ರಾಮನಗರ: ಸರ್ಕಾರ ಉರುಳಿಸಲು ಯಾರೋ ನಾಲ್ಕು ಜನರಿಂದ ಸಾಧ್ಯವೇ? ಸರ್ಕಾರ ಏನು ಕಡ್ಡಿ ಮೇಲೆ ನಿಂತಿದೆಯಾ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ವ್ಯಂಗ್ಯ ಮಾಡಿದ್ರು. ಹಾಗೂ ಇದೇ ವೇಳೆ ಹೆಚ್ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಅವರ ವೈಫಲ್ಯದಿಂದ JDS, ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿತ್ತು. ಅವರು ಮೋಜು ಮಸ್ತಿ ಮಾಡುತ್ತಿದ್ದರಿಂದ ಸರ್ಕಾರ ಪತನವಾಗಿತ್ತು. ಆದರೆ ಇಂದು ನನ್ನ ಮೇಲೆ ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಸಮ್ಮಿಶ್ರ ಸರ್ಕಾರ ಯಾಕೆ ಉರುಳಿತು ಎಂದು ಎಲ್ಲರಿಗೂ ಗೊತ್ತಿದೆ ಸಿ.ಪಿ.ಯೋಗೇಶ್ವರ್(CP Yogeshwar) ಟೀಕಿಸಿದ್ದಾರೆ.
ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು
ಇನ್ನು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಆವಯ್ಯ ಮೂಡ್ ಬಂದಂಗೆ ಮನಸ್ಸಿಗೆ ಬಂದಂಗೆ ಮಾತಾಡ್ತಾರೆ. ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು. ಮಳೆ ಅನಾಹುತಕ್ಕೂ ಅವರೇ ಕಾರಣವಾಗಬೇಕು ಅಲ್ಲವೇ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಅಷ್ಟು ಗೌರವವಿಲ್ಲ. ಹೆಚ್ಡಿಕೆ ಆರೋಪಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ. ಹೀಗಾಗಿ ನಾವು ಪ್ರಮಾಣಿಕವಾಗಿ ಕೆಲಸ ಮಾಡಲು ನಿಂತಿದ್ದೇವೆ. ಬಹಿರಂಗ ಚರ್ಚೆಗೆ ಬಂದರೆ ಅವರ ಜೊತೆ ಮಾತನಾಡಬಹುದು. ಹೆಚ್.ಡಿ.ಕುಮಾರಸ್ವಾಮಿ ಹಿಟ್ & ರನ್ ಹೇಳಿಕೆ ನೀಡುತ್ತಾರೆ. ಮೊದಲು ಮಾತಾಡಿ ಬಳಿಕ ಓಡಿ ಹೋಗುವುದು ನಾನು ಮಾಡಲ್ಲ ಎಂದರು.
ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿ ಇಡೀ ತಾಲೂಕಿನಲ್ಲಿ ಒಬ್ಬನೇ ಕಂಟ್ರಾಕ್ಟರ್ ಇಟ್ಟುಕೊಂಡು ದಲ್ಲಾಳಿ ವ್ಯಾಪಾರ ಮಾಡುತ್ತಿದ್ದಾರೆ. ನಾನು ಅವರ ಬಗ್ಗೆ ಕೇವಲವಾಗಿ ಮಾತನಾಡಿ ಚಿಕ್ಕವನಾಗಲು ಹೋಗುವುದಿಲ್ಲ. 2023 ರಲ್ಲಿ ಜನ ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸರಿನಾ, ಯೋಗೇಶ್ವರ್ ಸರಿನಾ ಅಂತಾ ನನ್ನ ಬಗ್ಗೆ ಇನ್ನೇನೋ ಆರೋಪ ಮಾಡಲು ತಾಲ್ಲೂಕಿನಲ್ಲಿ ಜನ ಕುಮಾರಸ್ವಾಮಿ ಅವರ ಕೈ ಬಿಟ್ಟಿದ್ದಾರೆ. ನಾಲ್ಕು ಜನ ಕಂಟ್ರಾಕ್ಟರ್ ಬಿಟ್ಟರೇ ಜೆಡಿಎಸ್ ನಲ್ಲಿ ನಂಬಲು ಯಾರು ಇಲ್ಲ. ಜನರಿಗೆ ಅರಿವು ಆಗಿದೆ. ಕುಮಾರಸ್ವಾಮಿ ಅವಕಾಶವಾದಿ ಎಂದು ಜನರಿಗೆ ಮನವರಿಕೆ ಆಗಿದೆ. ತಾಲೂಕಿಗೆ ಬಲವಂತವಾಗಿ ಬಂದು ಜನರ ಮೇಲೆ ಸಿಡುಕುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುತ್ತೆನೇ ಎಂದು ಹೇಳಿರುವುದು ದಾಖಲೆ ಇದೆ. ಆದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಎಲ್ಲಿ ಹೇಳಿದ್ದೆ ಎನ್ನುತ್ತಾರೆ. ಕುಮಾರಸ್ವಾಮಿ ಫರ್ಮ್ ಆಗಿ ಮಾತನಾಡುವುದಿಲ್ಲ, ಕಮಿಟ್ಮೆಂಟ್ ಇಲ್ಲ. 14 ತಿಂಗಳು ಸಿಎಂ ಆದಾಗ ತಾಲೂಕಿನಲ್ಲಿ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಒಳಚರಂಡಿ ಮಾಡಲು ಸಾಧ್ಯವಾಗಿಲ್ಲ. ಬಹಳ ಕೆಲಸ ಮಾಡಬಹುದಿತ್ತು. ಚುನಾವಣೆ ಹತ್ತಿರ ಬರುತ್ತಿದೆ ಎಂದು ಯಾರೊ ಬಲವಂತಕ್ಕೆ ಬರುತ್ತಾರೆ, ಓಡಿ ಹೊಗುತ್ತಾರೆ ಎಂದು ಹೆಚ್ಡಿಕೆ ವಿರುದ್ಧ ಗುಡುಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:36 pm, Sat, 3 September 22