ಅಕ್ಕಪಕ್ಕ ಕುಳಿತರೂ ಬಿಎಸ್​​ವೈ-ಸೋಮಣ್ಣ ಸೈಲೆಂಟ್: ಡಿಕೆಶಿ ಬರ್ತಿದ್ದಂತೆಯೇ ಎದ್ದು ನಿಂತು ಸ್ವಾಗತಿಸಿದ ನಾಯಕರು

Edited By:

Updated on: Jul 03, 2026 | 3:31 PM

ಮುಖ್ಯಾಂಶಗಳು

  • ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಡಿಕೆಶಿ ಎಂಟ್ರಿ
  • ವೇದಿಕೆಗೆ ಆಗಮಿಸಿದ ಸಿಎಂ ಡಿಕೆ ಶಿವಕುಮಾರ್ ಗೆ ಸೋಮಣ್ಣ, ಯಡಿಯೂರಪ್ಪ ಸ್ವಾಗತ
  • ವೇದಿಕೆ ಮೇಲಿದ್ದ ಎಲ್ಲಾ ಶ್ರೀಗಳಿಗೆ ನಮಸ್ಕಾರ ಮಾಡಿದ ಸಿಎಂ

ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ ಶ್ರೀ ಶ್ರೀ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಿ, ತ್ರಿವಿಧ ದಾಸೋಹಿ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಡಿಕೆ ಶಿವಕುಮಾರ್ ಅವರು ವೇದಿಕೆ ಮೇಲೆ ಆಗಮಿಸುತ್ತಿದ್ದಂತೆಯೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಎದ್ದು ನಿಂತು ಸ್ವಾಗತ ಮಾಡಿದರು. ಇನ್ನು ಇದೇ ವೇಳೆ ಸೋಮಣ್ಣ ಅವರು ಡಿಕೆ ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿದರು. ಬಳಿಕ ಡಿಕೆಶಿ, ವೇದಿಕೆ ಮೇಲಿದ್ದ ಎಲ್ಲಾ ಸ್ವಾಮೀಜಿಗಳಿಗೆ ನಮಸ್ಕರಿಸಿದರು.ಇನ್ನೊಂದಡೆ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ಅವರು ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತರೂ ಸಹ ಮಾತನಾಡದೆ ಸೈಲೆಂಟ್ ಆಗಿದ್ದರು.

ರಾಮನಗರ, (ಜುಲೈ 03):  ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ ಶ್ರೀ ಶ್ರೀ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಭಾಗವಹಿಸಿ, ತ್ರಿವಿಧ ದಾಸೋಹಿ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಡಿಕೆ ಶಿವಕುಮಾರ್ ಅವರು ವೇದಿಕೆ ಮೇಲೆ ಆಗಮಿಸುತ್ತಿದ್ದಂತೆಯೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಎದ್ದು ನಿಂತು ಸ್ವಾಗತ ಮಾಡಿದರು. ಇನ್ನು ಇದೇ ವೇಳೆ ಸೋಮಣ್ಣ ಅವರು ಡಿಕೆ ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿದರು. ಬಳಿಕ ಡಿಕೆಶಿ, ವೇದಿಕೆ ಮೇಲಿದ್ದ ಎಲ್ಲಾ ಸ್ವಾಮೀಜಿಗಳಿಗೆ ನಮಸ್ಕರಿಸಿದರು.ಇನ್ನೊಂದಡೆ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ಅವರು ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತರೂ ಸಹ ಮಾತನಾಡದೆ ಸೈಲೆಂಟ್ ಆಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us