AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Weather: ಜಿಟಿಜಿಟಿ ಮಳೆ ಮೈಕೊರೆಯುವ ಚಳಿ ತಾಪಮಾನ ಇಳಿಕೆ

ಶಾಲೆ, ಕಾಲೇಜು ಮತ್ತು ಕಚೇರಿ ಕೆಲಸಗಳಿಗೆ ಮನೆಯಿಂದ ಹೊರಡಬೇಕಾಗಿರುವವರು ಚಳಿಗೆ ಅಕ್ಷರಶಃ ನಡುಗುತ್ತಿದ್ದಾರೆ.

Bengaluru Weather: ಜಿಟಿಜಿಟಿ ಮಳೆ ಮೈಕೊರೆಯುವ ಚಳಿ ತಾಪಮಾನ ಇಳಿಕೆ
ಬೆಂಗಳೂರು ಹವಾಮಾನ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 12, 2021 | 10:16 AM

Share

ಬೆಂಗಳೂರು: ನಗರ ಸೇರಿದಂತೆ ಕರ್ನಾಟಕದ ವಿವಿಧೆಡೆ ಗುರುವಾರದಿಂದ ಜುಮುರು ಮಳೆ ಸುರಿಯುತ್ತಿದ್ದು, ಚಳಿ ಹೆಚ್ಚಾಗಿದೆ. ಬೆಂಗಳೂರಿನ ತಾಪಮಾನ ಇಳಿಕೆಯಾಗಿದ್ದು, ಕನಿಷ್ಠ 18 ಡಿಗ್ರಿ, ಗರಿಷ್ಠ 19 ಡಿಗ್ರಿ ಸೆಲ್ಷಿಯಸ್​ಗೆ ಬಂದಿದೆ. ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದು, ಎಲ್ಲೆಡೆ ಸ್ವೆಟರ್ ಧಾರಿಗಳೇ ಕಂಡುಬರುತ್ತಿದ್ದಾರೆ. ಶಾಲೆ, ಕಾಲೇಜು ಮತ್ತು ಕಚೇರಿ ಕೆಲಸಗಳಿಗೆ ಮನೆಯಿಂದ ಹೊರಡಬೇಕಾಗಿರುವವರು ಚಳಿಗೆ ಅಕ್ಷರಶಃ ನಡುಗುತ್ತಿದ್ದಾರೆ.

ಕೆಲವರಿಗೆ ಈ ಚಳಿಗಾಲವು ಹಳೆಯ ನೆನಪುಗಳನ್ನು ಮೊಗೆದುಕೊಟ್ಟಿದೆ. ಎಂಥ ಬೇಸಿಗೆಯಲ್ಲೂ ಬೆಂಗಳೂರು ಬಿಸಿಯಾಗುತ್ತಿರುತ್ತಿರಲಿಲ್ಲ. ಆದರೆ ಈ ಬಾರಿ ಚಳಿಗಾಲದ ಆರಂಭದಲ್ಲಿಯೇ ಇಂಥ ಹವಾಮಾನ ರೂಪುಗೊಂಡಿರುವುದು ಕೆಲವರಿಗೆ ಖುಷಿಕೊಟ್ಟಿದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇದೇ ವಾತಾವರಣ ಮುಂದಿನ ಕೆಲ ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಗರವನ್ನು ಆವರಿಸಿರುವ ಮೋಡ ಚೆದುರುವವರೆಗೆ ಉಷ್ಣಾಂಶ ಏರಿಕೆಯಾಗದು.

ಇನ್ನೂ ಕೆಲ ದಿನಗಳವರೆಗೆ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣದೊಂದಿಗೆ ಹಗುರದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಜುಮುರುಮಳೆಯಿಂದಾಗಿ ಮಂಜುಮುಸುಕಿದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಟ್ರಾಫಿಕ್ ನಿಧಾನಗತಿಯಲ್ಲಿ ಸಂಚರಿಸುವಂತಾಗಿದೆ. ಮಂಜು ಸುರಿಯುತ್ತಿರುವುದರಿಂದ ವಾಹನ ಸವಾರರು ಹೆಡ್​ಲೈಟ್ ಆನ್ ಮಾಡಿಕೊಂಡೇ ಸಂಚರಿಸಬೇಕಾಯಿತು. ಮಾರತ್ತಹಳ್ಳಿ ಮತ್ತು ಮಲ್ಲೇಶ್ವರಂ ಬಡಾವಣೆಗಳಲ್ಲಿ ಮರಗಳು ಉರುಳಿ, ಸಂಚಾರಕ್ಕೆ ಸಮಸ್ಯೆಯಾಯಿತು.

ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ಜನಜೀವನದ ಮೇಲೆ ಪರಿಣಾಮ ಬೀರಿದೆ. ವಾಯುಭಾರ ಕುಸಿತ ಹಿನ್ನಲೆ ಮಳೆಯೊಂದಿಗೆ ಚಳಿಯೂ ಹೆಚ್ಚಾಗಿದ್ದು, ಹೂ, ಹಣ್ಣು, ತರಕಾರಿ, ರಾಗಿ, ನೆಲಗಡಲೆ ಬೆಳೆಗಳು ಹಾಳಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: Karnataka Rain: ಬೆಂಗಳೂರು, ಚಿಕ್ಕಮಗಳೂರು ಸೇರಿ 10 ಜಿಲ್ಲೆಗಳಲ್ಲಿ 4 ದಿನ ವ್ಯಾಪಕ ಮಳೆ; ಯೆಲ್ಲೋ ಅಲರ್ಟ್ ಘೋಷಣೆ ಇದನ್ನೂ ಓದಿ: Karnataka Rain: ಬೆಂಗಳೂರು, ಚಿಕ್ಕಮಗಳೂರು ಸೇರಿ 10 ಜಿಲ್ಲೆಗಳಲ್ಲಿ 4 ದಿನ ವ್ಯಾಪಕ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

Published On - 9:38 am, Fri, 12 November 21

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?