AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನಲ್ಲೂ ಒಂದಾದ ತಂದೆ-ಮಗ: ಹೃದಯಾಘಾತದಿಂದ ತಂದೆ ನಿಧನ; ಅಪ್ಪನ ಅಗಲಿಕೆಯ ನೋವು ತಡೆಯಲಾಗದೆ ಲೋ ಬಿಪಿಯಿಂದ ಮಗನೂ ಸಾವು

ರಾಯಚೂರಿನ ತಿಪ್ಪನಹಟ್ಟಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆ ಅಮೀನ್ ಸಾಬ್ ಹೃದಯಾಘಾತದಿಂದ ನಿಧನರಾದ ಬೆನ್ನಲ್ಲೇ, ಮಗ ಮೆಹಬೂಬ್ ಸಾಬ್ ತೀವ್ರ ದುಃಖದಿಂದ ರಕ್ತದೊತ್ತಡ ಕುಸಿದು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಇಬ್ಬರ ಅಗಲಿಕೆಯಿಂದ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಇದೇ ರೀತಿ ಹಾವೇರಿಯಲ್ಲೂ ಸ್ನೇಹಿತರ ದುರಂತ ಸಾವು ಸಂಭವಿಸಿದೆ.

ಸಾವಿನಲ್ಲೂ ಒಂದಾದ ತಂದೆ-ಮಗ: ಹೃದಯಾಘಾತದಿಂದ ತಂದೆ ನಿಧನ; ಅಪ್ಪನ ಅಗಲಿಕೆಯ ನೋವು ತಡೆಯಲಾಗದೆ ಲೋ ಬಿಪಿಯಿಂದ ಮಗನೂ ಸಾವು
ತಂದೆ ಮಗ ಸಾವುImage Credit source: Tv9 kannada
ಭೀಮೇಶ್​​ ಪೂಜಾರ್
| Edited By: |

Updated on:Nov 16, 2026 | 8:09 AM

Share

ರಾಯಚೂರು, ನ.16: ತಂದೆಯ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗದೆ ಮಗನೂ ಕೊನೆಯುಸಿರೆಳೆದು ತಂದೆ-ಮಗ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಂದೆ ಅಮೀನ್ ಸಾಬ್ (58) ಹಾಗೂ ಪುತ್ರ ಮೆಹಬೂಬ್ ಸಾಬ್ (37) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಇಬ್ಬರು ಆಧಾರಸ್ತಂಭಗಳನ್ನು ಕಳೆದುಕೊಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.

ತಿಪ್ಪನಹಟ್ಟಿ ಗ್ರಾಮದ ನಿವಾಸಿ ಅಮೀನ್ ಸಾಬ್ (58) ಅವರಿಗೆ ನಿನ್ನೆ (ನವೆಂಬರ್ 15) ದಿಢೀರ್ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು. ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪುತ್ರ ಮೆಹಬೂಬ್ ಸಾಬ್ (37) ತೀವ್ರ ಆಘಾತಕ್ಕೊಳಗಾಗಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾರೆ. ತಂದೆಯ ಅಗಲಿಕೆಯ ದುಃಖವನ್ನು ತಡೆಯಲಾಗದೆ ಮೆಹಬೂಬ್ ಸಾಬ್ ತೀವ್ರವಾಗಿ ನಿತ್ರಾಣಗೊಂಡಿದ್ದು, ಇದೇ ವೇಳೆ ಅವರ ರಕ್ತದೊತ್ತಡ ದಿಢೀರ್ ಕುಸಿದು ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರಾದರೂ, ಮಾರ್ಗಮಧ್ಯೆಯೇ ಮೆಹಬೂಬ್ ಸಾಬ್ ಕೊನೆಯುಸಿರೆಳೆದಿದ್ದಾರೆ. ಬಳಿಕ ಸ್ವಗ್ರಾಮ ತಿಪ್ಪನಹಟ್ಟಿಯಲ್ಲಿ ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಆತ್ಮೀಯ ಸ್ನೇಹಿತರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಯುವಕರ ಅಂತ್ಯಕ್ರಿಯೆ ಒಟ್ಟಿಗೇ ನೆರವೇರಿಸಿದ ಪೋಷಕರು

ಹಾವೇರಿಯ ಮರೋಳದಲ್ಲೂ ಸಾವಿನಲ್ಲೂ ಒಂದಾದ ಸ್ನೇಹಿತರು ಮನಮಿಡಿಯುವ ಘಟನೆ:

ಇದೇ ರೀತಿಯ ಮತ್ತೊಂದು ಮನಕಲಕುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆತ್ಮೀಯ ಸ್ನೇಹಿತರಾದ ಅಭಿಷೇಕ್ ಮಾಗಡಿ ಮತ್ತು ಮುತ್ತು ಹುಲಿಕಟ್ಟಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದ ಇವರ ಅಂತ್ಯಕ್ರಿಯೆಯನ್ನು ಪೋಷಕರು ಸ್ವಗ್ರಾಮ ಮರೋಳದಲ್ಲಿ ಒಂದೇ ಕಡೆ, ಒಟ್ಟಿಗೇ ನೆರವೇರಿಸಿದ್ದಾರೆ. ಬದುಕಿದ್ದಾಗ ಸದಾ ಜೊತೆಯಲ್ಲೇ ಇರುತ್ತಿದ್ದ ಗೆಳೆಯರ ದುರಂತ ಸಾವು ಮತ್ತು ಒಂದೇ ಕಡೆ ನಡೆದ ಅಂತ್ಯಕ್ರಿಯೆ ಇಡೀ ಗ್ರಾಮವನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Mon, 16 November 26

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More