Chintamani: ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದು ರೈತ ದಂಪತಿ ಆತ್ಮಹತ್ಯೆ

ಕಳೆದ ಒಂದು ವರ್ಷದಿಂದ ತಮ್ಮ ಜಮೀನಿನಲ್ಲಿ ಬಂಡವಾಳ ಹಾಕಿ ಮೊದಲು ಕ್ಯಾರೆಟ್, ನಂತರ ಕೊತ್ತಂಬರಿ ಸೊಪ್ಪು, ನಂತರ ಟೊಮ್ಯಾಟೊ ಬೆಳೆ ಬೆಳೆದಿದ್ದರು ನತದೃಷ್ಟ ದಂಪತಿ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಸರ್ಕಾರ ಲಾಕ್ ಡೌನ್ ಹಾಗೂ ಕಠಿಣ ನಿಯಮಾವಳಿ ವಿಧಿಸಿದ್ದ ಕಾರಣ ರೈತ ವೆಂಕಟರೆಡ್ಡಿ ಬೆಳೆದಿದ್ದ ಬೆಳೆಗೆ ಸೂಕ್ತ ಬೆಲೆ ಬಂದಿರಲಿಲ್ಲ ಎನ್ನಲಾಗಿದೆ.

Chintamani: ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದು ರೈತ ದಂಪತಿ ಆತ್ಮಹತ್ಯೆ
ಚಿಂತಾಮಣಿ: ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದು ರೈತ ದಂಪತಿ ಆತ್ಮಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 18, 2021 | 12:50 PM

ಚಿಕ್ಕಬಳ್ಳಾಪುರ: ಮೂರು ಲಕ್ಷ ರೂಪಾಯಿ ಸಾಲ ಮಾಡಿ ಟೊಮ್ಯಾಟೊ ಬೆಳೆ ಬೆಳೆದಿದ್ದ ರೈತನೊರ್ವ, 5 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ. ಆದ್ರೆ ಟೊಮ್ಯಾಟೊಗೆ ಬೆಲೆ ಬಾರದೆ, ಬೆಳೆ ಜಮೀನಿನಲ್ಲಿಯೇ ಹಾಳಾಯಿತು. ಆದ್ರೆ ಮಾಡಿದ್ದ ಕೈ ಸಾಲ ತಿರಿಸುವುದಾದ್ರು ಹೇಗೆ ಅಂತ ಚಿಂತೆಗೆ ಬಿದ್ದ ರೈತ ದಂಪತಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವೆಂಕಟರೆಡ್ಡಿ(52) ಮತ್ತು ರತ್ನಮ್ಮ (46) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಒಂದು ಕಡೆ ಕೊರೊನಾ ಕಾಟ; ಮತ್ತೊಂದೆಡೆ ಸಾಲಗಾರರ ಕಾಟ: ಕಳೆದ ಒಂದು ವರ್ಷದಿಂದ ತಮ್ಮ ಜಮೀನಿನಲ್ಲಿ ಬಂಡವಾಳ ಹಾಕಿ ಮೊದಲು ಕ್ಯಾರೆಟ್, ನಂತರ ಕೊತ್ತಂಬರಿ ಸೊಪ್ಪು, ನಂತರ ಟೊಮ್ಯಾಟೊ ಬೆಳೆ ಬೆಳೆದಿದ್ದರು ನತದೃಷ್ಟ ದಂಪತಿ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಸರ್ಕಾರ ಲಾಕ್ ಡೌನ್ ಹಾಗೂ ಕಠಿಣ ನಿಯಮಾವಳಿ ವಿಧಿಸಿದ್ದ ಕಾರಣ ರೈತ ವೆಂಕಟರೆಡ್ಡಿ ಬೆಳೆದಿದ್ದ ಬೆಳೆಗೆ ಸೂಕ್ತ ಬೆಲೆ ಬಂದಿರಲಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ ಕೈ ಸಾಲ ಮಾಡಿದವರು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ದಂಪತಿ ನಿನ್ನೆ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read: ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ

Also Read: ಒಡೆದ ಕುಟುಂಬ: 20 ದಿನ ಹಿಂದೆ ಮಗಳು ಕೈ ಕೊಯ್ದುಕೊಂಡಾಗ ‘ಎಲ್ಲಾ ಒಟ್ಟಿಗೆ ಸಾಯೋಣ’ ಎಂದಿದ್ದಳಂತೆ ದರ್ಪ ಪತ್ನಿ ಭಾರತಿ!

(chintamani farmer couple commits suicide due to crop loss and loan burden)

Published On - 12:46 pm, Sat, 18 September 21

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ