ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಸಚಿವನ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, 24 ಗಂಟೆ ಒಳಗೆ ಇಬ್ಬರು ತಹಶೀಲ್ದರ್ ವರ್ಗಾವಣೆಯಾಗಿದೆ. (Transfer) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವೇ ಮೇಗಾ ಫೈಟ್ ನಡೆಯುತ್ತಿದ್ದು, ನೆನ್ನೆ ಹೆಚ್.ಡಿ ಕುಮಾರಸ್ವಾಮಿ ಅಪ್ತರಾಗಿದ್ದ ತಹಶೀಲ್ದರ್ ನಾಗೇಶ್ರನ್ನ ವರ್ಗಾವಣೆ ಮಾಡಿ ಸಿ.ಪಿ ಯೋಗೇಶ್ವರ್ ಆಪ್ತ ಸುದರ್ಶನ್ರನ್ನ ನೇಮಕ ಮಾಡಲಾಗಿತ್ತು. ಹೀಗಾಗಿ ಸುದರ್ಶನ್ ನೆನ್ನೆ ತಹಶೀಲ್ದರ್ ಆಗಿ ವರದಿ ಮಾಡಿಕೊಂಡಿದ್ದರು. ಇಂದು ಸುದರ್ಶನ್ ಬಿ.ಕೆ ರನ್ನ ವರ್ಗಾವಣೆ ಮಾಡಿ ಹರ್ಷಾವರ್ಧನ ಜಿ.ಪಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆ.ಎಸ್.ಎಫ್.ಸಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಹರ್ಷವರ್ಧನ ಜಿ ಪಿ, ಸುದರ್ಶನ್ ರನ್ನ ಕುಟುಂಬ ಇ-ಆಡಳಿತ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಏಪ್ರೀಲ್ 8 ರಂದು ಚನ್ನಪಟ್ಟಣ ತಹಶೀಲ್ದರ್ ಆಗಿದ್ದ ನಾಗೇಶ್ರನ್ನ ವರ್ಗಾವಣೆ ಮಾಡಿ ಸುದರ್ಶನ್ ನೇಮಕ ಮಾಡಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆದೇಶ ವಾಪಾಸ್ ಪಡೆದಿದ್ದ ಸರ್ಕಾರ, ನೆನ್ನೆ ಮತ್ತೆ ನಾಗೇಶ್ರನ್ನ ವರ್ಗಾವಣೆ ಮಾಡಿ ಸುದರ್ಶನ್ರನ್ನ ನೇಮಕ ಮಾಡಲಾಗಿತ್ತು. ಇಂದು ಮತ್ತೆ ಸುದರ್ಶನ್ರನ್ನ ವರ್ಗಾವಣೆ ಮಾಡಿ ಹರ್ಷವರ್ಧನ್ ನೇಮಕ ಮಾಡಲಾಗಿದೆ.
10 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.
ಹೋಳೆಪ್ಪಗೌಡ ಆರ್. ಪಾಟೀಲ್-ರಾಯಚೂರು ಪಶ್ಚಿಮ
ಗಿರೀಶ್ ಬಿ.ಸಿ.-ಶಿವಮೊಗ್ಗ ಜಿಲ್ಲೆಯ ಹೊಸನಗರ
ಪ್ರವೀಣ್ ಕುಮಾರ್-ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ
ಭೀಮಣ್ಣ ಎಂ.ಸೂರಿ-ಬಾಗಲಕೋಟೆ ಗ್ರಾಮಾಂತರ
ಧರ್ಮಪ್ಪ ಎನ್.ಜಿ-ಬೆಂಗಳೂರಿನ ಕೆ.ಜಿ.ಹಳ್ಳಿ ಸಂಚಾರಿ ಠಾಣೆ
ಅಂಜನ್ ಕುಮಾರ್.ಕೆ-ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ
ಮಂಜುನಾಥ್ ಬಿ-ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ
ಹರೀಶ್.ಕೆ ಪಾಟೀಲ್-ರಾಜ್ಯ ಗುಪ್ತವಾರ್ತೆ
ದೀಪಕ್ ಎಂ.ಎಸ್-ಶಿವಮೊಗ್ಗ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆ
ರಮೇಶ್.ಆರ್-ಕರ್ನಾಟಕ ಲೋಕಾಯುಕ್ತ
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ