ರಾಮನಗರ, (ಸೆಪ್ಟೆಂಬರ್ 03): ಅತ್ಯಾಚಾರ(Rape) ಎನ್ನುವುದು ಹೆಣ್ಣಿನ ಮೇಲಷ್ಟೇ ಅಲ್ಲ. ಈಗ ಕಾಮುಕರು ಪ್ರಾಣಿಗಳನ್ನೂ ಬಿಡುತ್ತಿಲ್ಲ. ಶವ, ಆಡು, ನಾಯಿ, ದನದ ಮೇಲೆ ಅತ್ಯಾಚಾರ ಮಾಡಿದಂತಹ ಬಹಳಷ್ಟು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಪ್ರಾಣಿಗಳ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘಟನೆಗಳ ಕುರಿತೂ ನಾವು ಕೇಳಿದ್ದೇವೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಗರ್ಭಿಣಿ ಮೇಕೆಯ (Pregnant Goat) ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ (Rape) ಕೊಂದು ಹಾಕಿರುವ ದಾರುಣ ಘಟನೆ ಬೆಳಕಿಗೆ ಬಂದಿತ್ತು. ಇಂಥದ್ದೇ ಘಟನೆಯೊಂದು ರಾಮನಗರ(Ramanagara) ಜಿಲ್ಲೆಯಲ್ಲಿ ನಡೆದಿದ್ದು, ಕಾಮುಕನೊಬ್ಬ ಮೇಕೆ ಮೇಲೆ ಅತ್ಯಾಚಾರ ಎಸಗಿ ತನ್ನ ತೀಟೆ ತೀರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ರೋಹಿದ್ ಎನ್ನುವಾತ ಮೇಕೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಇಂದಿರಾ ಕಾಟೇಜ್‌ನಲ್ಲಿ ನಡೆದಿದ್ದು, ಇದೀಗ ರೋಹಿದ್ ವಿರುದ್ಧ ಜಮೀರ್ ಖಾನ್ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೋಹಿದ್ ಪ್ರತಿದಿನ ಬಂದು ಮೇಕೆ ಕೊಂಡೊಯ್ದು ಅತ್ಯಾಚಾರ ಎಸಗುತ್ತಾನೆ ಎಂದು ಜಮೀರ್ ಖಾನ್ ಆರೋಪಿಸಿದ್ದಾರೆ.
ಇದನ್ನೂ ಓದಿ: Shocking News: ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ; ಕಾಸರಗೋಡಿನಲ್ಲೊಂದು ಆಘಾತಕಾರಿ ಘಟನೆ
ಹೀಗೆ ಒಂದು ದಿನ ಅಂದರೆ ಸೆಪ್ಟೆಂಬರ್ 01ರಂದು ರೋಹಿದ್ನನ್ನು ಹಿಂಬಾಲಿಸಿಕೊಂಡು ಹೋದಾಗ ಕೃತ್ಯ ನೋಡಿರುವುದಾಗಿ ಜಮೀರ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಂದು 12 ಗಂಟೆಯಿಂದ 1 ಗಂಟೆವರೆಗೂ ರೋಹಿದ್ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದು, ಮೇಕೆ ಮೇಲೆ ಅತ್ಯಾಚಾರ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ.