ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ

|

Updated on: Sep 28, 2023 | 10:23 AM

ಮೊದಲು ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಯ ಆದಾಯ ತೀರಾ ಕಡಿಮೆ ಇತ್ತು. ಇದೀಗ ಶ್ರೀಮಠಕ್ಕೆ ಸಂಬಂಧಿಸಿದ ಗ್ರಾಮ ದೇವತೆ ಮಂಚಾಲಮ್ಮ (Manchalamma Temple ) ಸೇರಿದಂತೆ ವಿವಿಧೆಡೆ ಹುಂಡಿಯಲ್ಲಿ 4 ಕೋಟಿ ರೂ. ಆದಾಯ ಬಂದಿದೆ. ರಜಾ ದಿನಗಳು, ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಉಚಿತ ಬಸ್ ಸೌಲಭ್ಯ, ಶ್ರೀ ಹುಂಡಿಗೆ ಬ್ರಿಟನ್ ಪ್ರಧಾನಿ ಕುಟುಂಬ ಬಂದಿದ್ದು 4 ಕೋಟಿ ರೂಪಾಯಿ ಸಂಗ್ರಹಕ್ಕೆ ಕಾರಣವಾಯಿತಾ ಎಂಬ ಕುತೂಹಲವೂ ಮೂಡಿದೆ.

ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರು: ತುಂಬಿತುಳುಕಿದ ಮಠದ ಹುಂಡಿ
ರಾಘವೇಂದ್ರಸ್ವಾಮಿ ಮತ್ತು ಗ್ರಾಮ ದೇವತೆ ಮಂಚಾಲಮ್ಮ ದರ್ಶನಕ್ಕೆ ಹರಿದುಬರುತ್ತಿಒರುವ ಭಕ್ತರು
Follow us on

ಕರ್ನಾಟಕದ ರಾಯಚೂರು (Raichur) ಜಿಲ್ಲೆಯಲ್ಲಿರುವ ನೆರೆಯ ಆಂಧ್ರದ ಕರ್ನೂಲು ಜಿಲ್ಲೆಗೆ ಅಂಟಿಕೊಂಡಿರುವ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ (Sri Raghavendra Swamy Matha) ಹುಂಡಿ ಆದಾಯ ಊಹೆಗೂ ಮೀರಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಸಾಲು ಸಾಲು ರಜಾ ದಿನಗಳು, ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಿರುವುದು ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಕುಟುಂಬದ ಆಗಮನದಿಂದಾಗಿ ಭಾರಿ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ನೆರೆಯ ಆಂಧ್ರದಲ್ಲಿರುವ ಅಷ್ಟಾದಶ ಜ್ಯೋತಿರ್ಲಿಂಗಗಳು ಹಾಗೂ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ದೇವಸ್ಥಾನದ ಹುಂಡಿಗೆ (Hundi Donation) ಪೈಪೋಟಿ ನೀಡುವ ಮೂಲಕ ಮಂತ್ರಾಲಯದ ಹಂಡಿ ಆದಾಯ ಹೆಚ್ಚಳವಾಗಿರುವುದನ್ನು ಕಂಡು ದೇವಸ್ಥಾನದ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇತ್ತೀಚಿಗೆ ಹುಂಡಿ ಆದಾಯ ರೂ. 3,82,59,839, 53 ಗ್ರಾಂ ಚಿನ್ನ ಮತ್ತು 1200 ಗ್ರಾಂ ಬೆಳ್ಳಿಯನ್ನು ಹುಂಡಿಯಲ್ಲಿ ಕಾಣಿಕೆಯಾಗಿ ಹಾಕಲಾಗಿದೆ. ಪ್ರಥಮ ಬಾರಿಗೆ ದಾಖಲೆಯ 4 ಕೋಟಿ ರೂ.ಗಳನ್ನು ಪಡೆದಿರುವುದು ಅತೀವ ಸಂತಸ ತಂದಿದೆ ಎಂದು ಶ್ರೀ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ. ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ವೇತನ ಭತ್ಯೆ, ಉಚಿತ ಅನ್ನ ಸಂತರ್ಪಣೆ, ಭಕ್ತರಿಗೆ ಸೌಲಭ್ಯ ಕಲ್ಪಿಸಲು ವೆಚ್ಚ ಮಾಡಲಾಗುವುದು ಎಂದು ಶ್ರೀ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ. ಗಮನಾರ್ಹವೆಂದರೆ ಈ ಹಿಂದೆ (ಅಂದರೆ 34 ದಿನಗಳ ಹಿಂದೆ) ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ 3 ಕೋಟಿ 53 ಲಕ್ಷ ರೂ. ದಾಖಲೆ ಮೊತ್ತದ ಕಾಣಿಗೆ ಸಂಗ್ರ​ಹ​ಗೊಂಡಿತ್ತು.

ಮೊದಲು ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಯ ಆದಾಯ ತೀರಾ ಕಡಿಮೆ ಇತ್ತು. ಇದೀಗ ಶ್ರೀಮಠಕ್ಕೆ ಸಂಬಂಧಿಸಿದ ಗ್ರಾಮ ದೇವತೆ ಮಂಚಾಲಮ್ಮ (Manchalamma Temple ) ಸೇರಿದಂತೆ ವಿವಿಧೆಡೆ ಹುಂಡಿಯಲ್ಲಿ 4 ಕೋಟಿ ರೂ. ಆದಾಯ ಬಂದಿದೆ. ರಜಾ ದಿನಗಳು, ಮಹಿಳೆಯರಿಗೆ ಕರ್ನಾಟಕ ಸರ್ಕಾರದ ಉಚಿತ ಬಸ್ ಸೌಲಭ್ಯ, ಶ್ರೀ ಹುಂಡಿಗೆ ಬ್ರಿಟನ್ ಪ್ರಧಾನಿ ಕುಟುಂಬ ಬಂದಿದ್ದು 4 ಕೋಟಿ ರೂಪಾಯಿ ಸಂಗ್ರಹಕ್ಕೆ ಕಾರಣವಾಯಿತಾ ಎಂಬ ಕುತೂಹಲವೂ ಮೂಡಿದೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಪೋಷಕರು ಮತ್ತು ಸುಧಾ ಮೂರ್ತಿ, ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ

ಇದರ ಜೊತೆಗೆ ಶ್ರೀ ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿ ಹುಂಡಿಯಲ್ಲಿ ಕಾಣಿಕೆ ಹಾಕುವುದರಿಂದ ಆದಾಯ ಹೆಚ್ಚಾಯಿತು ಎಂದೂ ಪರಿಗಣಿಸಲಾಗಿದೆ. 13.09.2023 ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬ್ರಿಟಿಷ ಪ್ರಧಾನ ಮಂತ್ರಿ ಋಷಿ ಸುನಕ್ ಅವರ ಪೋಷಕರು, ಇನ್ಫೋಸಿಸ್ ಫೌಂಡೇಷನ್​ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಅವರು ಶ್ರೀ ಮಠದ ಜೊತೆಗೆ ಹುಂಡಿಯಲ್ಲಿ ಹಣ ಹಾಕಿದ್ದರಾ? ಎಂಬ ಮಾತೂ ಕೇಳಿಬರುತ್ತಿದೆ. ಏನೇ ಆಗಲಿ, ಶ್ರೀಮಠದ ಹುಂಡಿ ದಾಖಲೆಯ ಮಟ್ಟದಲ್ಲಿ ಪ್ರಥಮ ಬಾರಿಗೆ 4 ಕೋಟಿ ಬಂದಿದ್ದರಿಂದ ಮಠದ ಅಧಿಕಾರಿಗಳು, ಭಕ್ತರು, ಜನರು ಸಂತಸಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ