ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಕಳೆದುಕೊಂಡ ವಿದ್ಯಾರ್ಥಿ, ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

| Updated By: ಆಯೇಷಾ ಬಾನು

Updated on: Feb 20, 2022 | 11:48 AM

ನಾಲ್ಕು ಜನ ಸ್ನೇಹಿತರಿಂದ ಸಾಲ ಪಡೆದು ಸುಮಾರು 3,78,600 ರೂ. ಹಾಕಿ ಪ್ರಾಡಕ್ಟ್ ಖರೀದಿಸಿದ್ದಾರೆ. ಆಗ ಹಣ ನೀಡದೇ ಹೆಚ್ಚಿನ ಪ್ರಾಡಕ್ಟ್ ಖರೀದಿಸಲು ತಾಕೀತು ಮಾಡಲಾಗಿದೆ. ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಹಣ ಕಳೆದುಕೊಂಡು ಶ್ರೀಧರ್ ಕಂಗಾಲಾಗಿದ್ದಾರೆ.

ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಕಳೆದುಕೊಂಡ ವಿದ್ಯಾರ್ಥಿ, ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Follow us on

ರಾಯಚೂರು: ಕ್ಯಾಷ್ ಬ್ಯಾಕ್ ಆಸೆಯಿಂದ(Cash Back) ವಿದ್ಯಾರ್ಥಿ ₹3 ಲಕ್ಷ ಹಣ ಕಳೆದುಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ಶ್ರೀಧರ್ ಪಾಟೀಲ್, ವಂಚನೆಗೊಳಗಾದ ವಿದ್ಯಾರ್ಥಿ. ಮೊದಲಿಗೆ ₹200 ಕೊಟ್ಟು ವಸ್ತುವೊಂದನ್ನು ಖರೀದಿ ಮಾಡಿದ್ದ ವಿದ್ಯಾರ್ಥಿ ಶ್ರೀಧರ್ಗೆ 300 ರೂಪಾಯಿ ಕ್ಯಾಷ್ ಬ್ಯಾಕ್ ಬಂದಿತ್ತು. ಇದರಿಂದ ಖುಷಿಯಾದ ಶ್ರೀಧರ್ ಮತ್ತೆ ಸಾವಿರಾರು ಹಣ ಹಾಕಿ ವಸ್ತುಗಳನ್ನು ಖರೀದಿಸಿದ್ರು. ಆಗಲೂ ಶ್ರೀಧರ್ ಪಾಟೀಲ್‌ಗೆ ಕ್ಯಾಷ್ ಬ್ಯಾಕ್ ಬಂದಿತ್ತು. ಬಳಿಕ ಸ್ನೇಹಿತರ ಬಳಿ ಸಾಲ ಮಾಡಿ ಪ್ರಾಡಕ್ಟ್ ಖರೀದಿಗೆ 3,78,600 ರೂ. ಹಾಕಿದ್ದಾರೆ. ಆಗ ಹಣ ನೀಡದೆ ಮತ್ತಷ್ಟು ಪ್ರಾಡಕ್ಟ್ ಖರೀದಿಸಲು ಸೂಚನೆ ಬಂದಿದೆ. ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಹಣ ಕಳೆದುಕೊಂಡಿದ್ದಾರೆ.

ವಿದ್ಯಾರ್ಥಿ ಶ್ರೀಧರ್ ಪಾಟೀಲ್, ಪಾರ್ಟ್ ಟೈಂ ಕೆಲಸದ ಲಿಂಕ್ ಓಪನ್ ಮಾಡಿದ್ದರು. ಆಗ ಕೆಲಸಕ್ಕೂ ಮುನ್ನ ಪ್ರಾಡಕ್ಟ್ ಖರೀದಿಗೆ ಆಫರ್ ಬಂದಿದೆ. ಹೀಗಾಗಿ ಶ್ರೀಧರ್ ಮೊದಲಿಗೆ ₹200 ಕೊಟ್ಟು ವಸ್ತುವೊಂದನ್ನು ಖರೀದಿ ಮಾಡಿದ್ದರು. ಆಗ ಅದಕ್ಕೆ 300 ರೂಪಾಯಿ ಕ್ಯಾಷ್ ಬ್ಯಾಕ್ ಬಂದಿದೆ. ಇದಾದ ಬಳಿಕ ಮತ್ತೊಮ್ಮೆ 88 ಸಾವಿರ, 69 ಸಾವಿರಕ್ಕೆ 2 ವಸ್ತುಗಳನ್ನು ಖರೀದಿಸಿದ್ದಾರೆ. ಆಗಲೂ ಕ್ಯಾಷ್ ಬ್ಯಾಕ್ ಜೊತೆ ಕಮಿಷನ್ ಕೂಡ ಸಿಕ್ಕಿದೆ. ಇದರಿಂದ ಖುಷಿಯಾದ ಶ್ರೀಧರ್ ಒಳ್ಳೆ ದುಡ್ಡು ಮಾಡಬಹುದೆಂದು, ಮೋಸವಾಗುವುದಿಲ್ಲ ಎಂಬ ನಂಬಿಕೆಯಲ್ಲಿ ಹೆಚ್ಚಿನ ಹಣದಾಸೆಗೆ ತನ್ನ ನಾಲ್ಕು ಜನ ಸ್ನೇಹಿತರಿಂದ ಸಾಲ ಪಡೆದು ಸುಮಾರು 3,78,600 ರೂ. ಹಾಕಿ ಪ್ರಾಡಕ್ಟ್ ಖರೀದಿಸಿದ್ದಾರೆ. ಆಗ ಹಣ ನೀಡದೇ ಹೆಚ್ಚಿನ ಪ್ರಾಡಕ್ಟ್ ಖರೀದಿಸಲು ತಾಕೀತು ಮಾಡಲಾಗಿದೆ. ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಹಣ ಕಳೆದುಕೊಂಡು ಶ್ರೀಧರ್ ಕಂಗಾಲಾಗಿದ್ದಾರೆ. ಸದ್ಯ ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ: ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರ ಕರೆ

ಈ ವೃತ್ತದಲ್ಲಿ ಎಷ್ಟು ಸಂಖ್ಯೆ ಕಾಣುತ್ತಿದೆ? ಉತ್ತರ ಹುಡುಕಲು ತಲೆಕೆಡಿಸಿಕೊಂಡ ನೆಟ್ಟಿಗರು