ಹಾವುಗಳಿಗೆ ಬಿಡುಗಡೆಯ ಭಾಗ್ಯ: ರಾಯಚೂರಿನಲ್ಲಿ ಹಾವಿನ ಉದ್ಯಾನವನ ನಡೆಸುವ ಆಸೆ ಹರಿಯಬಿಟ್ಟ ಉರಗತಜ್ಞ ಅಫ್ಸರ್ ಹುಸೇನ್

| Updated By: ಆಯೇಷಾ ಬಾನು

Updated on: Aug 27, 2021 | 3:50 PM

ಕಳೆದ 31 ವರ್ಷಗಳಿಂದ ಇಂತಹ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಉರಗ ತಜ್ಞ ಅಫ್ಸರ್ ಹುಸೇನ್ ರಕ್ಷಿಸಿದ ಹಾವುಗಳನ್ನು ಕಾಡಿಗೆ ಬಿಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಹಾವುಗಳಿಗೆ ಬಿಡುಗಡೆಯ ಭಾಗ್ಯ: ರಾಯಚೂರಿನಲ್ಲಿ ಹಾವಿನ ಉದ್ಯಾನವನ ನಡೆಸುವ ಆಸೆ ಹರಿಯಬಿಟ್ಟ ಉರಗತಜ್ಞ ಅಫ್ಸರ್ ಹುಸೇನ್
ಹಾವು ಬಿಡುಗಡೆ ಕಾರ್ಯಕ್ರಮ; ರಾಯಚೂರಿನಲ್ಲಿ ಹಾವಿನ ಉದ್ಯಾನವನ ನಡೆಸುವ ಆಸೆ ಹೊರ ಹಾಕಿದ ಉರಗ ತಜ್ಞ ಅಫ್ಸರ್ ಹುಸೇನ್
Follow us on

ರಾಯಚೂರು: ವೈಲ್ಡ್ ಲೈಫ್ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಯಚೂರಿನ ಉರಗ ತಜ್ಞ ಅಫ್ಸರ್ ಹುಸೇನ್ ತಾವು ಹಿಡಿದಿದ್ದ ಹಾವುಗಳನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ. ನಗರದ ವಿಭಿನ್ನ ಪ್ರದೇಶಗಳಿಂದ ರಕ್ಷಿಸಿದ್ದ ಸುಮಾರು 63 ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಕಳೆದ 31 ವರ್ಷಗಳಿಂದ ಇಂತಹ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಉರಗ ತಜ್ಞ ಅಫ್ಸರ್ ಹುಸೇನ್ ರಕ್ಷಿಸಿದ ಹಾವುಗಳನ್ನು ಕಾಡಿಗೆ ಬಿಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇನ್ನು ಹಾವು ಬಿಡುಗಡೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನದ ಜೊತೆಗೆ ಮುಂದಿನ ದಿನಗಳಲ್ಲಿ ರಾಯಚೂರು ನಗರದಲ್ಲಿ ಹಾವಿನ ಉದ್ಯಾನವನ ನಡೆಸುವ ಉದ್ದೇಶವನ್ನು ಹುಸೇನ್ ಹೊರ ಹಾಕಿದ್ದಾರೆ. ಹೀಗಾಗಿ ಜನರಿಗೆ ವಿಶೇಷವಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಈ ಕಾರ್ಯಕ್ರಮ ಸಹಾಯಕವಾಗಿದೆ. ಹಾಗೂ ಎಲ್ಲಾ ರಾಜಕಾರಣಿಗಳು ಮತ್ತು ಸಾಮಾಜಿಕ ಮುಖಂಡರು ಈ ಉದಾತ್ತ ಉದ್ದೇಶಕ್ಕಾಗಿ ಸಹಾಯ ಮಾಡಬೇಕು ಎಂದು ಹುಸೇನ್ ವಿನಂತಿಸಿದ್ದಾರೆ.

ಹಾವು ಕಂಡರೆ ಹೊಡೆಯಬೇಡಿ ನಮಗೆ ಕರೆ ಮಾಡಿ 9900127861 ಎಂದು ಹುಸೇನ್ ಜನರಲ್ಲಿ ಕೇಳಿ ಕೊಂಡಿದ್ದಾರೆ. ಹಾವು ಬಿಡುಗಡೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೆಲ ಗಣ್ಯರು ಉಪಸ್ಥಿತರಿದ್ದರು. ರಾಯಚೂರ ನಗರದ ಮಲಿಯಾಬಾದ ಮೀಸಲು ಅರಣ್ಯದಲ್ಲಿ ಎಸ್ಪಿ ಪ್ರಕಾಶ ನಿಕ್ಕಂ ಹಾವು ಬಿಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹಾವುಗಳ ಬಗ್ಗೆ ಮಾಹಿತಿ ನೀಡುತ್ತಿರುವುದು

ಇದನ್ನೂ ಓದಿ: ವಿಷಪೂರಿತ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ ವ್ಯಕ್ತಿ; ನೋವು ತಾಳಲಾರದೇ ಸತ್ತ ಹಾವು