ರಾಯಚೂರು ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು; ವೃದ್ಧೆ ಮೃತಪಟ್ಟ 6 ತಿಂಗಳ ಬಳಿಕ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿದ ಇಲಾಖೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆಯಲ್ಲಿ 52 ವರ್ಷದ ಪಾರ್ವತಮ್ಮ ಮೃತಪಟ್ಟಿದ್ದರು. ಇದೇ 2021 ಮೇ 25 ಕ್ಕೆ ಪಾರ್ವತಮ್ಮ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು ಆಗಿದೆ. ವೃದ್ಧೆ ಮೃತಪಟ್ಟು ಸುಮಾರು 6 ತಿಂಗಳ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿದೆ. ಕೊರೊನಾದಿಂದ ಸಾವನ್ನಪ್ಪಿದ್ದಾರೆಂದು ಖಾಸಗಿ ಆಸ್ಪತ್ರೆ ದೃಢೀಕರಿಸಿದೆ. ಆದರೆ ವೃದ್ಧೆ ಸಾವನ್ನಪ್ಪಿ 6 ತಿಂಗಳ ನಂತರ ಆರೋಗ್ಯ ಇಲಾಖೆಯಿಂದ ನೆಗೆಟಿವ್ ವರದಿ ಬಂದಿದೆ. ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆ ಆಟವಾಡುತ್ತಿವೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೆರೆಯಲ್ಲಿ 52 ವರ್ಷದ ಪಾರ್ವತಮ್ಮ ಮೃತಪಟ್ಟಿದ್ದರು. ಇದೇ 2021 ಮೇ 25 ಕ್ಕೆ ಪಾರ್ವತಮ್ಮ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದೆ ಅಂತ ಖಾಸಗಿ ಆಸ್ಪತ್ರೆ ತಿಳಿಸಿತ್ತು. ಆದರೆ ಕೊರೊನಾ ಸೋಂಕು ಇರುವ ಬಗ್ಗೆ ವರದಿ ನೀಡಿರಲಿಲ್ಲ.
2021 ಜೂನ್ 8 ರಂದು ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಸಾವನ್ನಪ್ಪಿದ್ದಾರೆ. ಮೂರು ಲಕ್ಷ ಬಿಲ್ ಕಟ್ಟಿ ಕುಟುಂಬಸ್ಥರು ಮೃತದೇಹ ಪಡೆದಿದ್ದಾರೆ. ಕೊರೊನಾ ನಿಯಮದಡಿಯಲ್ಲಿ ಪಾರ್ವತಮ್ಮ ಅಂತ್ಯಕ್ರಿಯೆ ನಡೆದಿದೆ. ಸರ್ಕಾರದ ಪರಿಹಾರಕ್ಕೆ ಕುಟುಂಬಸ್ಥರು ಅಲೆದಾಡಿದ್ದಾರೆ. ಸತತ ನಾಲ್ಕು ತಿಂಗಳ ಕಾಲ ಮೃತಳ ಕುಟುಂಬಸ್ಥರು ಪರಿಹಾರಕ್ಕಾಗಿ ಅಲೆದಾಟ ನಡೆಸಿದ್ದಾರೆ. ಆದರೆ ಇದೀಗ ಮಹಿಳೆ ಕೊರೊನಾದಿಂದ ಮೃತಪಟ್ಟಿಲ್ಲ ಅಂತ ಆರೋಗ್ಯ ಇಲಾಖೆ ನೆಗೆಟಿವ್ ವರದಿ ನೀಡಿದೆ.
ಈ ಬಗ್ಗೆ ತನಿಖೆ ನಡೆಯಬೇಕು ಅಂತ ಮೃತಳ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆರೋಗ್ಯ ಇಲಾಖೆಗೆ ಪ್ರಶ್ನೆ ಮಾಡಿದರೆ ಖಾಸಗಿ ಆಸ್ಪತ್ರೆಯವರದ್ದೇ ತಪ್ಪು ಅಂತ ಹೇಳುತ್ತಿದ್ದಾರೆ. ಇತ್ತ ಸ್ಯಾಂಪಲ್ ಕೊಟ್ಟು ಮಿಸ್ ಮಾಡಿದ್ದೇ ಆರೋಗ್ಯ ಇಲಾಖೆ ಅಂತ ಖಾಸಗಿ ಆಸ್ಪತ್ರೆ ಹೇಳುತ್ತಿದೆ.
ಇದನ್ನೂ ಓದಿ
ಈ ವರ್ಷವೂ ನೈಸರ್ಗಿಕ ವಿಕೋಪಗಳು ನಮ್ಮನ್ನು ಕಾಡಿದವು ಮತ್ತು ಅನೇಕರು ಪ್ರಾಣ ಕಳೆದುಕೊಂಡರು!
ಬೆಳಗ್ಗೆ 7 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವೆಡೆ ಲಘು ಭೂಕಂಪ