ಮಡಿಕೇರಿ: ಹೋಂ ಸ್ಟೇನಲ್ಲಿ ತಂಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವು
ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಹೋಂ ಸ್ಟೇನಲ್ಲಿ ತಂಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಡೈರಿ ಫಾರ್ಮ್ನ ಹೋಂ ಸ್ಟೇನಲ್ಲಿ ಇದ್ದರು. ಗೀಸರ್ನಲ್ಲಿ ಗ್ಯಾಸ್ ಸೋರಿಕೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಹೋಂ ಸ್ಟೇ ಬಾತ್ ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾರೆ. ಮಡಿಕೇರಿ ಪ್ರವಾಸಕ್ಕಾಗಿ ಐವರು ವಿದ್ಯಾರ್ಥಿಗಳು ಬಂದಿದ್ದರು. ಹೋಂ ಸ್ಟೇನಲ್ಲಿ ತಂಗಿದ್ದರು. ಈ ವೇಳೆ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ಬಳಿಕ ಮೃತರ ಬಳಿಯಿದ್ದ ಮೊಬೈಲ್ ಕಳ್ಳತನ ಬೆಂಗಳೂರು: ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ತಾಯಿ, ಮಗು ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಕಿಡಿಗೇಡಿಗಳು ಮೃತರ ಬಳಿಯಿದ್ದ ಮೊಬೈಲ್ನ ಕಳ್ಳತನ ಮಾಡಿದ್ದಾರೆ. ಸಹಾಯ ಮಾಡುವ ಬದಲು ಕಳ್ಳತನ ಮಾಡಿದ್ದಾರೆ. ಈ ಅಮಾನವೀಯ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ದಂಪತಿ ಧರ್ಮಪುರಿಗೆ ಹೋಗುತ್ತಿದ್ದರು. ಮೃತರು ಕೆ.ಆರ್.ಪುರಂನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂರು ದಿನದ ಹಿಂದೆಯಷ್ಟೇ ಒಂದು ವರ್ಷದ ಮಗುವಿನ ಹುಟ್ಟು ಹಬ್ಬ ಆಚರಿಸಿದ್ದರು.
ಇದನ್ನೂ ಓದಿ
ವಿಷದ ಉಂಗುರ ತೊಟ್ಟು ಶೇಕ್ ಹ್ಯಾಂಡ್ ಮಾಡಿ ಮಹಾರಾಜನನ್ನೇ ಕೊಲ್ಲುವ ಸಂಚು ನಡೆದಿತ್ತು: ಸೌದಿ ಗುಪ್ತಚರ ಅಧಿಕಾರಿ
SBI mega property e-auction: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಸ್ತಿಗಳ ಮೆಗಾ ಇ-ಹರಾಜು