Video Viral: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ವ್ಯಕ್ತಿ
40 ವರ್ಷದ ವ್ಯಕ್ತಿಯೊಬ್ಬರು ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಈ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನವೆಂಬರ್ 25 ರಂದು ನಡೆದಿದೆ. ನೃತ್ಯ ಮಾಡುವಾಗ ವ್ಯಕ್ತಿ ಕುಸಿದು ಬೀಳುವ ವಿಡಿಯೋ ಈಗ ವೈರಲ್ ಆಗಿದೆ.
ವಾರಣಾಸಿ: 40 ವರ್ಷದ ವ್ಯಕ್ತಿಯೊಬ್ಬರು ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಈ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನವೆಂಬರ್ 25 ರಂದು ನಡೆದಿದೆ. ನೃತ್ಯ ಮಾಡುವಾಗ ವ್ಯಕ್ತಿ ಕುಸಿದು ಬೀಳುವ ವಿಡಿಯೋ ಈಗ ವೈರಲ್ ಆಗಿದೆ.
ಸಾವನ್ನಪ್ಪಿರುವ ವ್ಯಕ್ತಿ ಮನೋಜ್ ವಿಶ್ವಕರ್ಮ ಎಂದು ಗುರುತಿಸಲಾದೆ ಮನೋಜ್ ವಿಶ್ವಕರ್ಮ ಪಿಲ್ಪಾನಿ ಕತ್ರಾ ಬಳಿ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರೊಂದಿಗೆ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನು ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಏಕೆ? ಹೃದ್ರೋಗಿಗಳು ಹೇಗೆ ಕಾಳಜಿವಹಿಸಬೇಕು?
एक और हंसते-गाते-नाचते मौत LIVE
वाराणसी में शादी में डांस करते हुए एक व्यक्ति की मौक़े पर मौत।
कितनी ऐसी मौत के बाद हमें एहसास होगा कि इसपर चिंता करने की ज़रूरत है pic.twitter.com/NvwdaXzwk3
— Narendra nath mishra (@iamnarendranath) November 29, 2022
ಕಳೆದ ತಿಂಗಳು ಇದೇ ರೀತಿಯ ಘಟನೆಯಲ್ಲಿ, 51 ವರ್ಷದ ವ್ಯಕ್ತಿಯೊಬ್ಬರು ದಾಹೋದ್ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಸಾವನ್ನಪ್ಪಿದರು. ಯುವಕರಲ್ಲಿ ಹೃದಯಾಘಾತವು ಹೆಚ್ಚು ಸಾಮಾನ್ಯವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಗಾಯಕ ಕೆಕೆ ಸೇರಿದಂತೆ ಹಲವಾರು ಯುವ ಸೆಲೆಬ್ರಿಟಿಗಳು ಹೃದಯ ಸ್ತಂಭನದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಹೃದಯಾಘಾತಗೊಂಡ ತಂದೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕಾರು ಅಪಘಾತ
ಬಹ್ಲೋಲ್‌ಪುರ ಗ್ರಾಮದಿಂದ ಭೂಪ್ ಸಿಂಗ್ (58) ಅವರು ತಮ್ಮ ಮಗ ಪ್ರದೀಪ್, ಸೊಸೆ ಮತ್ತು 9 ವರ್ಷದ ಮೊಮ್ಮಗಳೊಂದಿಗೆ ಉತ್ತರ ಪ್ರದೇಶದ ಪಚೌಟಾ ದೇವಸ್ಥಾನಕ್ಕೆ ಹೋಗುತ್ತಿರುವಾಗ ಪಚೌಟಾದಲ್ಲಿ ಭೂಪ್ ಸಿಂಗ್ಗೆ ಹೃದಯಾಘಾತವಾಗಿದೆ ಎಂದು ದಾದ್ರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಉಮೇಶ್ ಬಹರ್ದೂರ್ ಸಿಂಗ್ ತಿಳಿಸಿದ್ದಾರೆ.
ವಾಹನ ಚಲಾಯಿಸುತ್ತಿದ್ದ ಪ್ರದೀಪ್, ಪಚೌಟಾದಲ್ಲಿ ತನ್ನ ತಂದೆಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ನೋಯ್ಡಾದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ದಾದ್ರಿಯಲ್ಲಿ ವಾಹನದ ನಿಯಂತ್ರಣ ತಪ್ಪಿದ ಪ್ರದೀಪ್ ಕಾರು ಹಳ್ಳಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೃದಯಾಘಾತದಿಂದ ನಿಧನ
ಪೊಲೀಸರ ಪ್ರಕಾರ, ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಾರೊಂದು ಹಳ್ಳಕ್ಕೆ ಬಿದ್ದಿರುವ ಬಗ್ಗೆ ಕರೆ ಬಂದಿತ್ತು. ದಾದ್ರಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿತು ಮತ್ತು ನಾಲ್ವರನ್ನು ಅಪಘಾತಗೊಂಡ ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದರು.
ಘಟನೆಯಲ್ಲಿ ಪ್ರದೀಪ್ ಅವರ ಪತ್ನಿ ಮತ್ತು ತಂದೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರದೀಪ್ ಅವರ ಪತ್ನಿಯನ್ನು ಅಶೋಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಭೂಪ್ ಸಿಂಗ್ ಅವರನ್ನು ಗಾಜಿಯಾಬಾದ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರನ್ನು ಆಸ್ಪತ್ರೆ ಸಾಗಿಸುವ ಹೊತ್ತಿಗೆ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Wed, 30 November 22