ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದು ನಮ್ಮ ರಾಜ್ಯದ ದುರದೃಷ್ಟ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ

HD Kumaraswamy: ನಾನು ಎಲ್ಲರ ಬಗ್ಗೆ ಸಾಫ್ಟ್ ಆಗಿದ್ದೆ. ಯಡಿಯೂರಪ್ಪ ಬಗ್ಗೆಯೂ ಸಾಫ್ಟ್ ಆಗಿದ್ದೆ. ಅವರಿಗೆ ಒಳ್ಳೆಯ ಕೆಲಸ ಮಾಡಿ ಎಂದು ತಿಳಿಸಿದ್ದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಅದನ್ನೇ ಹೇಳುತ್ತೇನೆ. ಯಾರ ಮೇಲೆ ದ್ವೇಷ ಮಾಡಿ ಏನು ಆಗಬೇಕು? ಕುಮಾರಸ್ವಾಮಿ ಪ್ರಶ್ನೆ

ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದು ನಮ್ಮ ರಾಜ್ಯದ ದುರದೃಷ್ಟ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
Follow us
TV9 Web
| Updated By: guruganesh bhat

Updated on: Jul 30, 2021 | 7:06 PM

ರಾಮನಗರ: ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದು ನಮ್ಮ ರಾಜ್ಯದ ದುರದೃಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಬಿಜೆಪಿಯನ್ನು ಟೀಕಿಸಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗಲೂ ಸಂಪುಟ ರಚನೆ ವಿಳಂಬವಾಗಿತ್ತು. ರಾಜ್ಯ ಬಿಜೆಪಿಯಲ್ಲಿ (BJP) ಈಗಲೂ ಅದೇ ರೀತಿಯ ಪರಿಸ್ಥಿತಿಯಿದೆ. ಸಂಪುಟ ರಚನೆ ಮಾಡುವುದು ಕೂಡ ಸಿಎಂಗೆ ಸವಾಲಾಗಲಿದೆ. ಇದು ನಮ್ಮ ರಾಜ್ಯದ ದುರದೃಷ್ಟ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಆದಷ್ಟು ಬೇಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ರಚಿಸಬೇಕು. ಸಂಪುಟ ರಚನೆಗೆ ಹೈಕಮಾಂಡ್ ಹಸಿರು ನಿಶಾನೆ ನೀಡಬೇಕು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದ. ಜತೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ರಚಿಸಬೇಕಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನ ಕೊಡಲಿ ಎಂದು ಅವರು ಸಲಹೆ ನೀಡಿದ್ದಾರೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟ್ಯಾಂಪೋ, ಐರನ್ ಸ್ಟ್ಯಾಂಪೋ ಗೊತ್ತಿಲ್ಲ. ಹೊಸ ಸರ್ಕಾರದ ಕೆಲಸ ನೋಡಿ ಜನ ತೀರ್ಮಾನಿಸುತ್ತಾರೆ. ಕೆಲವರು ಸರ್ಕಾರದ ಬಗ್ಗೆ ಆತುರದಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಸಿಎಂಗೆ ಅವಕಾಶ ಕೊಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿದ್ದ ದೋಷಗಳನ್ನು ಮತ್ತು ಸಮಸ್ಯೆಗಳನ್ನು ಸರಿಪಡಿಸಿ ಆಡಳಿತ ನೀಡುತ್ತಾರಾ ಎಂದು ನೋಡಬೇಕಿದೆ ಎಂದು ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಯಡಿಯೂರಪ್ಪ ನವರ ಕಾಲದಲ್ಲಿ ಇದ್ದ ದೋಷಗಳು, ಸಮಸ್ಯೆಗಳನ್ನ ಸರಿಪಡಿಸಿ ಉತ್ತಮ ಆಡಳಿತ ನೀಡುತ್ತಾರೋ ಕಾದು ನೋಡಬೇಕು. ನಾನು ಎಲ್ಲರ ಬಗ್ಗೆ ಸಾಫ್ಟ್ ಆಗಿದ್ದೆ. ಯಡಿಯೂರಪ್ಪ ಬಗ್ಗೆಯೂ ಸಾಫ್ಟ್ ಆಗಿದ್ದೆ. ಅವರಿಗೆ ಒಳ್ಳೆಯ ಕೆಲಸ ಮಾಡಿ ಎಂದು ತಿಳಿಸಿದ್ದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಅದನ್ನೇ ಹೇಳುತ್ತೇನೆ. ಯಾರ ಮೇಲೆ ದ್ವೇಷ ಮಾಡಿ ಏನು ಆಗಬೇಕು. ಇದು ಯಾರಿಗೂ ಶಾಶ್ವತ ಅಲ್ಲ. ಭಗವಂತ ಅವಕಾಶ ಕೊಟ್ಟಿದ್ದಾನೆ. ಅಧಿಕಾರಕ್ಕೆ ಬಂದಿದ್ದಾರೆ. ಇದೇ ಸಮಯದಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡಲಿ ಎಂದು ಅವರು ಹಾರೈಸಿದರು. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮಧು ಬಂಗಾರಪ್ಪ ಕಾಂಗ್ರೆಸ್​ಗೆ ಹೋಗಿದ್ದಾರೆ, ಅವರಿಗೆ ಒಳ್ಳೇಯದು ಆಗಲಿ ಎಂದಷ್ಟೇ ಹಾರೈಸಿದರು.

ಇದನ್ನೂ ಓದಿ: 

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆ

ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ

(Former CM HD Kumaraswamy says mlas lobby for ministerial position is bad for Karnataka)