
ರಾಯಚೂರು: ಅಂತ್ಯಸಂಸ್ಕಾರ ನಡೆಸಲು ಸ್ಮಶಾನ ಇಲ್ಲವೆಂದು ಮಾನ್ವಿ ತಾಲೂಕಿನ ನೀರಮಾನವಿ ಗ್ರಾಮ ಪಂಚಾಯಿತಿ ಎದುರು ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕೋಳಿಕ್ಯಾಂಪ್ ನಿವಾಸಿ ಹನುಮೇಷ ಮೃತಪಟ್ಟಿದ್ದ. ಆದ್ರೆ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗವೇ ಇಲ್ಲ. ಸರ್ಕಾರದಿಂದ ಸ್ಮಶಾನಕ್ಕೆ ಜಮೀನು ಮಂಜೂರಾದರು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಸ್ಮಶಾನ ಭೂಮಿ ಅಭಿವೃದ್ಧಿಪಡಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 12:38 pm, Mon, 6 January 20