40 ವರ್ಷಗಳಲ್ಲೇ ರಾಯಚೂರಿನಲ್ಲಿ ಅತೀ ಹೆಚ್ಚು ತಾಪಮಾನ! ನಿತ್ಯ ದಾಖಲಾಗುತ್ತಿದೆ 40c-43c ಟೆಂಪ್ರೇಚರ್

| Updated By: sandhya thejappa

Updated on: Apr 10, 2022 | 10:52 AM

ಮದ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವುದರಿಂದ ಜನರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ಮದ್ಯಾಹ್ನದ ವೇಳೆ ರಸ್ತೆಗಳು ಬಿಕೊ ಎನ್ನುತ್ತಿವೆ. ದೇಹವನ್ನು ತಂಪಾಗಿಸಲು ಜನರು ತಂಪು ಪಾನಿಯಗಳು, ಹಣ್ಣು-ಹಂಪಲುಗಳ ಮೊರೆ ಹೋಗಿದ್ದಾರೆ.

40 ವರ್ಷಗಳಲ್ಲೇ ರಾಯಚೂರಿನಲ್ಲಿ ಅತೀ ಹೆಚ್ಚು ತಾಪಮಾನ! ನಿತ್ಯ ದಾಖಲಾಗುತ್ತಿದೆ 40c-43c ಟೆಂಪ್ರೇಚರ್
ಸಾಂದರ್ಭಿಕ ಚಿತ್ರ
Follow us on

ರಾಯಚೂರ: ರಾಜ್ಯದಲ್ಲೇ ಬಿಸಿಲಿನಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಜಿಲ್ಲೆ ಎಂದರೆ ಅದು ರಾಯಚೂರು (Raichur). ಬೇಸಿಗೆಯಲ್ಲಂತೂ ನೀರು, ಪಾನಕ ಬಿಟ್ಟು ಇರಕ್ಕೆ ಆಗಲ್ಲ. ಇನ್ನು 40 ವರ್ಷಗಳಲ್ಲೇ ಜಿಲ್ಲೆಯಲ್ಲಿ ಅತೀ ಹೆಚ್ಚು ತಾಪಮಾನ (Temperature) ದಾಖಲಾಗಿದೆ. ಪ್ರತಿನಿತ್ಯ 40c-43c ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿಗೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಬಿಸಿಲಿನಿಂದ ಸದ್ಯ ಈಜುಕೊಳಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ. ಮದ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವುದರಿಂದ ಜನರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ಮದ್ಯಾಹ್ನದ ವೇಳೆ ರಸ್ತೆಗಳು ಬಿಕೊ ಎನ್ನುತ್ತಿವೆ.

ದೇಹವನ್ನು ತಂಪಾಗಿಸಲು ಜನರು ತಂಪು ಪಾನಿಯಗಳು, ಹಣ್ಣು-ಹಂಪಲುಗಳ ಮೊರೆ ಹೋಗಿದ್ದಾರೆ. ಮಕ್ಕಳು, ವಯಸ್ಕರು ಈಜುಕೊಳಗಳತ್ತ ಮುಖ ಮಾಡಿದ್ದು, ಗಂಟೆಗೆ ಐವತ್ತು, ನೂರು ರೂಪಾಯಿ ಕೊಟ್ಟು ಮೈ ಹಗುರ ಮಾಡಿಕೊಳುತ್ತಿದ್ದಾರೆ.

ತಜ್ಞರು ಸಲಹೆ:
ಇನ್ನು ಪಾರ್ಕ್​ಗಳಲ್ಲಿನ ಮರ-ಗಿಡಗಳ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜಂಕ್ ಫುಡ್, ಇತರೆ ಕೂಲ್ ಡ್ರಿಂಕ್ಸ್ ಸೇವನೆ ಮಾಡಬೇಡಿ. ಅದರ ಬದಲು ಮಜ್ಜಿಗೆ, ಹಣ್ಣು-ಹಂಪಲು ಸೇವಿಸಿ. ವೃದ್ಧರು, ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅಂತ ತಜ್ಞರು ಸಲಹೆ ನೀಡಿದ್ದಾರೆ.

30-40 ವರ್ಷಗಳ ಸರಾಸರಿ ತಾಪಮಾನಕ್ಕೆ ಹೋಲಿಸಿದರೆ, ಈ ಬಾರೀ ಉಷ್ಣಾಂಶ ಹೆಚ್ಚಿದೆ. ಏಪ್ರಿಲ್, ಮೇನಲ್ಲಿ 40-43c ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ವೃದ್ಧರು-ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದನ-ಕರುಗಳಿಗೆ ನಿತ್ಯ ಮೂರು ಬಾರೀ ಮೈ ತೊಳೆಯಬೇಕು. ಜಂಕ್ ಫುಡ್, ಇನ್ನಿತರ ಕೆಮಿಕಲ್ ಬೇಸ್ಡ್ ಕೂಲ್‌ ಡ್ರಿಂಕ್ಸ್ ಬದಲು ಮಜ್ಜಿಗೆ, ಹಣ್ಣು ಹಂಪಲು ಸೇವಿಸಬೇಕು. ನೀರು ಹೆಚ್ಚಾಗಿ ಕುಡಿಯಬೇಕು ಅಂತ ರಾಯಚೂರು ಕೃಷಿ ವಿವಿಯ ತಾಂತ್ರಿಕ ಅಧಿಕಾರಿ ಶಾಂತಪ್ಪ ದುತ್ತರಗಾಂವಿ ಹೇಳಿದರು.

ಸದ್ಯ ರಾಯಚೂರಿನಲ್ಲಿ 43-44 ಡಿಗ್ರಿ ತಾಪಮಾನವಿದೆ. ಸ್ವಿಮ್ಮಿಂಗ್ ಪೂಲ್​ನತ್ತ ಜನ ಬರುತ್ತಿದ್ದಾರೆ. ಹೆಚ್ಚಾಗಿ ಮಕ್ಕಳಿಗಾಗಿಯೇ ವಿಶೇಷವಾಗಿ ಬ್ಯಾಚ್ ವೈಸ್ ಪದ್ಧತಿ ಮಾಡಿಕೊಳ್ಳಲಾಗಿದೆ. ಕೆರೆ, ನದಿಗಳಲ್ಲಿ ಈಜುವುದು ಅಪಾಯ. ಹೀಗಾಗಿ ಸ್ವಿಮ್ಮಿಂಗ್ ಪೂಲ್​ನತ್ತ ಜನ ಬರುತ್ತಿದ್ದಾರೆ. ವೈದ್ಯರು, ಪೊಲೀಸ್ ಸಿಬ್ಬಂದಿ ಮಕ್ಕಳು ಸೇರಿ ಎಲ್ಲಾ ವರ್ಗದ ಮಕ್ಕಳು ಬರುತ್ತಿದ್ದಾರೆ ಎಂದು ಸ್ವಿಮ್ಮಿಂಗ್ ಪೂಲ್ ಮಾಲೀಕ ಚನ್ನಪ್ಪ ಪಾಟೀಲ್ ತಿಳಿಸಿದರು.

ಇದನ್ನೂ ಓದಿ

ಇಂದು ನಾಡಿನೆಲ್ಲೆಡೆ ರಾಮ ನವಮಿ ಹಬ್ಬದ ಸಂಭ್ರಮ; ದೇವರಿಗೆ ವಿಶೇಷ ಪೂಜೆ

ದೇಶಕ್ಕೆ 100 ಜನ ಮೋದಿ ಬಂದರೂ ಯಾರನ್ನು ದೇಶ ಬಿಡಿಸಲು ಸಾಧ್ಯವಿಲ್ಲ; ಎಲ್ಲರೂ ಸಮಾನವಾಗಿ ಬದುಕುವ ಹಕ್ಕಿದೆ -ಗುಬ್ಬಿ ಶಾಸಕ ಶ್ರೀನಿವಾಸ್

Published On - 10:33 am, Sun, 10 April 22