ಸಚಿವ ಅಶ್ವತ್ಥ್ ನಾರಾಯಣ ಇಲ್ಲಿಗೆ ಬಂದು ರಾಮಮಂದಿರ ಕಟ್ಟಲಿ ನೋಡೋಣಾ, ಅವರದು ಚುನಾವಣೆ ಗಿಮಿಕ್ – ಚನ್ನಪಟ್ಟಣದಲ್ಲಿ ಸಂಸದ ಸುರೇಶ್ ತಿರುಗೇಟು

| Updated By: ಆಯೇಷಾ ಬಾನು

Updated on: Feb 20, 2023 | 8:38 PM

ಸಚಿವ ಡಾ.ಅಶ್ವತ್ಥ್ ನಾರಾಯಣ ಇಲ್ಲಿಗೆ ಬಂದು ರಾಮಮಂದಿರ ಕಟ್ಟಲಿ. ಬಿಜೆಪಿಯವರಿಗೆ ಚುನಾವಣೆಗೋಸ್ಕರ ಇವತ್ತಿನಿಂದ ರಾಮ ಪರಿಚಯನಾ? ನಾವು ನಮ್ಮ ಅಪ್ಪನ ಕಾಲದಿಂದಲೂ ರಾಮನನ್ನು ಪೂಜಿಸುತ್ತಿದ್ದೇವೆ. -ಡಿಕೆ ಸುರೇಶ್

ಸಚಿವ ಅಶ್ವತ್ಥ್ ನಾರಾಯಣ ಇಲ್ಲಿಗೆ ಬಂದು ರಾಮಮಂದಿರ ಕಟ್ಟಲಿ ನೋಡೋಣಾ, ಅವರದು ಚುನಾವಣೆ ಗಿಮಿಕ್ - ಚನ್ನಪಟ್ಟಣದಲ್ಲಿ ಸಂಸದ ಸುರೇಶ್ ತಿರುಗೇಟು
ಡಿಕೆ ಸುರೇಶ್
Follow us on

ರಾಮನಗರ: ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಬಜೆಟ್​ನಲ್ಲಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಡಿಕೆ ಸುರೇಶ್ ಡಾ.ಅಶ್ವತ್ಥ್ ನಾರಾಯಣ್​ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯವರಿಗೆ ಚುನಾವಣೆಗೋಸ್ಕರ ಇವತ್ತಿನಿಂದ ರಾಮ ಪರಿಚಯನಾ? ಸಚಿವ ಡಾ.ಅಶ್ವತ್ಥ್ ನಾರಾಯಣ ಇಲ್ಲಿಗೆ ಬಂದು ರಾಮಮಂದಿರ ಕಟ್ಟಲಿ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್​ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಡಾ.ಅಶ್ವತ್ಥ್ ನಾರಾಯಣ ಇಲ್ಲಿಗೆ ಬಂದು ರಾಮಮಂದಿರ ಕಟ್ಟಲಿ. ಬಿಜೆಪಿಯವರಿಗೆ ಚುನಾವಣೆಗೋಸ್ಕರ ಇವತ್ತಿನಿಂದ ರಾಮ ಪರಿಚಯನಾ? ನಾವು ನಮ್ಮ ಅಪ್ಪನ ಕಾಲದಿಂದಲೂ ರಾಮನನ್ನು ಪೂಜಿಸುತ್ತಿದ್ದೇವೆ. ಕಸ ಗುಡಿಸೋಕೆ ಬಂದವರ ಹತ್ತಿರ ನಾವು ಮಾತನಾಡಲ್ಲ. ರಾಮನ ಪೂಜೆ ಮಾಡುವವರು ಪಬ್ಲಿಕ್ ನಲ್ಲಿ ಹೇಳ್ಕೊಂಡು ತಿರುಗಲ್ಲ. ದೇವರು ಪೂಜೆ ಮಾಡೋದನ್ನ ವೈಭವೀಕರಿಸಿಕೊಳ್ಳಲ್ಲ. ಇದು ಚುನಾವಣೆ ಗಿಮಿಕ್, ಚುನಾವಣೆ ಹತ್ತಿರ ಬಂದಾಗ ಹೀಗ್ ಮಾಡ್ತಾರೆ. ರಾಮಮಂದಿರಕ್ಕೆ ಜಾಗ ಗುರುತಿಸಿದ್ದಾರಾ? ವಿನ್ಯಾಸ ಆಗಿದ್ಯಾ, ಬಜೆಟ್‌ನಲ್ಲಿ ಹಣ ಇಟ್ಟಿದ್ದಾರಾ? ಸುಮ್ಮನೆ ಮಾತಾಡ್ತಾರೆ. ರಾಮನ ದೇವಸ್ಥಾನವಾದ್ರೂ ಕಟ್ಟಲಿ, ಹನುಮಂತನ ದೇವಸ್ಥಾನವಾದ್ರು ಕಟ್ಟಲಿ, ಲಕ್ಷ್ಮಿ ದೇವಸ್ಥಾನ ಕಟ್ಟಲಿ. ಜೆಲ್ಲೆಯಲ್ಲಿ ಹಲವು ಕಡೆ ಬೆಟ್ಟ, ದೇವಾಲಯ ಇದೆ. ಎಲ್ಲ ಕಡೆನೂ ಬಂದು ದೇವಾಲಯ ಕಟ್ಟಲಿ. ನಾವೂ ಬೆಂಬಲ ಕೊಡ್ತೀವಿ. ಅವರು ದೇವಸ್ಥಾನ ಕಟ್ತೀವಿ ಅಂದ್ರೆ ನಾವು ಬೇಡ ಅನ್ನೋಕಾಗುತ್ತಾ. ಮಾಡೋ ಕೆಲಸ ಮಾಡ್ದೆ ಪ್ರಚಾರಕ್ಕೆ ಏನೇನೋ ಮಾಡ್ತಿದ್ದಾರೆ.

ಅಶ್ವಥ್ ನಾರಾಯಣ್ ಒಂದು ದೇವಸ್ಥಾನವಾದ್ರೂ ಕಟ್ಟಿದ್ದಾನಾ? ಸುಮ್ಮನೆ ನಾಟಕ ಮಾಡ್ಕೊಂಡ್ ಪ್ರಚಾರ ತಗೋತ್ತಾರೆ. ಜಿಲ್ಲೆಯನ್ನ ಕ್ಲೀನ್ ಮಾಡ್ತೀನಿ ಅಂದ್ರು, ಮಾಡಿದ್ರಾ? ಈಗ ಚುನಾವಣೆಗೋಸ್ಕರ ಇದನ್ನೆಲ್ಲ ಮಾಡ್ತಾರೆ. ರಾಮಮಂದಿರದ ಜೊತೆಗೆ ಅವರ ಕನಸ್ಸಿನಲ್ಲಿ ಬರೋ ಎಲ್ಲಾ ದೇವರುಗಳ ಮಂದಿರ ಕಟ್ಟಲಿ ಎಂದು ಸಚಿವ ಅಶ್ವಥ್ ನಾರಾಯಣ್ ಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲೇ ರಾಮ ಮಂದಿರ ನಿರ್ಮಾಣ: ಡಾ ಸಿ ಎನ್ ಅಶ್ವಥ್ ನಾರಾಯಣ. ಸಚಿವರು

ರಾಮನಗರದಲ್ಲಿ ರಾಮ ಮಂದಿರ ನಾನೇ ಪೂರ್ಣಗೊಳಿಸುತ್ತೇನೆ: ಬಹಿರಂಗವಾಗಿಯೇ ಮುಂದಿನ ಸಿಎಂ ನಾನೇ ಎಂದ ಕುಮಾರಸ್ವಾಮಿ

ರಾಮನಗರ: ರಾಮನಗರದಲ್ಲಿ ರಾಮಮಂದಿರಾ ಕಟ್ಟಲು (Construction of Ram temple in Ramanagara) ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಂದರ್ಭದಲ್ಲಿ ಬಿಜೆಪಿಗೆ ನೆನಪಾಗಿದೆ. ಈ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಹುಶಃ ಈ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ನನ್ನ ಮೇಲೆ ಬರಲಿದೆ. ಏಕೆಂದರೆ ಮುಂದೆ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ರಾಮನಗರದ ಚನ್ನಪಟ್ಟಣದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮಂದಿರ ನಿರ್ಮಾಣದ ಬಗ್ಗೆ ಇವತ್ತು ಘೋಷಣೆ ಮಾಡಿದ್ದಾರೆ ಅಷ್ಟೇ. ನಾಳೆ ಬೆಳಗ್ಗೆ ಕಟ್ಟಲು ಇವರಿಂದ ಸಾದ್ಯವಿಲ್ಲ. ಮುಂದಿನ ಸರ್ಕಾರ ಬಂದ ಮೇಲೆ ಕಾಮಗಾರಿ ಆಗಬೇಕು, ಮುಂದಿನ ಸರ್ಕಾರ ಬಿಜೆಪಿ ಬರಲ್ಲ. ಮುಂದಿನ ಸರ್ಕಾರ ನನ್ನ ನೇತೃತ್ವದಲ್ಲಿ ಇರಲಿದೆ. ಅವರ ಆಸೆಯನ್ನ ನಾನೇ ನೆರವೇರಿಸುತ್ತೇನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:38 pm, Mon, 20 February 23