ಬೆಂಗಳೂರು: ಮುಸ್ಲಿಂ ಧರ್ಮದ ಪವಿತ್ರ ಹಬ್ಬಗಳಲ್ಲಿ ರಂಜಾನ್ ಕೂಡಾ ಒಂದು. ಈ ಹಬ್ಬದಲ್ಲಿ ಉಪವಾಸ ಇರುವುದೇ ವಿಶೇಷತೆ. ರಾಜ್ಯದ ಮುಸ್ಲಿಂಮರು ಕೆಲವು ಕಡೆ ಇಂದಿನಿಂದ ಉಪವಾಸವಿದ್ದರೆ, ಇನ್ನು ಕೆಲವು ಕಡೆ ನಾಳೆಯಿಂದ ಉಪವಾಸವಿರುತ್ತಾರೆ. ಮಹಾಮಾರಿ ಕೊರೊನಾ ನಡುವೆಯೂ ರಾಜ್ಯದಲ್ಲಿ ಉಪವಾಸವನ್ನು ಆಚರಿಸುವ ಮುಸ್ಲಿಂಮರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಾರ್ಗಸೂಚಿಗಳು ಹೀಗಿವೆ
* ಕಂಟೇನ್ಮೆಂಟ್ ಜೋನ್ಗಳಲ್ಲಿರುವ ಮಸೀದಿಗಳು ಬಂದ್ ಮಾಡಿರಬೇಕು. ಮುಂದಿನ ಆದೇಶದವರೆಗೆ ಬಂದ್ ಮಾಡಿರಬೇಕು. ಉಳಿದ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ.
* ಉಪವಾಸ ಬಿಡುವಾಗ ಮಸೀದಿಗೆ ಆಹಾರ ತರಬಾರದು.
* ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು.
* ಸಾಮೂಹಿಕ ಪ್ರಾರ್ಥನೆಯಲ್ಲಿ ದೈಹಿಕ ಅಂತರ ಕಡ್ಡಾಯ
* ಪ್ರಾರ್ಥನೆಗೂ ಮೊದಲು ಮಾಡುವ ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
* ಮನೆಯಲ್ಲಿಯೇ ವುಲೂಹ್ ಮಾಡಿಕೊಂಡು ಬರಬೇಕು.
* ನಮಾಜ್ ವೇಳೆ ಒಂದೇ ಕಾರ್ಪೆಟ್ ಬಳಸುವಂತಿಲ್ಲ. ವೈಯಕ್ತಿಕವಾಗಿ ಕಾರ್ಪೆಟ್ ಬಳಸಬೇಕು.
* ಪ್ರಾರ್ಥನೆಗೆ 5 ನಿಮಿಷ ಮುಂಚಿತವಾಗಿ ಮಸೀದಿ ತೆರೆಯಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಮಸೀದಿಗಳಲ್ಲಿ ನಮಾಜ್ ಮಾಡುವುದಕ್ಕೆ ಸಮಯ ನಿಗದಿ
ದೈಹಿಕ ಅಂತರ ಪಾಲಿಸುವುದಕ್ಕಾಗಿ 3 ಪಾಳಿಯ ಸಮಯವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಮಧ್ಯಾಹ್ನ 12.45 ರಿಂದ 1.45ರ ವರೆಗೆ ನಮಾಜ್ ಮಾಡಲು ಅವಕಾಶವಿರುತ್ತದೆ. ನಂತರ ಮಧ್ಯಾಹ್ನ 1.30 ರಿಂದ 2 ಗಂಟೆಯವರೆಗೆ ಮತ್ತು 2.30 ರಿಂದ 3 ಗಂಟೆಯವರೆಗೆ ನಮಾಜ್ ಮಾಡುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.
ದಾವಣಗೆರೆಯಲ್ಲಿ ಸಂಜೆ 7 ಗಂಟೆ ನಂತರ ಕೊವಿಡ್ ಲಸಿಕೆ ನೀಡಿಕೆ
ದಾವಣಗೆರೆ: ರಂಜಾನ್ ಉಪವಾಸ ಹಿನ್ನೆಲೆ ನಾಳೆಯಿಂದ ಮುಸ್ಲಿಂಮರಿಗೆ ಸಂಜೆ 7 ಗಂಟೆ ನಂತರ ಕೊವಿಡ್ ಲಸಿಕೆ ನೀಡಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿರ್ಧರಿಸಿದ್ದಾರೆ. ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ
Ramadan 2021: ರಂಜಾನ್ ಹಬ್ಬದ ಪ್ರಾಮುಖ್ಯತೆ, ಉಪವಾಸದ ಆರಂಭ.. ಇವೆಲ್ಲದರ ಡಿಟೇಲ್ಸ್ ಇಲ್ಲಿದೆ