ಟಿವಿ9 ವರದಿ ಇಂಪ್ಯಾಕ್ಟ್, ಅನಾಥವಾಗಿ ಬಿದ್ದದ್ದ ವಾಹನಗಳು ವಿಕಲಚೇತನರಿಗೆ ವಿತರಣೆ

ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತ್ರಿಚಕ್ರ ವಾಹನಗಳ ವಿತರಣೆ ಮಾಡಿದ್ದಾರೆ. ಕೊನೆಗೂ ಗೋದಾಮಿನಲ್ಲಿ‌ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದ್ದ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ  ವಿತರಿಸಲಾಗಿದೆ. ಕಳೆದ 8 ತಿಂಗಳಾದ್ರೂ ಇದುವರೆಗೂ ರಾಯಚೂರು ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ವಿಸ್ತೃತ ವರದಿಯನ್ನು ಟಿವಿ9 ಡಿಜಿಟಲ್ ಪ್ರಕಟಿಸಿದ್ದು ಇದರ ಫಲವಾಗಿ ಫಲಾನುಭವಿಗಳಿಗೆ ಸಿಗಬೇಕಿದ್ದ ಬೈಕ್​ಗಳು ಸಿಕ್ಕಿವೆ.

ಟಿವಿ9 ವರದಿ ಇಂಪ್ಯಾಕ್ಟ್, ಅನಾಥವಾಗಿ ಬಿದ್ದದ್ದ ವಾಹನಗಳು ವಿಕಲಚೇತನರಿಗೆ ವಿತರಣೆ
ವಿಕಲಚೇತನರಿಗೆ ವಾಹನಗಳ ವಿತರಣೆ
ಆಯೇಷಾ ಬಾನು Edited By:

Updated on: Oct 09, 2026 | 3:28 PM

ರಾಯಚೂರು: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಿಕಲಚೇತನರಿಗೆ ಬೈಕ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಬೈಕ್​ಗಳ ವಿತರಣೆಗೆ ಚಾಲನೆ ಸುಕ್ಕಿದೆ.

ಜಿಲ್ಲಾ ಪಂಚಾಯತ್ ಕಚೇರಿಯ ಗೋದಾಮಿನಲ್ಲಿ ಅಂಗವಿಕಲರಿಗಾಗಿ ಸುಮಾರು 2 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಖರೀದಿಸಿರುವ ಬೈಕ್‌ಗಳನ್ನೆಲ್ಲಾ ಇರಿಸಲಾಗಿತ್ತು. ಕಳೆದ 8 ತಿಂಗಳಾದ್ರೂ ಇದುವರೆಗೂ ರಾಯಚೂರು ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ವಿಸ್ತೃತ ವರದಿಯನ್ನು ಟಿವಿ9 ಡಿಜಿಟಲ್ ಪ್ರಕಟಿಸಿದ್ದು ಇದರ ಫಲವಾಗಿ ಫಲಾನುಭವಿಗಳಿಗೆ ಸಿಗಬೇಕಿದ್ದ ಬೈಕ್​ಗಳು ಸಿಕ್ಕಿವೆ.

ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತ್ರಿಚಕ್ರ ವಾಹನಗಳ ವಿತರಣೆ ಮಾಡಿದ್ದಾರೆ. ಕೊನೆಗೂ ಗೋದಾಮಿನಲ್ಲಿ‌ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದ್ದ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ  ವಿತರಿಸಲಾಗಿದೆ. ಈ ಹಿಂದೆ ಜಿಲ್ಲೆಯಾದ್ಯಂತ 240 ಬೈಕ್​ಗಳು ವಿತರಣೆಯಾಗದೇ ಗೋದಾಮಿನಲ್ಲೆ ಅನಾಥವಾಗಿ ಬಿದ್ದಿದ್ದವು.

 

Published On - 8:55 am, Sat, 16 January 21

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us