ರಾಯಚೂರು: ಒಣಗಿದ ಬೆಳೆಗೆ ಜೀವ ಕೊಟ್ಟ ಅಕಾಲಿಕ ಮಳೆ, ಮೋಡ ಬಿತ್ತನೆ ಪ್ರಸ್ತಾವನೆ ಇಲ್ಲ ಎಂದ ಕೃಷಿ ಸಚಿವ

ಇಡೀ ರಾಜ್ಯಾದ್ಯಂತ ಬರಗಾಲದ ಛಾಯೆ ಇದೆ. ಇಡೀ ರಾಜ್ಯದ ರೈತರು ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾಗಿದ್ದು ಬರಗಾಲದ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದ್ರೆ ಮಳೆ ಅಭಾವ ಇರೋದ್ರಿಂದ ಮೋಡ ಬಿತ್ತನೆ ಮಾಡ್ಬೇಕಿತ್ತು ಅನ್ನೋ ಚರ್ಚೆ ನಡೀತಿದೆ.

ರಾಯಚೂರು: ಒಣಗಿದ ಬೆಳೆಗೆ ಜೀವ ಕೊಟ್ಟ ಅಕಾಲಿಕ ಮಳೆ, ಮೋಡ ಬಿತ್ತನೆ ಪ್ರಸ್ತಾವನೆ ಇಲ್ಲ ಎಂದ ಕೃಷಿ ಸಚಿವ
ಒಣಗಿದ ಬೆಳೆ
Follow us
ಭೀಮೇಶ್​​ ಪೂಜಾರ್
| Updated By: Ganapathi Sharma

Updated on: Nov 09, 2023 | 9:33 PM

ರಾಯಚೂರು, ನವೆಂಬರ್ 9: ಬಿಸಿಲುನಾಡು ರಾಯಚೂರಿನಲ್ಲಿ (Raichur) ತೀವ್ರ ಬರಗಾಲಕ್ಕೆ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ, ನೀರಿಲ್ಲದೇ ಒಣಗುತ್ತಿದ್ದ ಬೆಳೆಗಳಿಗೆ ಅಕಾಲಿಕ (Raichur Rains) ಮಳೆ ಜೀವ ಕಳೆ ತುಂಬಿದೆ. ಇತ್ತ ಮೊಡ ಬಿತ್ತನೆ ಪ್ರಸ್ತಾಪ ಸರ್ಕಾರದ ಎದುರು ಇಲ್ಲ ಅಂತ ಕೃಷಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಲಕ್ಷಾಂತರ ರೂ. ಸಾಲ ಸೋಲ ಮಾಡಿ ಬಿತ್ತಿದ್ದ ಬೆಳೆ ರೈತರ ಕಣ್ಣೇದುರೇ ಹಾಳಾಗುತ್ತಿತ್ತು. ಹೀಗಾಗಿ ರೈತರು ಈ ಬಾರಿ ಸಾಲದ ಸುಳಿಗೆ ಸಿಲುಕುವ ಭಯದಲ್ಲಿದ್ದಾರೆ. ಬಿತ್ತಿ ಬೆಳೆದ ಬೆಳೆಗೆ ರೈತರು ಕೆರೆ, ಬಾವಿಗಳಿಂದಲೂ ನೀರು ತಂದು ನೀರುಣಿಸೊ ಯತ್ನ ಕೂಡ ಮಾಡಿದ್ದಾರೆ. ಈ ಮಧ್ಯೆ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ಬಹುತೇಕ ಕಡೆ ಬೆಳೆ ಇನ್ನೂ ಒಣಗುತ್ತಲೇ ಇದೆ. ಇತ್ತ ಮೊದ ಮೊದಲು ಕಾಳುವೆಗೆ ನೀರು ಹರಿಸದೇ ಇದ್ದದ್ದರಿಂದ ಬೆಳೆ ಹಾಳಾಗೋಕೆ ಪ್ರಮುಖ ಕಾರಣವೂ ಹೌದು. ಹೀಗಾಗಿ ರೈತರು ಆತ್ಮಹತ್ಯೆಯೊಂದೇ ದಾರಿ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಡೀ ರಾಜ್ಯಾದ್ಯಂತ ಬರಗಾಲದ ಛಾಯೆ ಇದೆ. ಇಡೀ ರಾಜ್ಯದ ರೈತರು ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾಗಿದ್ದು ಬರಗಾಲದ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದ್ರೆ ಮಳೆ ಅಭಾವ ಇರೋದ್ರಿಂದ ಮೋಡ ಬಿತ್ತನೆ ಮಾಡ್ಬೇಕಿತ್ತು ಅನ್ನೋ ಚರ್ಚೆ ನಡೀತಿದೆ. ಮೋಡ ಬಿತ್ತನೆ ಮಾಡಿದ್ರೆ ಮಳೆಯಾಗ್ತಿತ್ತೆನೋ, ಅದರಿಂದ ಒಣಗುತ್ತಿರೊ ಬೆಳೆಗೆ ಅನಕೂಲವಾಗ್ತಿತ್ತು ಅನ್ನೋ ವಾದವೂ ಇದೆ. ಆದ್ರೆ ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮೋಡ ಬಿತ್ತನೆ ಸಂಬಂಧ ಸರ್ಕಾರದ ಎದುರು ಯಾವುದೇ ಪ್ರಸ್ತಾವಣೆ ಇಲ್ಲ. ಯಾಕಂದ್ರೆ ಈ ಹಿಂದೆ ಮಾಡಲಾಗಿದ್ದ ಮೋಡ ಬಿತ್ತನೆ ಸಕ್ಸಸ್ ಆಗಿಲ್ಲ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ,ರಾಯಚೂರಿನಲ್ಲಿ ರವಿ ಬೋಸರಾಜ್ ಹಾಗೂ ಹಾವೇರಿಯಲ್ಲಿ ಕೋಳಿವಾಡ್ ಮಾಡಿದ್ದಾರೆ. ಸದ್ಯ ಬೆಳೆ ಕಟಾವಿನ ಹಂತಕ್ಕೆ ಬಂದಿರೋದ್ರಿಂದ ಮೋಡ ಬಿತ್ತನೆ ಪ್ರಸ್ತಾವನೆ ಇಲ್ಲ ಅಂತ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಆರಂಭವಾಗಲಿದೆ ಕೃಷಿ ಭಾಗ್ಯ ಯೋಜನೆ: ಸಚಿವ ಸಂಪುಟ ಮಹತ್ವದ ನಿರ್ಧಾರ

ಇತ್ತ ಅಕಾಲಿಕ ಮಳೆಯಿಂದ ಬೆಳೆಗೆ ನೀರು ಸಿಕ್ಕಂತಾಗಿದ್ರೆ ರಾಯಚೂರಿನ ಕೆಲವೆಡೆ ಹೆಚ್ಚಿನ ಮಳೆಯಿಂದ ಬೆಳೆಗಳು ಹಾಳಾಗಿರೊ ಘಟನೆಯೂ ನಡೆದಿದೆ. ಮೆಣಸಿನಕಾಯಿ, ಭತ್ತ ಹಾಗೂ ಕಡಲೆ ಬೆಳೆಗಳು ಹಾಳಾಗಿವೆ. ಅದೆನೇ ಇರ್ಲಿ ರೈತರ ಪರಿಸ್ಥಿತಿ ಮಾತ್ರ ಈ ಬಾರೀ ದೇವರೇ ಬಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ