ಬಿಜೆಪಿ ಅಲೆಯನ್ನ ಡಿಕೆ ಬ್ರದರ್ಸ್​ 2 ತಾಸಿನಲ್ಲಿ ಬದಲಿಸ್ತಾರೆ, ಅದಕ್ಕೆ ನಾನು ಆ 2 ದಿನ ಮಲಗುವುದಿಲ್ಲ: ನಿಖಿಲ್

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್​ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಅಲೆ ಡಿಕೆ ಬ್ರದರ್ಸ್​ 2 ತಾಸಿನಲ್ಲಿ ಬದಲಿಸುತ್ತಾರೆ. ಅದಕ್ಕೆ ಈ ಬಾರಿ ನಾನು ಆ ಎರಡು ದಿನ ಮಲಗುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಗಳು ಸಾಕಷ್ಟು ಬಲಿಷ್ಠವಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ ಅಲೆಯನ್ನ ಡಿಕೆ ಬ್ರದರ್ಸ್​ 2 ತಾಸಿನಲ್ಲಿ ಬದಲಿಸ್ತಾರೆ, ಅದಕ್ಕೆ ನಾನು ಆ 2 ದಿನ ಮಲಗುವುದಿಲ್ಲ: ನಿಖಿಲ್
ನಿಖಿಲ್ ಕುಮಾರಸ್ವಾಮಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By:

Updated on: Apr 18, 2024 | 12:53 PM

ರಾಮನಗರ, ಏಪ್ರಿಲ್ 18: ಕಳೆದ ಬಾರಿ ಗಿಫ್ಟ್ ಹಂಚಿರೋದು ನಮಗೆ ಗೊತ್ತಿದೆ. ಈ ಬಾರಿ ಆ ಇತಿಹಾಸ ಮರುಕಳಿಸಲ್ಲ. ಬಿಜೆಪಿ ಅಲೆ ಡಿಕೆ ಬ್ರದರ್ಸ್​ 2 ತಾಸಿನಲ್ಲಿ ಬದಲಿಸುತ್ತಾರೆ. ಅದಕ್ಕೆ ಈ ಬಾರಿ ನಾನು ಆ ಎರಡು ದಿನ ಮಲಗುವುದಿಲ್ಲ ಎಂದು JDS ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ 2‌ರಿಂದ ಬೆಳಗ್ಗೆ 4ರವರೆಗೆ ನಾನು‌ ನಿದ್ದೆ ಮಾಡಲ್ಲ. ಕಳೆದ ಬಾರಿ ಗಿಫ್ಟ್ ಹಂಚಿಕೆ ತರಹ ಮತ್ತೆ ಆಗೋದಕ್ಕೆ ನಾವ್ಯಾರು ಬಿಡಲ್ಲ.​ ಈ ಬಾರಿ ಅವರ ಸೋಲು ಖಚಿತ ಎಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಒಂದಷ್ಟು ಜನ ಹೋಗುವುದು, ಮತ್ತೊಂದಷ್ಟು ಜನ ಬರುತ್ತಾರೆ. ಅದಕ್ಕೆ ಪ್ರಾಮುಖ್ಯತೆ ಕೊಡುವುದ ಬೇಡ. ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಗಳು ಸಾಕಷ್ಟು ಬಲಿಷ್ಠವಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮತದಾರರು ತಿರ್ಮಾನ ಮಾಡಿದ್ದಾರೆ ಖಂಡಿತವಾಗಿಯೂ ಡಾ. ಸಿಎನ್​ ಮಂಜುನಾಥ್​ ಅವರಿಗೆ ಗೆಲುವು ಸಾಧಿಸುತ್ತಾರೆ  ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಜುನಾಥ್​ರನ್ನು ಜಯದೇವ ಡೈರೆಕ್ಟರ್ ಹುದ್ದೆಯಿಂದ ತೆಗೆಸಲು ಎಸ್​ಎಂ ಕೃಷ್ಣಗೆ ಚೀಟಿ‌ ಕೊಟ್ಟಿದ್ರು: ಡಿಕೆಶಿ ವಿರುದ್ಧ ಗಂಭೀರ ಆರೋಪ

ರಾಜ್ಯದಲ್ಲೇ‌ ಹೈವೋಲ್ಟೇಜ್ ಪಡೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೆ ನಾಮಪತ್ತ ಸಲ್ಲಿಸುವ ಕೊನೆ ದಿನ ಆಗಿತ್ತು.‌ ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ‌ಡಾ.ಸಿ ಎನ್ ಮಂಜುನಾಥ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಪರ್ಧೆಗೆ ಒಟ್ಟು 31 ನಾಮಿನೇಷನ್ ಸಲ್ಲಿಕೆ ಆಗಿದ್ದು ಇವತ್ತು ಎಲ್ಲಾ ನಾಮಿನೇಷನ್ ಗಳ ಪರಿಶೀಲನೆ ಆಗಲಿದೆ. ಅದ್ರಲ್ಲಿ ವಿಶೇಷ ಅಂದ್ರೆ ಐದು ಜನ ಅಭ್ಯರ್ಥಿ ಗಳು ಮಂಜುನಾಥ್ ಹೆಸರಲ್ಲಿದ್ದು, ಮೂವರು ಅಭ್ಯರ್ಥಿಗಳು ಸುರೇಶ್ ಹೆಸರಲ್ಲಿದ್ದಾರೆ.

ಇದನ್ನೂ ಓದಿ: ಹತಾಶೆಯಿಂದ ಹೀಗೆ ಮಾಡುತ್ತಿದ್ದಾರೆ: ಪ್ರಚಾರಕ್ಕೆ ತೆರಳಿದವರ ಮೇಲಿನ ಹಲ್ಲೆ ಖಂಡಿಸಿದ ಡಾ. ಸಿಎನ್ ಮಂಜುನಾಥ್

ನಾಮಪತ್ರ ಸಲ್ಲಿಕೆ ಮೊದಲ ದಿನ‌ 28 ನೇ ತಾರೀಕು ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಹಾಗೂ ಕನಕಪುರ ತಾಲ್ಲೂಕಿನ ಮರಳೆ ಗ್ರಾಮದ ಸುರೇಶ್ ಎಂ.ಎನ್ ಎಂಬುವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:51 pm, Thu, 18 April 24

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us