AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ: ಡಿಕೆ ಶಿವಕುಮಾರ್​​​

ವಿಜಯದಶಮಿ ದಿನ ಹೇಳುತ್ತಿದ್ದೇನೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ. ನಾನೇನು ಮಾಡಬೇಕು ಅದನ್ನು ಮಾಡೇ ಮಾಡುತ್ತೇನೆ. ನಂಬಿಕೆ ಇದೇ ತಾನೇ ಅಂತ‌ ಡಿಕೆ ಶಿವಕಯಮಾರ್​ ಸಾರ್ವಜನಿಕರಿಗೆ ಪ್ರಶ್ನೆ ಮಾಡಿದರು.

ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ: ಡಿಕೆ ಶಿವಕುಮಾರ್​​​
ಡಿಸಿಎಂ ಡಿಕೆ ಶಿವಕುಮಾರ್​
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ವಿವೇಕ ಬಿರಾದಾರ|

Updated on: Oct 24, 2023 | 12:39 PM

Share

ರಾಮನಗರ ಅ.24: ಕನಕಪುರ (Kanakpura) ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ಹೇಳಿದರು. ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾರೋ ಹೆಸರು ಮಾಡಿಕೊಳ್ಳುವುದಕ್ಕೆ ರಾಮನಗರ ಜಿಲ್ಲೆ ಮಾಡಿದ್ದಾರೆ. ನಮ್ಮನ್ನು ರಾಮನಗರ (Ramnagar) ಜಿಲ್ಲೆ ಅಂತಾ ಮೂಲೆಗೆ ತಳ್ಳಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು ಎಂದರು.

ವಿಜಯದಶಮಿ ದಿನ ಹೇಳುತ್ತಿದ್ದೇನೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ. ಬರೀ ಡಿಕೆ ಶಿವಕುಮಾರ್, ಸಿಂಧ್ಯಾ, ಜಯಶಂಕರ್ ನಂಬಿಕೊಳ್ಳಬೇಡಿ. ನಾನೇನು ಮಾಡಬೇಕು ಅದನ್ನು ಮಾಡೇ ಮಾಡುತ್ತೇನೆ. ನಂಬಿಕೆ ಇದೇ ತಾನೇ ಅಂತ‌ ಡಿಕೆ ಶಿವಕಯಮಾರ್​ ಸಾರ್ವಜನಿಕರಿಗೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಮೆಡಿಕಲ್ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದರು: ಡಿಕೆ ಶಿವಕುಮಾರ್

ಕನಕಪುರ ತಾಲೂಕಿನ ಬಗ್ಗೆ ಒಂದಿಷ್ಟು ಮಾಹಿತಿ

ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಅರ್ಕಾವತಿ ನದಿ ದಂಡೆಯಲ್ಲಿದೆ. ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ಕನಕಪುರ  ”’ರೇಷ್ಮೆ ಕಣಿವೆ”’ ಎಂದೇ ಖ್ಯಾತಿಗಳಿಸಿದೆ. ಗ್ರಾನೈಟ್ ಉತ್ಪಾದನೆಯಲ್ಲಿ ಸಹ ಕರ್ನಾಟಕದಲ್ಲಿ ಬಹಳ ಮುಂಚೂಣಿಯಲ್ಲಿದೆ ಆದ್ದರಿಂದ ಕರ್ನಾಟಕದ ಗ್ರಾನೈಟ್ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿತ್ತು. ಹಾಗೂ ಹಿಂದೆ ದೇಶದ ಅತಿ ದೊಡ್ಡ ಲೋಕಸಭಾಕ್ಷೇತ್ರವಾಗಿತ್ತು.

ಈ ತಾಲೂಕು ಬಹಳ ವಿಸ್ತಾರವಾಗಿ ಹರಡಿದೆ ಇದೆ. ಈ ತಾಲೂಕಿನಲ್ಲಿ ಅರಣ್ಯ ಪ್ರದೇಶ ಬಹಳ ವಿಶಾಲವಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುಮಾರು ಅರ್ಧದಷ್ಟು ಭಾಗ ಕನಕಪುರದಲ್ಲಿದೆ. ಕೋಡಿಹಳ್ಳಿ ವನ್ಯ ಜೀವಿ ವಲಯ, ಹಾರೋಹಳ್ಳಿ ವನ್ಯಜೀವಿವಲಯ ಇದರ ವಿಭಾಗಗಳು. ಹಾಗೂ ಕಾವೇರಿ ವನ್ಯಜೀವಿ ಧಾಮದ ಎರಡು ಪ್ರಮುಖ ವಲಯಗಳನ್ನು ಒಳಗೊಂಡಿದೆ. ಅವುಗಳೆಂದರೆ ಸಂಗಮ ವನ್ಯ ಜೀವಿ ವಲಯ , ಮುಗ್ಗೂರು ವನ್ಯ ಜೀವಿವಲಯ, 23.08.2007ರಲ್ಲಿ ರಾಮನಗರ ಜಿಲ್ಲೆಗೆ ಸೇರಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ