ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ
ಒಳ ಚಿತ್ರದಲ್ಲಿ ಜೀಪ್ ಚಾಲಕ ರಮೇಶ್
Follow us
TV9 Web
| Updated By: ಆಯೇಷಾ ಬಾನು

Updated on:Sep 13, 2021 | 3:07 PM

ಚಿಕ್ಕಬಳ್ಳಾಪುರ: ಜೀವನೋಪಾಯಕ್ಕಾಗಿ ತನ್ನ ತಂದೆ ಓಡಿಸುತ್ತಿದ್ದ ಜೀಪ್​ ಅಪಘಾತಕ್ಕೆ ತುತ್ತಾಗಿ ಛಿದ್ರಛಿದ್ರವಾಗಿತ್ತು. ಆದರೂ ಆ ಜೀಪ್​ ಚಾಲಕನ ಪುತ್ರ ತನ್ನ ಜೀವನವನ್ನು ಕಟ್ಟಿಕೊಳ್ಳಲು ಧೈರ್ಯ ತೋರಿ ಜೀವನದ ಪರೀಕ್ಷೆಗೆ ಎದೆಯೊಡ್ಡಿ, ಅಂತಿಮ ವರ್ಷದ ಬಿ.ಎಸ್ಸಿ ಪರೀಕ್ಷೆ ಬರೆದು ಅಖಂಡ ಮನೋಬಲ ತೋರಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಗೇಟ್ ಬಳಿ ಲಾರಿಯನ್ನು ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದು 8 ಜನ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಮತ್ತೊಂದು ಮನ ಮಿಡಿಯುವ ಘಟನೆ ನಡೆದಿದೆ. ಜೀಪ್ ಚಾಲಕ, ಮಾಲೀಕನಾಗಿದ್ದ ಮೃತ ರಮೇಶ್ ಮಗ ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ಪರೀಕ್ಷೆ ಬರೆದಿದ್ದಾನೆ.

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮಗನನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವ ಆಸೆಯನ್ನು ಮೃತ ರಮೇಶ ಹೊಂದಿದ್ದರು. ಚನ್ನಾಗಿ ಓದು ಮಗನೆ. ನಿನನ್ನು ಫಾರಿನ್ಗೆ ಕಳಿಸುವೆ ಎಂದು ಮೃತ ರಮೇಶ್ ಹೇಳುತ್ತಿದ್ದರಂತೆ. ಹೀಗಾಗಿ ಬಿ.ಎಸ್ಸಿ ಅಂತಿಮ ವರ್ಷದ ಮೈಕ್ರೋಬಯಾಲಜಿ ಓದುತ್ತಿರುವ ವಿಜಯ್ ತಂದೆಯ ಆಸೆಯಂತೆ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ದುಃಖದಲ್ಲೇ ಪರೀಕ್ಷೆ ಬರೆದಿದ್ದಾನೆ.

ಮೃತ ರಮೇಶ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ನಿವಾಸಿ. ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿದ್ದ ಲಾರಿಯೊಂದು, ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದಿದೆ. ಇದ್ರಿಂದ ಸ್ಥಳದಲ್ಲೇ 6 ಜನ ಮೃತಪಟ್ಟಿದ್ರೆ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಕೊನೆಯುಸಿರೆಳದಿದ್ರು ಇಷ್ಟೇ ಅಲ್ಲ, 9 ಜನರಿಗೆ ಗಂಭೀರವಾಗಿ ಗಾಯವಾಗಿದೆ.

ಚಿಂತಾಮಣಿಯ ನಾರಾಯಣಸ್ವಾಮಿ, ಮುನಿರತ್ನಮ್ಮ, ಜೀಪ್ ಚಾಲಕ ರಮೇಶ್, ಆಂಧ್ರ ಮೂಲದ ವೆಂಕಟಲಕ್ಷ್ಮಮ್ಮ, ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ, ಶ್ರೀನಿವಾಸಪುರ ಮೂಲದ ನಿಖಿಲ್ ಮೃತರಾಗಿದ್ದಾರೆ.

ಇದನ್ನೂ ಓದಿ: 8 ಮಂದಿಯ ಆಹುತಿ ತೆಗೆದುಕೊಂಡ ಅಪಘಾತಕ್ಕೆ ಚಿಂತಾಮಣಿ ಆರ್​ಟಿಒ -ಜೀಪ್ ಮಾಲಿಕ ಕಾರಣ: ಸಂಸದ ಮುನಿಸ್ವಾಮಿ ಕಿಡಿಕಿಡಿ

Published On - 2:10 pm, Mon, 13 September 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?