ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ (AIIMS Hospital) ಒತ್ತಾಯಿಸಿ ಬಹಳ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಏಮ್ಸ್ ಹೋರಾಟಗಾರ ಕೂಗಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (shivaraj kumar) ಧ್ವನಿಗೂಡಿಸಿದ್ದು, ಹಿಂದುಳಿದ ರಾಯಚೂರು ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮಾಡುತ್ತೇವೆ. ಏಮ್ಸ್ ಸ್ಥಾಪನೆಗೆ ನಾವು ಸಹಕರಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಶಿವಣ್ಣನ ಹೇಳಿಕೆಯಿಂದ ಏಮ್ಸ್ ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿದೆ.
ಇಂದು (ಡಿಸೆಂಬರ್ 03) ರಾಯಚೂರಿನಲ್ಲಿ ಸಂಜೆ ನಡೆದ ವೇದ ಚಿತ್ರದ ಪ್ರೀ ರೀಲಿಸ್ (vedha film Teaser) ಇವೆಂಟ್ ಕಾರ್ಯಕ್ರಮದಲ್ಲಿ ರಾಯಚೂರು ಹಿಂದುಳಿದ ಜಿಲ್ಲೆ. ನಮ್ಮ ಸಮಸ್ಯೆಗಳಿಗೆ ಯಾರೂ ಸ್ಪಂದಿಸಲ್ಲ ಅನ್ನೋ ಜನರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಹಿಂದುಳಿದ ರಾಯಚೂರು ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮಾಡುತ್ತೇವೆ. ಏಮ್ಸ್ ಸ್ಥಾಪನೆಗೆ ನಾವು ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.
ಇವತ್ತು ಪ್ರೆಸ್ ನವರು ಇಲ್ಲಿನ ಸಮಸ್ಯೆಗಳ ಬಗ್ಗೆ ಅದನ್ನೇ ಹೇಳಿದ್ರು. ನಮ್ಮ ಗಡಿ ಜಿಲ್ಲೆ ರಾಯಚೂರಿನ ಸಮಸ್ಯೆಗಳಿಗೆ ಯಾರೂ ಸ್ಪಂದಿಸಲ್ಲ ಅಂದ್ರು. ಈ ವರೆಗೆ ಇಲ್ಲಿಗೆ ಬರಲಾಗಿಲ್ಲ. ದಯವಿಟ್ಟು ಕ್ಷಮಿಸಿ. ಮುಂದಿನ ದಿನಗಳಲ್ಲಿ ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ನಾವೆಲ್ಲಾ ನಟರು ನಿಮ್ಮೊಟ್ಟಿಗೆ ಇರುತ್ತೇವೆ ಎಂದು ಹೇಳಿದರು.
ಇಲ್ಲಿ ಏಮ್ಸ್ ಸ್ಥಾಪನೆಗಾಗಿ ಹೋರಾಟ ನಡೆಯುತ್ತಿವೆ. ನಿಮ್ಮ ಆಸೆಯಂತೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ನಾವು ಸಹಕರಿಸುತ್ತೇವೆ. ನಿಮ್ಮ ಆಶಯದಂತೆ ನಾನು ಸಿಎಂರನ್ನ ಭೇಟಿಯಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತ ಚರ್ಚಿಸುತ್ತೇನೆ ಎಂದು ಶಿವಣ್ಣ ಮಾತು ಕೊಟ್ಟರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ