ಟೊಮ್ಯಾಟೊ ಬಳಿಕ ಈರುಳ್ಳಿ ಸರದಿ; ನಿರಂತರ ಮಳೆ ಕಾರಣ ಈರುಳ್ಳಿ ದರದಲ್ಲಿ ಏರಿಕೆ

| Updated By: ganapathi bhat

Updated on: Oct 25, 2021 | 9:49 PM

Onion Rate: ಬೆಂಗಳೂರು ನಗರದಲ್ಲಿ ಈರುಳ್ಳಿ ಕೊರತೆ ಎದುರಾಗಿದೆ. ಮಳೆಯಿಂದಾಗಿ ಈರುಳ್ಳಿ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಕಳೆದ ವಾರದಿಂದ ಮಳೆ ಜೋರಾಗಿದೆ.

ಟೊಮ್ಯಾಟೊ ಬಳಿಕ ಈರುಳ್ಳಿ ಸರದಿ; ನಿರಂತರ ಮಳೆ ಕಾರಣ ಈರುಳ್ಳಿ ದರದಲ್ಲಿ ಏರಿಕೆ
ಈರುಳ್ಳಿ ದರದಲ್ಲಿ ಏರಿಕೆ
Follow us on

ಬೆಂಗಳೂರು: ಬೆಲೆ ಏರಿಕೆ ವಿಚಾರದಲ್ಲಿ ಟೊಮ್ಯಾಟೊ ಬಳಿಕ ಈಗ ಈರುಳ್ಳಿ ಸರದಿ ಬಂದಿದೆ. ನಿರಂತರ ಮಳೆಗೆ ಈರುಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. ಬೆಲೆ ಏರಿಕೆ ಜೊತೆಗೆ ಈರುಳ್ಳಿ ಸ್ಟಾಕ್ ಕೊರತೆ ಕೂಡ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಈರುಳ್ಳಿ ಕೊರತೆ ಎದುರಾಗಿದೆ. ಮಳೆಯಿಂದಾಗಿ ಈರುಳ್ಳಿ ಸರಬರಾಜಿನಲ್ಲಿ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಕಳೆದ ವಾರದಿಂದ ಮಳೆ ಜೋರಾಗಿದೆ.

ಈ ಹಿನ್ನೆಲೆಯಲ್ಲಿ ಮೊದಲು 1 ಲಕ್ಷ 80 ಸಾವಿರ ಮೂಟೆಗಳು ಎಪಿಎಂಸಿಗೆ ಬರುತ್ತಿದ್ದದ್ದು, ಈಗ ಮಳೆಯಿಂದಾಗಿ ಕೇವಲ 1 ಲಕ್ಷ ಮೂಟೆಗಳು ಮಾತ್ರ ಬರುತ್ತಿವೆ. ಬರುತ್ತಿರುವ ಮೊಟೆಗಳಲ್ಲೂ ಶೇಕಡಾ 75 ರಷ್ಟು ಮಾಲು ಹಾಳಾಗಿರೋದೇ ಇದೆ ಎಂದು ಹೇಳುತ್ತಿದ್ದಾರೆ. ಮಳೆ ಹೀಗೆ ಮುಂದುವರೆದರೆ ಈರುಳ್ಳಿ ದರ ಮತ್ತಷ್ಟು ಏರಿಕೆ‌ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ 1 ಕೆ.ಜಿ.ಗೆ 20 ರಿಂದ 30 ರೂಪಾಯಿ ಇದ್ದ ಈರುಳ್ಳಿ ದರ ಈಗ ಪ್ರತೀ ಕೆ.ಜಿ ಈರುಳ್ಳಿಗೆ 50 ರಿಂದ 60 ರೂಪಾಯಿಗೆ ಏರಿಕೆ ಆಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಹೋಲ್ ಸೆಲ್ ನಲ್ಲಿ 50 ಕೆ.ಜಿಗೆ 1700-1800 ರೂಪಾಯಿ ಆಗಿದೆ.

ಅಕಾಲಿಕ ಮಳೆಯಿಂದ ಆದ ಬೆಳೆ ಹಾನಿಯ ವರದಿಗಳ ಮಧ್ಯೆಯೂ ಮಂಡಿಗಳಿಗೆ ನಿಧಾನಗತಿಯಲ್ಲಿ ಬಂದಿದ್ದರಿಂದ ಟೊಮೆಟೊ ರೀಟೇಲ್ ಬೆಲೆ, ವಾರದ ಹಿಂದೆ ಮೆಟ್ರೋಗಳಲ್ಲಿ ಪ್ರತಿ ಕೇಜಿಗೆ 93 ರೂಪಾಯಿ ಆಗಿತ್ತು, ಎಂದು ಸರ್ಕಾರದ ಅಂಕಿ- ಅಂಶಗಳಿಂದ ತಿಳಿದುಬಂದಿತ್ತು. ಮೆಟ್ರೋ ನಗರಗಳ ಪೈಕಿ ಕೊಲ್ಕತ್ತಾದಲ್ಲಿ ಟೊಮೆಟೊ ಪ್ರತಿ ಕೇಜಿಗೆ ರೂ. 93, ಚೆನ್ನೈನಲ್ಲಿ ರೂ. 60, ದೆಹಲಿಯಲ್ಲಿ ರೂ. 59 ಮತ್ತು ಚೆನ್ನೈನಲ್ಲಿ ರೂ. 53 ಎಂದು ದತ್ತಾಂಶವು ತೋರಿಸಿತ್ತು.

ಗ್ರಾಹಕರ ವ್ಯವಹಾರಗಳ ಸಚಿವಾಲಯವು ಟ್ರ್ಯಾಕ್ ಮಾಡಿದ 175ಕ್ಕೂ ಹೆಚ್ಚು ನಗರಗಳ ಪೈಕಿ 50ಕ್ಕೂ ಹೆಚ್ಚಿನ ಕಡೆ ಟೊಮೆಟೊ ಚಿಲ್ಲರೆ ಬೆಲೆ ಪ್ರತಿ ಕೇಜಿಗೆ 50 ರೂಪಾಯಿಗಿಂತ ಅಧಿಕವಾಗಿತ್ತು. ಸಗಟು ಮಾರುಕಟ್ಟೆಗಳಲ್ಲಿ ಕೂಡ ಟೊಮೆಟೊವನ್ನು ಕೋಲ್ಕತ್ತಾದಲ್ಲಿ ಪ್ರತಿ ಕೇಜಿಗೆ 84 ರೂಪಾಯಿ, ಚೆನ್ನೈನಲ್ಲಿ 52 ರೂಪಾಯಿ, ಮುಂಬೈನಲ್ಲಿ 30 ರೂಪಾಯಿ ಮತ್ತು ದೆಹಲಿಯಲ್ಲಿ ಪ್ರತಿ ಕೇಜಿಗೆ 29.50 ರೂಪಾಯಿಯಂತೆ ಮಾರಲಾಗಿತ್ತು. ಪ್ರಮುಖವಾಗಿ ಟೊಮೆಟೊ ಬೆಳೆಯುತ್ತಿರುವ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯ ಮಧ್ಯೆ ಕಳಪೆ ಆಗಮನದಿಂದಾಗಿ ಟೊಮೆಟೊ ಬೆಲೆಗಳು ದೃಢವಾಗಿತ್ತು.

ಇದನ್ನೂ ಓದಿ: ಟೊಮ್ಯಾಟೊ ಬೆಲೆಯಲ್ಲಿ ಏರಿಕೆ; ಏಷ್ಯಾದಲ್ಲೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಕೋಲಾರದಲ್ಲಿ ಹೇಗಿದೆ ಸ್ಥಿತಿಗತಿ?

ಇದನ್ನೂ ಓದಿ: Chintamani: ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದು ರೈತ ದಂಪತಿ ಆತ್ಮಹತ್ಯೆ

Published On - 2:56 pm, Mon, 25 October 21