ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಯಾರು ಬರಬೇಡಿ ಹುಷಾರ್.! ಫೇಸ್ಬುಕ್ನಲ್ಲಿ ಜನರನ್ನು ಭಯಗೊಳಿಸುವ ಪೋಸ್ಟ್
ರಾತ್ರಿ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಯಾರು ಬರಬೇಡಿ. ಹೆದ್ದಾರಿಯಲ್ಲಿ ದರೋಡೆಕೋರರಿದ್ದಾರೆ ಎಂದು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ರಾಮನಗರ: ರಾತ್ರಿ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysore National Highway) ಯಾರು ಬರಬೇಡಿ. ಹೆದ್ದಾರಿಯಲ್ಲಿ ದರೋಡೆಕೋರರಿದ್ದಾರೆ ಎಂದು ಸಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಲಾಗಿದೆ. ಅಮಿತ್ ಗೌಡ ಎಂಬುವರ ಫೇಸ್ಬುಕ್ (Facebook) ಅಕೌಂಟ್ನಿಂದ ಫೋಸ್ಟ್ ಮಾಡಲಾಗಿದೆ. ವಾಹನ ಕೆಟ್ಟು ನಿಂತ ಸಮಯದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ದರೋಡೆ ಮಾಡುತ್ತಿದ್ದಾರೆ. ಚಾಕು, ಕತ್ತಿ ತೋರಿಸಿ ಹಣ, ಚಿನ್ನಾಭರಣ ದರೋಡೆ ಮಾಡುತ್ತಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ.
ಶ್ರೀರಂಗಪಟ್ಟಣದಿಂದ ಕೇಂಗೇರಿವರೆಗೂ ಯಾವುದೇ ಅಂಗಡಿ, ಕಟ್ಟಡವಿಲ್ಲ. ಸಹಾಯಕ್ಕಾಗಿ ಕಿರುಚಾಡಿದ್ರೂ ಯಾರು ಬರುವುದಿಲ್ಲ. ಹೆದ್ದಾರಿಯಲ್ಲಿ ರಾತ್ರಿ ವೇಳೆ ಮೊಳೆ ಬಡಿದಿರುವ ಮಣೆಯನ್ನು ರಸ್ತೆ ಮೇಲೆ ಹಾಕಿ, ವಾಹನ ಪಂಚರ್ ಅಗುವಂತೆ ಮಾಡಿ ದರೋಡೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ರಸ್ತೆ ಎಕ್ಸಪ್ರೆಸ್ ವೇ ಅಲ್ಲ ಪ್ರವೇಶ ನಿಯಂತ್ರಿತ ಹೆದ್ದಾರಿ: ಎನ್ಹೆಚ್ಎಐ
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಉಡಾಫೆ ಉತ್ತರ ನೀಡುತ್ತಾರೆ. ಪ್ರತಿನಿತ್ಯ ಕಾರು, ಲಾರಿ ದರೋಡೆ ನಡೆಯುತ್ತಿವೆ. ಆದರೆ ಸತ್ಯ ಯಾರಿಗೂ ಗೊತ್ತಿಲ್ಲ. ಈಗಾಗಿ ಯಾರು ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಮಲಗಬೇಡಿ. ದರೋಡೆ, ಮಾರಣಾಂತಿಕ ಹಿಂಸೆಗೆ ಒಳಗಾಗಬೇಡಿ ಎಂದಯ ಹೆದ್ದಾರಿ ಬಗ್ಗೆ ಭಯ ಹುಟ್ಟಿಸುವ ರೀತಿಯಲ್ಲಿ ಫೋಸ್ಟ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪೊಸ್ಟ್ ಹಾಕಿರುವ ವ್ಯಕ್ತಿಗಾಗಿ ರಾಮನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ