Drone Attack: ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಡ್ರೋನ್ ದಾಳಿ; ಪಾಕಿಸ್ತಾನ ಖಂಡನೆ

ಸೌದಿ ಏರ್​ಪೋರ್ಟ್​ನಲ್ಲಿ ಡ್ರೋನ್ ದಾಳಿ ನಡೆದಿದ್ದು, ಸ್ಫೋಟದ ತೀವ್ರತೆಗೆ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದ ಕಿಟಕಿಗಳು ಛಿದ್ರವಾಗಿವೆ. ಈ ಘಟನೆಯಲ್ಲಿ 10 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Drone Attack: ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಡ್ರೋನ್ ದಾಳಿ; ಪಾಕಿಸ್ತಾನ ಖಂಡನೆ
ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 09, 2021 | 5:22 PM

ಜಿಝಾನ್: ಸೌದಿ ಅರೇಬಿಯಾದ ಜಿಝಾನ್ ನಗರದ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ತುಂಬಿದ ಡ್ರೋನ್ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ 10 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ 6 ಜನರು ಸೌದಿ ಅರೇಬಿಯಾ ಪ್ರಜೆಗಳಾಗಿದ್ದು, ಮೂವರು ಬಾಂಗ್ಲಾದೇಶದವಾಗಿದ್ದಾರೆ. ಇನ್ನೊಬ್ಬರು ಸುಡಾನ್ ಪ್ರಜೆಯಾಗಿದ್ದಾರೆ.

ಇಂದು ಮುಂಜಾನೆ ಸೌದಿ ಏರ್​ಪೋರ್ಟ್​ನಲ್ಲಿ ಡ್ರೋನ್ ದಾಳಿ ನಡೆದಿದ್ದು, ಸ್ಫೋಟದ ತೀವ್ರತೆಗೆ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದ ಕಿಟಕಿಗಳು ಛಿದ್ರವಾಗಿವೆ. ದಾಳಿ ನಡೆಸಿದ ಹೌತಿ ಬಂಡಾಯಕಾರರು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಈ ರೀತಿ ಆಗಾಗ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುತ್ತಾರೆ ಎಂದು ಸೌದಿ ಅರೇಬಿಯಾದ ವಕ್ತಾರರು ತಿಳಿಸಿದ್ದಾರೆ.

ಈ ದಾಳಿಯಿಂದ ಹೆಚ್ಚೇನೂ ಅಪಾಯಗಳು, ಹಾನಿ ಆಗಿಲ್ಲ. ವಿಮಾನ ನಿಲ್ದಾಣದ ಕೆಲವು ಕಿಟಕಿಗಳ ಗಾಜುಗಳು ಒಡೆದು ಹೋಗಿವೆ. ಕೆಲವು ವಸ್ತುಗಳು ಛಿದ್ರವಾಗಿವೆ. ಯೆಮೆನಿ ಗಡಿಯಿಂದ 6 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೌತಿ ಉಗ್ರರು ಸೌದಿಯಲ್ಲಿ ನಡೆಸಿರುವ ಡ್ರೋನ್ ದಾಳಿಯನ್ನು ಪಾಕಿಸ್ತಾನ ಬಲವಾಗಿ ಖಂಡಿಸಿದೆ.

ಇದನ್ನೂ ಓದಿ: Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ; 20 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ಅಫ್ಘಾನ್​​ನಲ್ಲಿ ತಾಲಿಬಾನ್​ ಆಡಳಿತ: ಭಾರತಕ್ಕೆ ಬಂದ ಸೌದಿ ಅರೇಬಿಯಾ ವಿದೇಶಾಂಗ ವ್ಯವಹಾರಗಳ ಸಚಿವ, ನಾಳೆ ಪ್ರಧಾನಿ ಮೋದಿ ಭೇಟಿ