚರಣೆ ಬಳಿಕ ರಾಯಚೂರು ಜಿಲ್ಲೆ‌ ಸಿಂಧನೂರು ಉಪ ವಿಭಾಗದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿ ನಿಹಾರಿಕಾ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಆಂಧ್ರದ ಯುವತಿಯರನ್ನ ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ರಾಯಚೂರು, ಮಾನ್ವಿ, ಸಿಂಧನೂರು ಪಟ್ಟಣಗಳಲ್ಲಿ ಈಕೆ ಮನೆ ಮಾಡಿದ್ದಳು. ಗ್ರಾಹಕರು, ಮನೆ ಮಾಲೀಕರು, ಅವರ ಪರಿಚಯಸ್ಥ ಶ್ರೀಮಂತರ ಮಾಹಿತಿ ಸಂಗ್ರಹಿಸಿ ವಂಚನೆ ಎಸಗುತ್ತಿದ್ದಳು.

ಇದನ್ನೂ ಓದಿ: ಕಡಿಮೆ ಬೆಲೆಗೆ ಚಿನ್ನ, ಐಫೋನ್​, ಲ್ಯಾಪ್​ ಟಾಪ್​ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ದೋಚಿ ಸಿಕ್ಕಿಬಿದ್ದ ಖತರ್ನಾಕ್ ದಂಪತಿ

ಗ್ರಾಹಕರೊಬ್ಬರ ಸಹಾಯದಿಂದ ಸಿಂಧನೂರಿನ ಶಿವಾನಂದ ಅನ್ನೋರ ಮನೆಯಲ್ಲಿ ಮೊದಲು ಬಾಡಿಕೆ ಪಡೆದ ನಿಹಾರಿಕ ನಂತರ ಮನೆ ಮಾಲೀಕ ಶಿವಾನಂದ ಜೊತೆ ಪ್ರೀತಿಯ ಆಟ ಆಡಿದ್ದಾಳೆ. ಬಳಿಕ ಆತನ ಮನೆಯಲ್ಲೂ ಡಕಾಯಿತಿ ಮಾಡಿದ್ದಾಳೆ. ಬ್ಯಾಂಕ್ ಸಿಬ್ಬಂದಿ ಅಂತ ಊರೂರು ಸುತ್ತಿ ಶ್ರೀಮಂತರ ಮನೆಗಳನ್ನು ಪತ್ತೆ ಹಚ್ಚಿ ನಂತರ ಆಂಧ್ರದಿಂದ ಮೂವರು ಟೀಂ ಮೇಟ್ಸ್ ಕರೆಸಿಕೊಂಡು ಡಕಾಯಿತಿ, ಕಳ್ಳತನ ಕೃತ್ಯಕ್ಕೆ ಕೈ ಹಾಕಿದ್ದಾಳೆ. ನಂತರ ಆನ್ ಲೈನ್‌ನಲ್ಲಿ ನಕಲಿ ಪಿಸ್ತೂಲ್ ಖರೀದಿಸಿ ಆ ನಕಲಿ ಪಿಸ್ತೂಲ್ ಮೂಲಕ ಭಾಸ್ಕರ್ ಅನ್ನೋರ ಮನೆಯಲ್ಲಿ ಡಕಾಯಿತಿ ಮಾಡಿದ್ದಾಳೆ. ಈ ಗ್ಯಾಂಗ್ ವಿರುದ್ಧ ಆಂಧ್ರದಲ್ಲಿ ಸುಮಾರು 25 ಕೇಸ್ ದಾಖಲಾಗಿವೆ. ಇದೇ ಮೊದಲ ಬಾರಿಗೆ ಕರ್ನಾಟಕ ಪೊಲೀಸರ ಕೈಗೆ ನಿಹಾರಿಕಾ ಸಿಕ್ಕಿಬಿದ್ದಿದ್ದಾಳೆ. ಬಂಧಿತರಿಂದ 25 ಲಕ್ಷ ಮೌಲ್ಯದ 520 ಗ್ರಾಂ ಚಿನ್ನಾಭರಣ, 1 ಲಕ್ಷ ನಗದು, 3 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ವ್ಯಕ್ತಿ

ರಾಬರಿ ಗ್ಯಾಂಗ್ ಅರೆಸ್ಟ್

ಮತ್ತೊಂದೆಡೆ ಪಟಾಕಿ ಅಂಗಡಿ ಮಾಲೀಕನನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನ ತೋರಿಸಿ ದರೋಡೆ ನಡೆಸಿದ್ದ ಗ್ಯಾಂಗನ್ನು ಅತ್ತಿಬೆಲೆ ಪೋಲೀಸರು ಬಂಧಿಸಿದ್ದಾರೆ. ಅಜಯ್, ಯಮನೂರು ನಾಯ್ಕ, ನವೀನ್, ಜೊಬಿನ್, ಗೌತನ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ 16 ಸಾವಿರ ನಗದು, ಒಂದು ಲಾಂಗ್, ಎರಡು ದ್ವಿಚಕ್ರ ವಾಹನ, ಐದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಅಂಗಡಿ ಮಾಲೀಕ ಚಂದ್ರಶೇಖರ್ ಚಲನವಲನ ಗಮನಿಸಿ ಅಡ್ಡಗಟ್ಟಿ ಈ ಗ್ಯಾಂಗ್ ಸುಲಿಗೆ ಮಾಡಿತ್ತು. ಮಹೇಂದ್ರ ಕಾರಿನಲ್ಲಿ ತಮಿಳುನಾಡಿನ ಹೊಸೂರು ಕಡೆ ಹೊರಟಿದ್ದ ಚಂದ್ರಶೇಖರ್ ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 20 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದರು. ಐಷಾರಾಮಿ ಜೀವನ ನಡೆಸಲು ಕೃತ್ಯ ಎಸಗಿದ್ದ ಖದೀಮರ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಅಜಯ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಲೆ ಮತ್ತು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

Published On - 11:08 am, Wed, 30 November 22