ರಾಮನಗರ, ಜುಲೈ 22: ಮಾರಕಾಸ್ತ್ರಗಳಿಂದ ಮಹಿಳೆಯರು ಸೇರಿದಂತೆ 7 ಜನರ ಮೇಲೆ ಹಲ್ಲೆ (attacked) ನಡೆದಿರುವಂತಹ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮಾಳಗಾಳು ಗ್ರಾಮದ ಎನ್.ಕೆ.ಕಾಲೋನಿಯಲ್ಲಿ ನಡೆದಿದೆ. ಗಡಿಪಾರು ರೌಡಿಶೀಟರ್ (rowdy sheeter) ಹರ್ಷ ಆ್ಯಂಡ್ ಗ್ಯಾಂಗ್ನಿಂದ ಕೃತ್ಯ ಆರೋಪ ಮಾಡಲಾಗಿದೆ. ದಾರಿಗೆ ಅಡ್ಡವಾಗಿ ನಿಂತಿದ್ದಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆ ಸಂಬಂಧ ಕೆಲವರನ್ನ ವಶಕ್ಕೆ ಪಡೆಯಲಾಗಿದ್ದು, ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಗಲಾಟೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷನ ಕೈ ಕಟ್ ಆಗಿದೆ. ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗೆ ಮನವಿ ಮಾಡಲಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆದ ಕಾರಣ ಇಡಿ ಬಡಾವಣೆಯಲ್ಲಿ ಆತಂಕ ಶುರುವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿಬಿದ್ದು ಓರ್ವನಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡ್ಲು ಗ್ರಾಮ ಬಳಿ ನಡೆದಿದೆ. ಕಾರಿನ ಮೇಲೆ ಮರ ಉರುಳಿಬಿದ್ದ ಬಳಿಕ ಕಂಬವೂ ನೆಲಕ್ಕುರುಳಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?
ವಿದ್ಯುತ್ ಕಂಬ ನೇರವಾಗಿ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸಿಗಂಧೂರು ಚೌಡೇಶ್ವರಿದೇವಿ ದರ್ಶನ ಪಡೆದು ಕುಟುಂಬ ಹಿಂದಿರುಗುತ್ತಿತ್ತು. ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ.
ಮೈಸೂರು: ಸಾಲಿಗ್ರಾಮ ತಾಲೂಕಿನ ಬಾಚಳ್ಳಿ ಗ್ರಾಮದಲ್ಲಿ ಜಾಗದ ವಿಚಾರಕ್ಕೆ ದೇವಿರಮ್ಮ ಮತ್ತು ನಾಗೇಶ್ ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಮಹಿಳೆಯರ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ನಾಗೇಶ್, ಚಂದ್ರಹಾಸ, ಪ್ರಕಾಶ್, ರೂಪಾ, ಚೇತನ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:57 pm, Mon, 22 July 24