AIIMS Cyber Attack: ಏಮ್ಸ್ನ ಇ-ಆಸ್ಪತ್ರೆಯ ಡೇಟಾ ಮರುಸ್ಥಾಪನೆ; 8ನೇ ದಿನವೂ ಸರ್ವರ್ ಡೌನ್
ಸತತ 8ನೇ ದಿನವೂ ದೆಹಲಿಯ ಏಮ್ಸ್ ಸರ್ವರ್ ಕೆಟ್ಟು ನಿಂತಿದೆ. ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದ್ದರೂ, ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಇನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ.
ನವದೆಹಲಿ: ದೆಹಲಿಯ ಏಮ್ಸ್ನ (AIIMS) ಇ-ಆಸ್ಪತ್ರೆಯ ಡೇಟಾ ಸರ್ವರ್ ಅನ್ನು ಪುನರ್ಸ್ಥಾಪನೆ ಮಾಡಲಾಗಿದೆ. ಡೇಟಾ ಕಳವು ಆಗದಂತೆ ಸೈಬರ್ (Delhi Cyber Attack) ಸಿಬ್ಬಂದಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ದೆಹಲಿಯ ಏಮ್ಸ್ನ ಇ-ಆಸ್ಪತ್ರೆಯ ಡೇಟಾ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ನ ಇ-ಆಸ್ಪತ್ರೆ ಡೇಟಾ ಸರ್ವರ್ ಹ್ಯಾಕ್ ಆಗಿದೆ. ಸತತ 8ನೇ ದಿನವೂ ಏಮ್ಸ್ ಸರ್ವರ್ ಡೌನ್ ಆಗಿದ್ದು, ಡೇಟಾ ಪರಿಶೀಲನೆ ವೇಳೆ ವಿದೇಶದ ವಿಳಾಸ ಪತ್ತೆಯಾಗಿದೆ.
ಸತತ 8ನೇ ದಿನವೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ದೆಹಲಿಯ ಸರ್ವರ್ ಕೆಟ್ಟು ನಿಂತಿದೆ. ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದ್ದರೂ, ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಇನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸೈಬರ್ ದಾಳಿಯನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೊರರೋಗಿ, ಒಳರೋಗಿ, ಪ್ರಯೋಗಾಲಯಗಳು ಸೇರಿದಂತೆ ಎಲ್ಲಾ ಆಸ್ಪತ್ರೆ ಸೇವೆಗಳು ಸದ್ಯಕ್ಕೆ ಮ್ಯಾನ್ಯುವಲ್ ಮೋಡ್‌ನಲ್ಲಿ ನಡೆಯಲಿವೆ.
ಇದನ್ನೂ ಓದಿ: Lalu Prasad Yadav: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಏಮ್ಸ್ ಆಸ್ಪತ್ರೆಗೆ ಶಿಫ್ಟ್
ಇ-ಹಾಸ್ಪಿಟಲ್ ಡೇಟಾವನ್ನು ಸರ್ವರ್‌ಗಳಲ್ಲಿ ಮರುಸ್ಥಾಪಿಸಲಾಗಿದೆ. ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಡೇಟಾದ ಪ್ರಮಾಣ ಮತ್ತು ಆಸ್ಪತ್ರೆಯ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯ ಸರ್ವರ್‌ಗಳು/ಕಂಪ್ಯೂಟರ್‌ಗಳ ಕಾರಣ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಸೈಬರ್ ಭದ್ರತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಏಮ್ಸ್ ಹೇಳಿಕೆ ನೀಡಿದೆ.
The eHospital data has been restored on servers. Network being sanitized before services can be restored. The process is taking some time due to the volume of data and large number of servers/computers for the hospital services. Measures are being taken for cyber security: AIIMS pic.twitter.com/w8Rk8hwOa7
— ANI (@ANI) November 29, 2022
ಇದನ್ನೂ ಓದಿ: AIIMS: ಕರ್ನಾಟಕದಲ್ಲಿ ಏಮ್ಸ್ ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಒಪ್ಪಿಗೆ
ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ತನಿಖೆಗೆ ಕೈಜೋಡಿಸಿದೆ. ಇಂಡಿಯಾ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್, ದೆಹಲಿ ಪೊಲೀಸ್, ಇಂಟೆಲಿಜೆನ್ಸ್ ಬ್ಯೂರೋ, ಸಿಬಿಐ ಮತ್ತು ಗೃಹ ಸಚಿವಾಲಯದ ಪ್ರತಿನಿಧಿಗಳು ಈಗಾಗಲೇ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖಾ ಸಂಸ್ಥೆಗಳ ಶಿಫಾರಸುಗಳ ನಂತರ ದೆಹಲಿಯ ಏಮ್ಸ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Wed, 30 November 22