ಕೆಲಸದ ಅವಧಿ ವಿಸ್ತರಣೆ ಮಾಡಿದ್ದಕ್ಕೆ ಆಕ್ರೋಶ; ಹಾಸಿಗೆ ದಿಂಬು, ಕುಟುಂಬ ಸಹಿತ ಕಚೇರಿಗೆ ಬರುತ್ತೇವೆ ಎಂದ ಸಿಬ್ಬಂದಿ!

12 ಗಂಟೆಗಳ ಕಾಲ ‌ಕಾರ್ಯ ನಿರ್ವಹಿಸಲು ಸಾಧ್ಯವಾಗಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ನಮಗೂ ಕುಟುಂಬಗಳಿವೆ, ವೈಯಕ್ತಿಕ ಜೀವನಕ್ಕೆ ಸಮಯ ಸಿಗ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಹಾಸಿಗೆ, ದಿಂಬು ಸಹಿತ ಕಚೇರಿಯಲ್ಲಿಯೇ ಮಲಗುವ ಅಭಿಯಾನ ಮಾಡ್ತಿವಿ ಅಂತ ಕಣ್ಣೀರು ಹಾಕಿದ್ದಾರೆ.

ಕೆಲಸದ ಅವಧಿ ವಿಸ್ತರಣೆ ಮಾಡಿದ್ದಕ್ಕೆ ಆಕ್ರೋಶ; ಹಾಸಿಗೆ ದಿಂಬು, ಕುಟುಂಬ ಸಹಿತ ಕಚೇರಿಗೆ ಬರುತ್ತೇವೆ ಎಂದ ಸಿಬ್ಬಂದಿ!
ಸರ್ಕಾರದ ಆದೇಶ ಮತ್ತು ನೌಕರರ ಅಳಲು
Edited By:

Updated on: Mar 21, 2022 | 3:52 PM

ರಾಯಚೂರು: ಕೆಲಸದ ಅವಧಿಯನ್ನು ವಿಸ್ತರಣೆ ಮಾಡಿದ್ದಕ್ಕೆ ಸಿಬ್ಬಂದಿ ಕಿಡಿಕಾರಿದ ಘಟನೆ ರಾಯಚೂರು ಜಿಲ್ಲೆಯ ನೋಂದಣಿ, ಮುದ್ರಾಂಕ ಇಲಾಖೆಯಲ್ಲಿ ನಡೆದಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿರುದ್ಧ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಅವಧಿ ವಿಸ್ತರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದೊಂದಿಗೆ ಆಗಮಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಹಾಸಿಗೆ, ದಿಂಬಿನೊಂದಿಗೆ ಬಂದು ಕಚೇರಿಯಲ್ಲಿ ಮಲಗಿ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಸಿಬ್ಬಂದಿಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಮೊದಲು 10 ರಿಂದ 5.30 ವರೆಗಿದ್ದ ಅವಧಿ ಬಳಿಕ 9 ರಿಂದ 7 ಗಂಟೆ ವರೆಗೂ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೆ ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ಎರಡನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ. 12 ಗಂಟೆಗಳ ಕಾಲ ‌ಕಾರ್ಯ ನಿರ್ವಹಿಸಲು ಸಾಧ್ಯವಾಗಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ನಮಗೂ ಕುಟುಂಬಗಳಿವೆ, ವೈಯಕ್ತಿಕ ಜೀವನಕ್ಕೆ ಸಮಯ ಸಿಗ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಹಾಸಿಗೆ, ದಿಂಬು ಸಹಿತ ಕಚೇರಿಯಲ್ಲಿಯೇ ಮಲಗುವ ಅಭಿಯಾನ ಮಾಡ್ತಿವಿ ಅಂತ ಕಣ್ಣೀರು ಹಾಕಿದ್ದಾರೆ.

ತುಮಕೂರು: ಇಲ್ಲಿ ಕೊರೊನಾ ವಾರಿಯರ್ಸ್ ಕೆಲಸ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಡಿಸಿ ಕಚೇರಿ ಬಳಿ 150 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ, ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಕೊವಿಡ್ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಸಿಬ್ಬಂದಿ ಪ್ರತಿಭಟನೆ ಮಾಡಿದ್ದಾರೆ. ಕೆಲಸ ಮುಂದುವರಿಸುವ ಜೊತೆಗೆ ಮೂರು ತಿಂಗಳ ವೇತನ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಬೀದರ್: ರೈತರ ಕಬ್ಬಿನ ಬಾಕಿ ಬಿಲ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ. ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ಬಳಿ ಇರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರ ಪ್ರತಿಭಟನೆ ನಡೆದಿದೆ. 5 ಸಾವಿರ ರೈತರ ಹಣ ಬಾಕಿ ಉಳಿಸಿಕೊಂಡಿರುವ ಆಡಳಿತ ಮಂಡಳಿ, ಮೊಲಾಸಿಸ್ ಮಾರಾಟದಲ್ಲಿ ಆಡಳಿತ ಮಂಡಳಿಯಿಂದ ಅವ್ಯವಹಾರ ಉಂಟಾಗಿದೆ. ಹೀಗಾಗಿ ಆಡಳಿತ ಮಂಡಳಿ ವಿರುದ್ಧ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಮಡಿಕೇರಿ: ಉಚಿತ ವಿದ್ಯುತ್​ಗಾಗಿ ರೈತರು ಪ್ರತಿಭಟನೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ಚೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ ಹಾಕಲಾಗಿದೆ. ಚೆಸ್ಕಾಂ ಅಧಿಕಾರಿಗಳಿಗೆ ರೈತರಿಂದ‌ ಮುತ್ತಿಗೆ ಹಾಕಲಾಗಿದೆ. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಶೋಕ್​ಗೆ ಮುತ್ತಿಗೆ ಹಾಕಿ, ಅಧಿಕಾರಿ ಕಚೇರಿ ಒಳ ಪ್ರವೇಶಿಸಲು ರೈತರಿಂದ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನಿಂದ ಮುಖ್ಯ ಅಧಿಕಾರಿ ಮಡಿಕೇರಿಗೆ ಬರುವಂತೆ ರೈತರ ಆಗ್ರಹ ಕೇಳಿಬಂದಿದೆ. 10 HP ವರೆಗಿನ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡದ ಹಿನ್ನೆಲೆ ಪ್ರತಿಭಟನೆ ವ್ಯಕ್ತವಾಗಿದೆ.

ಬೀದರ್: ಮೊಟ್ಟೆ ಹಣದ ವಿಚಾರಕ್ಕೆ ನಡುರಸ್ತೆಯಲ್ಲೇ ಶಿಕ್ಷಕರ ಕಚ್ಚಾಟ ನಡೆದಿದೆ. ಮರ್ಜಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ‌ಮಕ್ಕಳಿಗೆ ಶಿಕ್ಷಕ ಶಾಂತಕುಮಾರ್ ಮೊಟ್ಟೆ ತಂದಿದ್ದರು. ಮೊಟ್ಟೆ ಹಣ ಕೊಡುವಂತೆ ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿಯೊಂದಿಗೆ ಶಾಂತಕುಮಾರ್ ಜಗಳ ನಡೆದಿದೆ. ಇಬ್ಬರು ಶಿಕ್ಷಕರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ಕೇಳಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ; ನೀರು, ಕೆಲಸ, ದಿನಸಿಯೂ ಕೊಡದಂತೆ ಸೂಚನೆ

ಇದನ್ನೂ ಓದಿ: ಅಮೆರಿಕದಲ್ಲಿ ಉಬರ್​ ಚಾಲಕನಾಗಿರುವ ಅಫ್ಘಾನ್ ಮಾಜಿ ಹಣಕಾಸು ಸಚಿವ; ಜೀವನೋಪಾಯಕ್ಕಾಗಿ ಈ ಕೆಲಸ

Published On - 3:48 pm, Mon, 21 March 22