AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದಲ್ಲಿ ಕುರ್ಚಿ ಗಲಾಟೆ: ಕುಳಿತುಕೊಳ್ಳೂ ವಿಚಾರಕ್ಕೆ ಜೆಡಿಎಸ್​​-ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್

ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜಟಾಪಟಿ ಮುಂದುವರಿದಿದ್ದು, ಕುರ್ಚಿಗಾಗಿ ಗಲಾಟೆ ಎರಡು ಪಕ್ಷದ ನಡುವೆ ಗಲಾಟೆಯಾಗಿದೆ.

ಚನ್ನಪಟ್ಟಣದಲ್ಲಿ ಕುರ್ಚಿ ಗಲಾಟೆ: ಕುಳಿತುಕೊಳ್ಳೂ ವಿಚಾರಕ್ಕೆ ಜೆಡಿಎಸ್​​-ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್
ಚನ್ನಪಟ್ಟಣ ಬಮೂಲ್ ಕಚೇರಿಯಲ್ಲಿ ಬಿಜೆಪಿ, ಜೆಡಿಎಸ್​ ಕಾರ್ಯಕರ್ತರ ಗಲಾಟೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 27, 2023 | 12:17 PM

Share

ರಾಮನಗರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರ ಮೇಲೊಬ್ಬರು ಕಿಡಿಕಾರುತ್ತಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ಬಮೂಲ್ ಕಚೇರಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಹಾಗೂ ಬಮೂಲ್ ನಿರ್ದೇಶಕ ಜಯಮುತ್ತು ಮಧ್ಯೆ ಗಲಾಟೆಯಾಗಿದೆ. ಕುರ್ಚಿ ಮೇಲೆ ಕುಳಿತುಕೊಳ್ಳಲು ಮುಂದಾದ ಉಪ ವ್ಯವಸ್ಥಾಪಕ ಹೇಮಂತ್​ನನ್ನ ಜೆಡಿಎಸ್​​ನ ಜಯಮುತ್ತು ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಜೆಡಿಎಸ್​ ಬೆಂಬಲಿಗರ ಈ ನಡೆಗೆ ಬಿಜೆಪಿಯ ಲಿಂಗೇಶ್​ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಭಯ ನಾಯಕರ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿದ್ದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ.

ಜಿಲ್ಲೆಯಲ್ಲಿ ಪ್ರಬಲ ಜೆಡಿಎಸ್‌ ಮಣಿಸಲು ಅಶೋಕ್‌ಗೆ ಸಾಧ್ಯವಿಲ್ಲ; ಸ್ಥಳೀಯ ಬಿಜೆಪಿ ಮುಖಂಡರು

ಮಂಡ್ಯ: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದ್ದು, ಉಭಯ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಶುರು ಮಾಡಿವೆ. ಜಿಲ್ಲೆಯಲ್ಲಿ ಪ್ರಬಲ ಜೆಡಿಎಸ್‌ ಮಣಿಸಲು ಅಶೋಕ್‌ಗೆ ಸಾಧ್ಯವಿಲ್ಲ. ಮಂಡ್ಯ ರಾಜಕಾರಣದ ಬಗ್ಗೆ ಅಶೋಕ್‌ಗೆ ಸಂಪೂರ್ಣ ಮಾಹಿತಿ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇರುವ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್​ ವಿಜಯ ಶಾಲಿಯಾಗಿತ್ತು. ಮಂಡ್ಯ ಜೆಡಿಎಸ್‌ನ ಭದ್ರ ಕೋಟೆಯಾಗಿದೆ. ಇಲ್ಲಿ ಅಶೋಕ್ ಗೆಲ್ಲುವುದು ಕಷ್ಟ ಎಂದು ಸ್ಥಳೀಯ ಬಿಜೆಪಿಗರು ಹೇಳುತ್ತಿದ್ದಾರೆ.

ಹಿಂದೆ ಅಪರೇಷನ್ ಕಮಲದಿಂದ ನಾರಾಯಣಗೌಡರು ಬಿಜೆಪಿಗೆ ಬಂದಿದ್ದರು. ಇದರಿಂದ ಉಪಚುನಾವಣೆಯಲ್ಲಿ ನಾರಾಯಣಗೌಡರಿಂದ 1 ಕ್ಷೇತ್ರದಲ್ಲಿ ಜಯಸಾಧಿಸಿದ್ದರು. ಈ ಭಾರಿ ಕನಿಷ್ಠ 4 ಸ್ಥಾನವಾದ್ರು ಮಂಡ್ಯದಲ್ಲಿ ಗೆಲುವು ಸಾಧಿಸಬೇಕೆಂಬ ಗುರಿಯಿದ್ದು, ಅಶೋಕ್‌ ಉಸ್ತುವಾರಿಯಾದ್ರೆ ಜೆಡಿಎಸ್‌ ಮಣಿಸಲು ಕಷ್ಟವಾಗುತ್ತೆ. ದೇವೇಗೌಡರ ಫ್ಯಾಮಿಲಿ ಜೊತೆ ಚೆನ್ನಾಗಿರುವ ಕಾರಣ ಇದು ನಡೆಯಲ್ಲ. ಅಲ್ಲದೆ ಗೋಪಾಲಯ್ಯ ಜೆಡಿಎಸ್‌ನಲ್ಲಿ ಇದ್ದು ಬಂದವರು ಅವರು ಜೆಡಿಎಸ್‌ ಬಗ್ಗೆ ಚೆನ್ನಾಗಿ ಬಲ್ಲವರು. ಜೆಡಿಎಸ್ ಪಕ್ಷದ ಹಾಗೂ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣ ಮಾಡ್ತಾರೆಂಬ ಮಾತುಗಳು ಕೇಳಿಬಂದಿತ್ತಾದರೂ ಗೋಪಾಲಯ್ಯ ಬಿಜೆಪಿಯಲ್ಲಿ ಆಕ್ಟೀವ್ ಆಗಿದ್ರು ಹೀಗಾಗಿ ಜೆಡಿಎಸ್ ನಾಯಕರ ತಂತ್ರಗಾರಿಕೆ ಒಳ ಮರ್ಮವನ್ನ ಗೋಪಾಲಯ್ಯ ಬಲ್ಲವರಾಗಿದ್ದಾರೆ. ಇದರಿಂದ ಅಶೋಕ್‌ ಬೇಡ ಎಂದು ಸ್ಥಳೀಯ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು