Eid Ul Fitr 2021: ಮನೆಯ್ಲಲೇ ರಂಜಾನ್ ಪ್ರಾರ್ಥನೆ; ಇಂದು ಕರವಳಿಯಾದ್ಯಂತ ಸರಳ ಹಬ್ಬ ಆಚರಣೆ

| Updated By: Digi Tech Desk

Updated on: May 13, 2021 | 4:15 PM

Ramadan Eid Festival 2021: ಸೆಮಿ ಲಾಕ್ಡೌನ್‌ನಿಂದಾಗಿ ಕಾರವಾರದಲ್ಲಿ ರಂಜಾನ್ ಸಂಭ್ರಮಾಚರಣೆ ಕಳೆಗುಂದಿತ್ತು. ಭಟ್ಕಳ ಜಾಮಿಯಾ ಮಸೀದ್, ಖಾಲಿಫಾ ಜಾಮಿಯಾ ಮಸೀದ್ ಮುಂತಾದವುಗಳಿಗೆ ಬೀಗ ಹಾಕಿದ್ದರಿಂದ ಮನೆಯಲ್ಲೇ ರಂಜಾನ್ ನಮಾಜ್ ಸಲ್ಲಿಸಲಾಗಿದೆ. ಮುಸ್ಲಿಮರು ಸರಕಾರದ ನಿಯಮ‌ ಪಾಲಿಸಿ ಮನೆಯಲ್ಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

Eid Ul Fitr 2021: ಮನೆಯ್ಲಲೇ ರಂಜಾನ್ ಪ್ರಾರ್ಥನೆ; ಇಂದು ಕರವಳಿಯಾದ್ಯಂತ ಸರಳ ಹಬ್ಬ ಆಚರಣೆ
ಮನೆಯಲ್ಲೇ ರಂಜಾನ್ ಪ್ರಾರ್ಥನೆ ಮಾಡಿದ ಮುಸ್ಲಿಮರು
Follow us on

ಕಾರವಾರ: ಕೊರೊನಾ ಎರಡನೇ ಅಲೆಯ ಭೀಕರತೆಯ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ವಿಧಿಸಿದ್ದು ಸರ್ಕಾರದ ಮಾರ್ಗಸೂಚಿಯಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಸೇರಿದಂತೆ ಕರಾವಳಿ ತೀರದ ಮುಸ್ಲಿಮರು ಇಂದು (ಗುರುವಾರ) ಸರಳವಾಗಿ ಈದ್ ಉಲ್ ಫಿತರ್ ಆಚರಿಸಿದ್ದಾರೆ.

ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಬಟ್ಟೆಗೆ ಅತ್ತರ್ ಹಾಕಿ ಮನೆಯಲ್ಲಿ ಮಾಡಿದ ಸಿಹಿ ಸವಿದು ಎಲ್ಲಾ ಮುಸ್ಲಿಮರು ಒಟ್ಟಾಗಿ ಈದ್ ನಮಾಜ್ ಮುಗಿಸಿ, ಪ್ರವಚನ ಕೇಳಿ ಪರಸ್ಪರ ಆಲಿಂಗಿಸಿ, ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಬಳಿಕ ಮನೆಯಲ್ಲಿ ಮಾಡಿದ ಸಿಹಿ ಹಂಚಿ, ಸಂಬಂಧಿಕರು, ಸ್ನೇಹಿತರ ಮನೆಗೆ ಸೌಹಾರ್ದ ಭೇಟಿ ನೀಡುವುದು. ಈ ರೀತಿ ಪ್ರತಿ ವರ್ಷ ರಂಜಾನ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಿದ್ದರು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮುಸ್ಲಿಮರು ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈದ್ಗ, ಮಸೀದಿಗಳಿಗೆ ತೆರಳಲಿಲ್ಲ. ಸರಳವಾಗಿ ಆಚರಿಸಿದ್ದಾರೆ.

ಸೆಮಿ ಲಾಕ್ಡೌನ್‌ನಿಂದಾಗಿ ಕಾರವಾರದಲ್ಲಿ ರಂಜಾನ್ ಸಂಭ್ರಮಾಚರಣೆ ಕಳೆಗುಂದಿತ್ತು. ಭಟ್ಕಳ ಜಾಮಿಯಾ ಮಸೀದ್, ಖಾಲಿಫಾ ಜಾಮಿಯಾ ಮಸೀದ್ ಮುಂತಾದವುಗಳಿಗೆ ಬೀಗ ಹಾಕಿದ್ದರಿಂದ ಮನೆಯಲ್ಲೇ ರಂಜಾನ್ ನಮಾಜ್ ಸಲ್ಲಿಸಲಾಗಿದೆ. ಮುಸ್ಲಿಮರು ಸರಕಾರದ ನಿಯಮ‌ ಪಾಲಿಸಿ ಮನೆಯಲ್ಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದರೆ, ಸೆಮಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ದಾಂಡೇಲಿಯಲ್ಲಿ ಬಟ್ಟೆ ಅಂಗಡಿ ತೆರೆದಿದ್ದು 10 ಗಂಟೆಯ ಬಳಿಕವೂ ಸೋನಾಲಿ ಸಾರಿ, 4ಯು ಬಾಯ್ಸ್ ವರ್ಲ್ಡ್ ಹಾಗೂ ಇತರ ಬಟ್ಟೆ ಅಂಗಡಿಗಳಲ್ಲಿ ಶಟರ್ ಎಳೆದುಕೊಂಡು ಬಟ್ಟೆ ವ್ಯಾಪಾರ ನಡೆದಿದೆ. ದಾಂಡೇಲಿಯ ಲಿಂಕ್ ರಸ್ತೆಯ ಬಳಿಯಿರುವ ಬಟ್ಟೆ ಮಳಿಗೆಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಬಟ್ಟೆ ವ್ಯಾಪಾರ ಮಾಡಲಾಗಿದೆ.

ಇದನ್ನೂ ಓದಿ: Ramadan Eid 2021 Date: ಕರಾವಳಿ ಕರ್ನಾಟಕದಲ್ಲಿ ಮೇ 13ರಂದು ಗುರುವಾರವೇ ರಂಜಾನ್ ಆಚರಣೆ

Published On - 3:32 pm, Thu, 13 May 21