ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್, ಸೆ.8ರಂದು ರಾಮನಗರ ಬಂದ್​ಗೆ ಕರೆ

ಶ್ರೀ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆ.8 ರಂದು ರಾಮನಗರ ಬಂದ್​ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಇದೇ ವಿಚಾರಕ್ಕೆ ಇಂದು ರಾಮನಗರ ಪಟ್ಟಣದಲ್ಲಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಕನ್ನಡಪರ‌ ಸಂಘಟನೆ ಮತ್ತು ಜೆಡಿಎಸ್ ಕಾರ್ಯಕರ್ತರು ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್, ಸೆ.8ರಂದು ರಾಮನಗರ ಬಂದ್​ಗೆ ಕರೆ
ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್
Follow us
| Edited By: Ayesha Banu

Updated on: Sep 03, 2023 | 2:22 PM

ರಾಮನಗರ, ಸೆ.03: ರೇಷ್ಮೆನಗರಿ ರಾಮನಗರದಲ್ಲಿ(Ramanagara) ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು(Rajiv Gandhi Medical College) ಸ್ಥಾಪನೆ ಗೊಂದಲ ಮುಂದುವರಿದಿದೆ. ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ಶಾಸಕರು, ಸಚಿವರ ನಡುವೆಯೇ ಸ್ಪಷ್ಟನೆ ಇಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿಯ ಮೆಡಿಕಲ್ ಕಾಲೇಜು ಯೋಜನೆಯನ್ನು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಹಾಗೂ ಸಂಸದ ಡಿಕೆ ಸುರೇಶ್(DK Suresh) ಬಲವಂತವಾಗಿ ರಾಜೀವ್ ಗಾಂಧಿ ವಿವಿ ಅವರಣದಿಂದ ಕನಕಪುರಕ್ಕೆ(Kanakapura) ಶಿಫ್ಟ್ ಮಾಡುತ್ತಿದ್ದಾರೆ ಎಂದು‌ ಆರೋಪಿಸಿ ಶ್ರೀ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆ.8 ರಂದು ರಾಮನಗರ ಬಂದ್​ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಇದೇ ವಿಚಾರಕ್ಕೆ ಇಂದು ರಾಮನಗರ ಪಟ್ಟಣದಲ್ಲಿ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕನ್ನಡಪರ‌ ಸಂಘಟನೆ ಮತ್ತು ಜೆಡಿಎಸ್ ಕಾರ್ಯಕರ್ತರು ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಸೆಪ್ಟೆಂಬರ್ 8ರ ಬಂದ್​ಗೆ ಸಿದ್ಧತೆ ನಡೆದಿದೆ. ಸುಮಾರು 20 ವರ್ಷಗಳ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿವಿ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಈ ಹಿಂದೆ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಆ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿತ್ತು‌. ಆದ್ರೆ ಈಗ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಬಲವಂತವಾಗಿ ರಾಜೀವ್ ಗಾಂಧಿ ವಿವಿ ಅವರಣದಿಂದ ಕನಕಪುರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಮನಗರ ರಾಜೀವ್ ಗಾಂಧಿ ವಿವಿ ಸ್ಥಳಾಂತರ ಬೇಡ: ಹೆಚ್​ಡಿ ಕುಮಾರಸ್ವಾಮಿ

ಈ ಹಿಂದೆ ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಆಕ್ರೋಶ ಹೊರ ಹಾಕಿದ್ದರು. 2006ರಲ್ಲಿ ರಾಮನಗರಕ್ಕೆ ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಬಂತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆ ಬೇಕು ಅಂತ ನಾನು ಕನಸು ಕಂಡಿದ್ದೆ. 600 ಕೋಟಿ ರೂ ವೆಚ್ಚದಲ್ಲಿ ಹಿಂದಿನ ಸರ್ಕಾರ ಎರಡೂ ಸದನದಲ್ಲಿ ಅನುಮೋದನೆ ಕೊಟ್ಟಿತ್ತು. ಈಗ ಮೆಡಿಕಲ್‌ ಕಾಲೇಜು ಸ್ಥಳಾಂತರ ಮಾಡುವುದು ಎಷ್ಟುಸರಿ ಎಂದು ಪ್ರಶ್ನಿಸಿದ್ದರು.

ಮತ್ತೊಂದೆಡೆ ಡಿಕೆ ಶಿವಕುಮಾರ್ ಮಾತನಾಡಿ, ರಾಜಕಾರಣಿಯಾದ ಮೇಲೆ ಇಷ್ಟು ಇರಬಾರದಾ? ನಮ್ಮ ಕ್ಷೇತ್ರಕ್ಕೂ ಅಭಿವೃದ್ಧಿ ಬೇಡವೇ? ಹೀಗಾಗಿ ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಕೊಂಡೊಯ್ಯಲಾಗುತ್ತಿದೆ. ಕನಕಪುರ ರಾಮನಗರ ಜಿಲ್ಲೆಯಲ್ಲೇ ಇದೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಸದ್ಯ ರಾಮನಗರದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು ಸೆ.8 ರಂದು ರಾಮನಗರ ಬಂದ್​ಗೆ ಕರೆ ಕೊಡಲಾಗಿದೆ.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್