ವಿಷದ ಉಂಗುರ ತೊಟ್ಟು ಶೇಕ್ ಹ್ಯಾಂಡ್ ಮಾಡಿ ಮಹಾರಾಜನನ್ನೇ ಕೊಲ್ಲುವ ಸಂಚು ನಡೆದಿತ್ತು: ಸೌದಿ ಗುಪ್ತಚರ ಅಧಿಕಾರಿ

2014ರಲ್ಲಿ ಸೌದಿ ರಾಜನನ್ನು ಕೊಲ್ಲಬೇಕೆಂದುಕೊಂಡ ರಾಜಕುಮಾರನ ಸಂಚು ನನಗೆ ತಿಳಿದಿರುವ ಕಾರಣಕ್ಕೆ ಇದೀಗ ನನ್ನನ್ನು ಕೊಲ್ಲುವ ಹವಣಿಕೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.

ವಿಷದ ಉಂಗುರ ತೊಟ್ಟು ಶೇಕ್ ಹ್ಯಾಂಡ್ ಮಾಡಿ ಮಹಾರಾಜನನ್ನೇ ಕೊಲ್ಲುವ ಸಂಚು ನಡೆದಿತ್ತು: ಸೌದಿ ಗುಪ್ತಚರ ಅಧಿಕಾರಿ
ಸೌದಿ ಅರೇಬಿಯಾದ ಮಾಜಿ ಗುಪ್ತಚರ ಅಧಿಕಾರಿ ಸಾದ ಅಲ್​ಜಾಬ್ರಿ ಮತ್ತು ಯುವರಾಜ ಮೊಹಮದ್ ಬಿನ್ ಸಲ್ಮಾನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 25, 2021 | 2:33 PM

ವಾಷಿಂಗ್​ಟನ್​: ಸೌದಿ ಅರೇಬಿಯಾದ ಯುವರಾಜನಿಂದ ನನಗೆ ಜೀವ ಬೆದರಿಕೆಯಿದೆ ಎಂದು ಸೌದಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 2014ರಲ್ಲಿ ಸೌದಿ ರಾಜನನ್ನು ಕೊಲ್ಲಬೇಕೆಂದುಕೊಂಡ ರಾಜಕುಮಾರನ ಸಂಚು ನನಗೆ ತಿಳಿದಿರುವ ಕಾರಣಕ್ಕೆ ಇದೀಗ ನನ್ನನ್ನು ಕೊಲ್ಲುವ ಹವಣಿಕೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.

ಸಿಬಿಎಸ್ ವಾಹಿನಿಯ 60 ಮಿನಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗುಪ್ತಚರ ದಳದ ಮಾಜಿ ಅಧಿಕಾರಿ ಸಾದ್ ಅಲ್ಜಾಬ್ರಿ ಯುವರಾಜ ಹೆಣೆದಿದ್ದ ಸಂಚುಗಳನ್ನು ವಿವರಿಸಿದ್ದಾರೆ. ರಾಜನನ್ನು ಕೊಲ್ಲಲೆಂದೇ ರಷ್ಯಾದಿಂದ ಯುವರಾಜ ವಿಷದ ಉಂಗುರ ತರಿಸಿದ್ದ. ಈ ಉಂಗುರ ತೊಟ್ಟು ಶೇಕ್ ಹ್ಯಾಂಡ್ ಮಾಡಿದ್ದರೆ ಸಾಕಿತ್ತು, ಎದುರಿಗಿದ್ದವರು ಸಾಯುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂದರ್ಶನಕ್ಕೆ ಪ್ರತಿಕ್ರಿಯಿಸಿರುವ ಸೌದಿ ಸರ್ಕಾರವು ಅಲ್ಜಾಬ್ರಿಯ ನಡತೆಯೇ ಸರಿಯಿಲ್ಲ ಎಂದು ಆರೋಪಿಸಿದೆ. ‘ಸತ್ಯ ಸಂಗತಿಗಳನ್ನು ತಿರುವುಚುವುದು ಅವರ ಸ್ವಭಾವ. ಈ ಹಿಂದೆಯೂ ಹಲವು ಬಾರಿ ಅವರು ಹೀಗೆ ವರ್ತಿಸಿರುವ ಉದಾಹರಣೆಗಳಿವೆ’ ಎಂದು ಹೇಳಿದೆ. 2015ರಲ್ಲಿ ಸೌದಿಯ ಮಹಾರಾಜನಾಗಿದ್ದ ಅಬ್ದುಲ್ಲಾ ನಿಧನರಾದ ನಂತರ ಇಂದಿನ ಯುವರಾಜ ಮೊಹಮದ್ ಬಿನ್ ಸಲ್ಮಾನ್ ಅವರ ತಂದೆ ಅಬ್ದುಲ್ಲಾ ಅಜೀಜ್ ರಾಜನ ಹುದ್ದೆಗೆ ಏರಿದ್ದರು.

ಹಿಂದಿನ ಆಡಳಿತ ಅವಧಿಯಲ್ಲಿ ಸೌದಿಯ ಯುವರಾಜ ಮತ್ತು ಅಂತರಿಕ ವ್ಯವಹಾರಗಳ ಖಾತೆ ಸಚಿವರಾಗಿದ್ದ ಮೊಹಮದ್ ಬಿನ್ ನಯೇಫ್ ಅವರ ಬಲಗೈ ಬಂಟನಾಗಿ ಅಲ್ಜಾಬ್ರಿ ಕೆಲಸ ಮಾಡುತ್ತಿದ್ದರು. ಮೊಹಮದ್ ಬಿನ್ ನಯೇಫ್ ಮತ್ತು ಇದೀಗ ಯುವರಾಜನ ಪಟ್ಟದಲ್ಲಿರುವ ಮೊಹಮದ್ ಬಿನ್ ಸಲ್ಮಾನ್ ನಡುವೆ ವೈರತ್ವ ಇತ್ತು. ಮೊಹಮದ್ ಬಿನ್ ಸಲ್ಮಾನ್ ಪಟ್ಟಕ್ಕೆ ಬಂದ ನಂತರ ಅಲ್ಜಾಬ್ರಿ ಕೆನಡಾದಲ್ಲಿ ನೆಲೆಸಿದರು.

ವಾಷಿಂಗ್​ಟನ್ ಪೋಸ್ಟ್​ನ ಅಂಕಣಕಾರ ಜಮಾಲ್ ಕಶ್ಶೋಗಿ ಹತ್ಯೆಯಾದ ಕೇವಲ ಒಂದು ವಾರದಲ್ಲಿ ಅಲ್ಜಾಬ್ರಿ ಸಹ ತನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಅಮೆರಿಕ ರಾಜಧಾನಿ ವಾಷಿಂಗ್​ಟನ್​ನ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದರು. ಮೊಹಮದ್ ಬಿನ್ ಸಲ್ಮಾನ್​ನ ಅನುಯಾಯಿಗಳನ್ನು ನನ್ನನ್ನು ಹಿಂಬಾಲಿಸುತ್ತಿದ್ದು ನನ್ನನ್ನು ಕೊಲೆಗೆ ಸಂಚು ಮಾಡುತ್ತಿದ್ದಾರೆ ಎಂದು ದೂರಿದ್ದರು. ನನ್ನ ಬಳಿ ಮಾಹಿತಿ ಇದೆ ಎಂಬ ಕಾರಣಕ್ಕೆ ಮೊಹಮದ್ ಬಿನ್ ಸಲ್ಮಾನ್ ಹೆದರುತ್ತಿದ್ದಾರೆ ಎಂದು ಅಲ್ಜಾಬ್ರಿ ತಿಳಿಸಿದ್ದರು.

ಸೆಪ್ಟೆಂಬರ್ 2001ರಂದು ಅಮೆರಿಕದ ವಿಶ್ವ ವಾಣಿಜ್ಯ ಸಂಕೀರ್ಣದ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಸಂಸ್ಥೆಗಳ ನಡುವಣ ಕೊಂಡಿಯಾಗಿ ಅಲ್ಜಾಬ್ರಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಹಲವು ಸೌದಿ ಮತ್ತು ಅಮೆರಿಕನ್ನರ ಜೀವಗಳನ್ನೂ ಅಲ್ಜಾಬ್ರಿ ಉಳಿಸಿದ್ದರು. 2010ರಲ್ಲಿ ಅಮೆರಿಕದತ್ತ ಹೊರಟಿದ್ದ ಬಾಂಬ್ ತುಂಬಿದ್ದ ವಿಮಾನಗಳನ್ನು ಅಮೆರಿಕ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಮೂಲಕ ಅಮೆರಿಕದಲ್ಲಿ ಮತ್ತೊಮ್ಮೆ ಕಟ್ಟಡಗಳಿಗೆ ವಿಮಾನ ಗುದ್ದಿಸುವ ಅಲ್​ಖೈದಾ ಸಂಚು ವಿಫಲಗೊಂಡಿತ್ತು ಎಂದು ಸಿಬಿಎಸ್ ಸುದ್ದಿವಾಹಿನಿ ಹೇಳಿದೆ.

ಇದನ್ನೂ ಓದಿ: Drone Attack: ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಡ್ರೋನ್ ದಾಳಿ; ಪಾಕಿಸ್ತಾನ ಖಂಡನೆ ಇದನ್ನೂ ಓದಿ: Saudi Aramco: ಸೌದಿ ರಾಜಕುಮಾರನ ಕನಸು ನನಸು ಮಾಡಿದ ಅರಾಮ್ಕೊ; ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ಗೆ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು