ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಸುಟ್ಟುಗೊಂಡಿದ್ದಾರೆ: ಸಿದ್ದರಾಮಯ್ಯ, ಎಂಬಿ ಪಾಟೀಲ್​ ವಿರುದ್ಧ ಯತ್ನಾಳ್ ಕಿಡಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಈ ಹಿಂದೆ‌ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್​ ಕೈಸುಟ್ಟುಗೊಂಡಿದ್ದಾರೆ. ಮತ್ತೊಮ್ಮೆ ಅಂತಹ ಹುಚ್ಚು ಕೆಲಸ‌ವನ್ನು ಮಾಡೋದಕ್ಕೆ ಹೋಗಬಾರದು ಎಂದು ವಾಗ್ದಾಳಿ ಮಾಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಸುಟ್ಟುಗೊಂಡಿದ್ದಾರೆ: ಸಿದ್ದರಾಮಯ್ಯ, ಎಂಬಿ ಪಾಟೀಲ್​ ವಿರುದ್ಧ ಯತ್ನಾಳ್ ಕಿಡಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Dec 24, 2023 | 10:45 PM

ರಾಯಚೂರು, ಡಿಸೆಂಬರ್​ 24: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿ ಈ ಹಿಂದೆ‌ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಸಚಿವ ಎಂ.ಬಿ.ಪಾಟೀಲ್​ ಕೈಸುಟ್ಟುಗೊಂಡಿದ್ದಾರೆ. ಮತ್ತೊಮ್ಮೆ ಅಂತಹ ಹುಚ್ಚು ಕೆಲಸ‌ವನ್ನು ಮಾಡೋದಕ್ಕೆ ಹೋಗಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರನ್ನು ಕೂಡಿಸುವಂತಹ ಕೆಲಸ‌ ಮಾಡಬೇಕು ಆದರೆ ಕೂಡಿಸುವಂತಹ ಕೆಲಸವನ್ನು ವೀರಶೈವ ಮಹಾಸಭಾ ಮಾಡಿಲ್ಲ ಎಂದಿದ್ದಾರೆ.

ಈವರೆಗೂ ವೀರಶೈವ ಪರಂಪರೆ, ಬಸವಣ್ಣನ ಪರಂಪರೆ ಜಗಳಗಳಿವೆ. ಈಗಲೂ ಸಮಾಜ ಒಡೆಯುವ ಕೆಲಸವನ್ನೇ ಮಹಾಸಭಾ ಮಾಡುತ್ತಿದೆ. ನಮಗೆ 2ಡಿ ಕೊಟ್ಟಿದಾರೆ, ರಾಜ್ಯ ಸರ್ಕಾರ ನೋಟಿಫಿಕೇಷನ್‌ ಮಾಡಿದೆ. ಎಲ್ಲಾ ಸಮುದಾಯಕ್ಕೂ ನಾವು ನ್ಯಾಯ ಕೊಡುವ ಕೆಲಸ‌ ಮಾಡಿದ್ದೇವೆ. ಈಗ ಠರಾವು ಮಾಡುವ ಅವಶ್ಯಕತೆ‌ ಏನಿಲ್ಲ ಎಂದು ಹೇಳಿದ್ದಾರೆ.

ಪಂಚಮಸಾಲಿ ದೊಡ್ಡ ಸಮಾಜ, ಹೀಗಾಗಿ ನಮ್ಮ ಸ್ವಾಮೀಜಿಗೆ ಕರೆದಿಲ್ಲ

ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿಗೆ ಆಹ್ವಾನ ನೀಡದ ವಿಚಾರವಾಗಿ ಮಾತನಾಡಿದ ಅವರು, ನಮ್ಮನ್ನು ನಿರ್ಲಕ್ಷಿಸಿದರೆ ವೀರಶೈವ ಮಹಾಸಭಾದವರಿಗೆ ಗೌರವ ಇರುತ್ತೆ. ಪಂಚಮಸಾಲಿ ದೊಡ್ಡ ಸಮಾಜ, ಹೀಗಾಗಿ ನಮ್ಮ ಸ್ವಾಮೀಜಿಗೆ ಕರೆದಿಲ್ಲ ಎಂದಿದ್ದಾರೆ.

ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ ಸಿಗುವುದಿಲ್ಲ

ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಉಪಜಾತಿ ಬರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿ ಬರೆದಿದ್ದರಿಂದಲೇ ಅನೇಕ ಉಪ ಜಾತಿಗಳು ಬಿಟ್ಟು ಹೋಗಿವೆ. ಲಿಂಗಾಯತ ಸಮುದಾಯದಲ್ಲಿ ಒಳ ಪಂಗಡಗಳಿಗೆ ಮೀಸಲಾತಿ ಸಿಗುತ್ತಿದೆ. ಹಾಗಾಗಿ ಅವರೆಲ್ಲಾ ವೀರಶೈವ ಸಮುದಾಯದಿಂದ ಬಿಟ್ಟು ಹೋಗುತ್ತಿದ್ದಾರೆ.

ಇದನ್ನೂ ಓದಿ: ವೀರಶೈವ ಲಿಂಗಾಯತ ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಠಕ್ಕರ್

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಜಾತಿಗಳನ್ನು‌ ಸೇರಿಸಿಕೊಂಡಿದ್ದಾರೆ. ಜಾತಿಗಣತಿಯಲ್ಲಿ ಇಂದು ವೀರಶೈವ ಸಮಾಜ 4ನೇ ಸ್ಥಾನಕ್ಕೆ ಹೋಗಿದೆ. ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ‌ ಸಿಗೋದಿಲ್ಲ ಅಂತಾ ಸಮಾಜದ ಬಹಳಷ್ಟು ಜನರ ಭಾವನೆಯಲ್ಲಿ ಬಂದಿದೆ. ಹೀಗಾಗಿ ಹಿಂದೂ‌ ಎಂದು ಬರೆಸಿ ತಮ್ಮ ಉಪಜಾತಿಗಳು ಬರೆಸುತ್ತಿದ್ದಾರೆ ಎಂದಿದ್ದಾರೆ.

ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ ಸಿಗುವುದಿಲ್ಲ. ವೀರಶೈವ ಸಮಾಜದಲ್ಲಿ ಲಿಂಗಾಯತರು ಅಂತಾ ಬರೆಸಿದವರು ನಾವೇ. ಆದರೆ ಬೇರೆಯವರೆಲ್ಲಾ ಬೇರೆ ಬೇರೆ ಕೆಟಗರಿಯಲ್ಲಿ ಹೋಗಿಬಿಟ್ಟಿದ್ದಾರೆ. ಬಣಜಿಗರು 2Aದಲ್ಲಿ ಹೋಗಿದ್ದಾರೆ, ಅಲ್ಲಿಂದ ಗಾಣಿಗ ಸಮಾಜ ಹೋಗಿದೆ. ತಮ್ಮ ಮಕ್ಕಳ‌ಭವಿಷ್ಯದ ಸಲುವಾಗಿ ಹೋಗಿದ್ದಾರೆ, ಉಳಿದವರು ನಾವಷ್ಟೇ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ