ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದು ಚಿನ್ನದ ಸರ ಮರೆತು ಹೋಗಿದ್ದ ಮಹಿಳೆ; ಪ್ರಾಮಾಣಿಕತೆ ಮೆರೆದು ಸರ ಪೊಲೀಸರಿಗೆ ತಲುಪಿಸಿದ ಚನ್ನಪಟ್ಟಣ ಯುವಕ!

| Updated By: ಸಾಧು ಶ್ರೀನಾಥ್​

Updated on: Aug 24, 2022 | 6:15 PM

Ramanagara SP: ವೃದ್ದೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿ, ಯುವಕನನ್ನು ಉತ್ತೇಜಿಸಿದ್ದಾರೆ.

ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದು ಚಿನ್ನದ ಸರ ಮರೆತು ಹೋಗಿದ್ದ ಮಹಿಳೆ; ಪ್ರಾಮಾಣಿಕತೆ ಮೆರೆದು ಸರ ಪೊಲೀಸರಿಗೆ ತಲುಪಿಸಿದ ಚನ್ನಪಟ್ಟಣ ಯುವಕ!
ಚಿಕಿತ್ಸೆಗೆ ಬಂದು ಚಿನ್ನದ ಸರ ಮರೆತು ಹೋಗಿದ್ದ ಮಹಿಳೆ; ಪ್ರಾಮಾಣಿಕತೆ ಮೆರೆದು ಸರ ಪೊಲೀಸರಿಗೆ ತಲುಪಿಸಿದ ಚನ್ನಪಟ್ಟಣ ಯುವಕ!
Follow us on

ರಾಮನಗರ: ವೃದ್ದೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Ramanagara SP) ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿ, ಯುವಕನನ್ನು ಉತ್ತೇಜಿಸಿದ್ದಾರೆ. ವೃದ್ದೆ (woman) ಜಯಲಕ್ಷಮ್ಮ ಅವರು ಚಿಕಿತ್ಸೆಗೆಂದು ಬಂದು 45 ಗ್ರಾಂ ಚಿನ್ನದ ಸರವನ್ನ ಚನ್ನಪಟ್ಟಣದ ಪುಣ್ಯ ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗಿದ್ದರು.

ಆಗಸ್ಟ್ 14 ರಂದು ಈ ಘಟನೆ ನಡೆದಿತ್ತು. ಅದೇ ದಿನ ಹರ್ಷವರ್ಧನ್ (Channapatna Youth Harshavardhan) ಸಹ ಪುಣ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದ. ಅಲ್ಲಿ ಚಿನ್ನದ ಸರ (gold chain) ಸಿಕ್ಕಿದಾಗ ಅದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮೂಲಕ, ಪೊಲೀಸರಿಗೆ ತಲುಪಿಸಿದ್ದ. ಆನಂತರ ಪೊಲೀಸರು ಪರಿಶೀಲನೆ ನಡೆಸಿ ಜಯಲಕ್ಷಮ್ಮ ಅವರಿಗೆ ಚಿನ್ನದ ಸರ ತಲುಪಿಸಿದ್ದರು. ಹರ್ಷ ವರ್ಧನ್ ಕಾರ್ಯ ಶ್ಲಾಘಿಸಿ, ಜಿಲ್ಲಾ ಎಸ್​​ಪಿ ಅವರಿಂದ ಇಂದು ಪ್ರಶಂಸನಾ ಪತ್ರ ಸಂದಾಯವಾಗಿದೆ.