ರಾಜಾ ವೆಂಕಟಪ್ಪ ನಾಯಕರನ್ನು ಕಳೆದುಕೊಂಡಿರುವ ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ: ಸುರಪುರ ಕ್ಷೇತ್ರದ ನಿವಾಸಿಗಳು

|

Updated on: Feb 26, 2024 | 10:40 AM

ರಾಜಾ ವೆಂಕಟ್ಟಪ್ಪ ನಾಯಕ ಅಂತಿಮ ದರ್ಶನಕ್ಕೆ ಜನ ಸಾಗರೋಪಾದಿಯಲ್ಲಿ ಬರುತ್ತಿರುವುದನ್ನು ಗಮನಿಸಿದರೆ, ಅವರು ಜನಾನುರಾಗಿ ನಾಯಕರಾಗಿದ್ದರು ಅನ್ನೋದು ವೇದ್ಯವಾಗುತ್ತದೆ. ಜನ ಅವರು ಮಾಡಿದ ಕೆಲಸಗಳನ್ನು ನೆನಪಿಸಿಕೊಂಡು ದುಃಖಿಸುತ್ತಿದ್ದಾರೆ. ಗ್ರಾಮವೊಂದರ ನಿವಾಸಿಗಳು, ಅಗಲಿದ ನಾಯಕ ತಮಗೆ ತಂದೆಯಂತಿದ್ದರು ಎನ್ನುತ್ತಿದ್ದಾರೆ.

ಯಾದಗಿರಿ: ಜಿಲ್ಲೆಯ ಸುರಪುರದ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayak) ನಿನ್ನೆ ವಿಧಿವಶರಾದರು, ಅವರ ಅಂತಿಮ ಸಂಸ್ಕಾರ ಇಂದು ಸಾಯಂಕಾಲ ಸ್ವಕ್ಷೇತ್ರದಲ್ಲಿ ನಡೆಯಲಿದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತ ನಾಯಕನ ಪಾರ್ಥೀವ ಶರೀರವನ್ನು ಸುರಪುರದ ಪ್ರಭು ಕಾಲೇಜು ಆವರಣದಲ್ಲಿ (Prabhu college premises) ಇರಿಸಲಾಗಿದೆ. ಸುರಪುರ ಮತಕ್ಷೇತ್ರದ ನಾನಾ ಗ್ರಾಮಗಳ ನಿವಾಸಿಗಳು ತಂಡೋಪತಂಡಗಳಲ್ಲಿ ಬಂದು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಜನಪ್ರಿಯತೆ ಅವನು ಮರಣಿಸಿದಾಗ ಗೊತ್ತಾಗುತ್ತದೆ. ರಾಜಾ ವೆಂಕಟ್ಟಪ್ಪ ನಾಯಕ ಅಂತಿಮ ದರ್ಶನಕ್ಕೆ ಜನ ಸಾಗರೋಪಾದಿಯಲ್ಲಿ ಬರುತ್ತಿರುವುದನ್ನು ಗಮನಿಸಿದರೆ, ಅವರು ಜನಾನುರಾಗಿ ನಾಯಕರಾಗಿದ್ದರು ಅನ್ನೋದು ವೇದ್ಯವಾಗುತ್ತದೆ. ಜನ ಅವರು ಮಾಡಿದ ಕೆಲಸಗಳನ್ನು ನೆನಪಿಸಿಕೊಂಡು ದುಃಖಿಸುತ್ತಿದ್ದಾರೆ. ಗ್ರಾಮವೊಂದರ ನಿವಾಸಿಗಳು, ಅಗಲಿದ ನಾಯಕ ತಮಗೆ ತಂದೆಯಂತಿದ್ದರು, ಯಾವುದೇ ಸಮಸ್ಯೆ ಎದುರಾದಾಗ, ಫೋನ್ ಮಾಡಿದಾಕ್ಷಣ ನೆರವಿಗೆ ಬರುತ್ತಿದ್ದರು, ಅವರನ್ನು ಕಳೆದುಕೊಂಡು ಅನಾಥರಂತಾಗಿದ್ದೇವೆ ಎನ್ನುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ