ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇ ಉದ್ಘಾಟನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

| Updated By: Digi Tech Desk

Updated on: Mar 10, 2023 | 12:20 PM

ಸರ್ವಿಸ್ ರಸ್ತೆ, ಮೂಲ ಸೌಕರ್ಯ ಕಲ್ಪಿಸಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇ ಹೆದ್ದಾರಿಯನ್ನು ಉದ್ಘಾಟನೆ ಮಾಡಿ ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಟೋಲ್ ಬಳಿ​​​​​ ಪ್ರತಿಭಟನೆ ಮಾಡುತ್ತಿವೆ.

ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇ ಉದ್ಘಾಟನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು-ಬೆಂಗಳೂರು ಎಕ್ಸಪ್ರೆಸ್​ವೇ
Follow us on

ರಾಮನಗರ: ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇ (Mysuru-Bengaluru Expressway) ಉದ್ಘಾಟನೆಗೆ ದಿನಗಣನೆ ಶರುವಾಗಿದೆ. ಆದರೆ ಉದ್ಘಾಟನೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೌದು ಪ್ರಧಾನಿ ನರೇಂದ್ರ ಮೋದಿಯವರು (PM Narendar Modi) ಇನ್ನೆರಡು ದಿನಗಳಲ್ಲಿ (ಮಾ.12) ರಂದು ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಆದರೆ ಸರ್ವಿಸ್ ರಸ್ತೆ, ಮೂಲ ಸೌಕರ್ಯ ಕಲ್ಪಿಸಿ ಹೆದ್ದಾರಿಯನ್ನು ಉದ್ಘಾಟನೆ ಮಾಡಿ ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಟೋಲ್ ಬಳಿ​​​​​ ಪ್ರತಿಭಟನೆ ಮಾಡುತ್ತಿವೆ. ಅಲ್ಲದೇ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಜೊತೆಗೆ ಇದೇ 14 ರಿಂದ ಟೋಲ್ ಸಂಗ್ರಹ ಮಾಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಒಂದ ವೇಳೆ ಟೋಲ್ ಸಂಗ್ರಹ ಮಾಡಲು ಯತ್ನಿಸಿದ್ದೇ ಆದಲ್ಲಿ ಟೋಲ್​ಗಳನ್ನು ದ್ವಂಸ ಮಾಡುವ ಕೆಲಸ ಮಾಡಲಾಗುತ್ತದೆ. ಈ ಹಿನ್ನೆಲೆ ಸಮಸ್ಯೆಗಳನ್ನು ಬಗೆಹರಿಸಿ ಟೋಲ್ ಸಂಗ್ರಹ ಮಾಡುವಂತೆ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಡಿ.ಕೆ. ಸುರೇಶ್‌

ಈ ಹಿಂದೆ ಸಂಸದ ಡಿಕೆ ಸುರೇಶ್​ ಬೆಂಗಳೂರು ಮೈಸೂರು ರಾಷ್ಟೀಯ ಹೆದ್ದಾರಿಯ ಎರಡೂ ಬದಿಯ ಅವೈಜ್ಞಾನಿಕ ಸರ್ವಿಸ್ ರಸ್ತೆಗಳನ್ನು ಸರಿಪಡಿಸಬೇಕು. ಅಂಡರ್‌ಪಾಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಡಿ.ಕೆ. ಸುರೇಶ್‌ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಬಗ್ಗೆ ತಿಳಿಯಲೇಬೇಕಾದ ಮಾಹಿತಿ

ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗ ಬದಲಾವಣೆ

ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಮಾ.12) ಮಂಡ್ಯದ ಮದ್ದೂರು ತಾಲೂಕಿನಲ್ಲಿ ಲೋಕಾರ್ಪಣೆಗೊಳಿಸುವ ಹಿನ್ನೆಲೆ ದಶಪಥ ಹೆದ್ದಾರಿಯನ್ನು ಅರ್ಧಕ್ಕರ್ಧ ಬಂದ್​ ಮಾಡಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಮಂಡ್ಯ ಜಿಲ್ಲಾಧಿಕಾರಿ ಹೆಚ್​ ಎನ್​ ಗೋಪಾಲಕೃಷ್ಣ ಮಂಡ್ಯ ನಗರ ಮತ್ತು ಮದ್ದೂರು ಠಾಣಾ ವ್ಯಾಪ್ತಿಯ ಗೆಜ್ಜಲಗೆರ ಕಾಲೋನಿ ಬಳಿ ಪ್ರಧಾನಿಗಳ ಸಾರ್ವಜನಿಕ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಆಗಮಿಸಲಿದ್ದಾರೆ. ಹಾಗೇ ಅತಿಥಿ ಗಣ್ಯರು ಭಾಗವಹಿಸಲಿದ್ದು, ಭದ್ರತಾ ದೃಷ್ಟಿಯಿಂದ ಮಾರ್ಚ್​ 12 ರಂದು ಬೆಳಿಗ್ಗೆ 6 ರಿಂದ ಸಾಯಂಕಾಲ 6 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾರ್ಗ ಬದಲಾವಣೆ

ಮೈಸೂರು ಬೆಂಗಳೂರು, ಬೆಂಗಳೂರು ಮಲೆಮಹಾದೇಶ್ವರ, ಮೈಸೂರು ತುಮಕೂರು ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

1. ಮೈಸೂರಿನಿಂದ ಬೆಂಗಳೂರಿಗೆ ಮಂಡ್ಯ, ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಮೈಸೂರು – ಬನ್ನೂರು – ಕಿರುಗಾವಲು – ಮಳವಳ್ಳಿ – ಹಲಗೂರು – ಕನಕಪುರ – ಬೆಂಗಳೂರು ಮಾರ್ಗವಾಗಿ ತೆರಳಬೇಕು.

2. ಮೈಸೂರಿನಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಮೈಸೂರು – ಶ್ರೀರಂಗಪಟ್ಟಣ – ಪಾಂಡವಪುರ – ನಾಗಮಂಗಲ – ಬೆಳ್ಳೂರು ಕ್ರಾಸ್ – ತುಮಕೂರು ಮಾರ್ಗವಾಗಿ ಹೋಗಬೇಕು.

3. ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ತುಮಕೂರು- ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ- ಶ್ರೀರಂಗಪಟ್ಟಣ ಮೈಸೂರು ಮಾರ್ಗವಾಗಿ ಸಂಚರಿಸಬೇಕು.

4. ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲ ರೀತಿಯ ವಾಹನಗಳು ಬೆಂಗಳೂರು – ಚನ್ನಪಟ್ಟಣ – ಹಲಗೂರು – ಮಳವಳ್ಳಿ – ಕಿರುಗಾವಲು -ಬನ್ನೂರು – ಮೈಸೂರು ಮಾರ್ಗವಾಗಿ ಸಂಚರಿಸಬೇಕು.

5. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ-ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲ ರೀತಿಯ ವಾಹನಗಳು ಬೆಂಗಳೂರು – ಚನ್ನಪಟ್ಟಣ – ಹಲಗೂರು – ಮಳವಳ್ಳಿ – ಕೊಳ್ಳೇಗಾಲ ಮಹದೇಶ್ವರಬೆಟ್ಟ ಮಾರ್ಗವಾಗಿ ಸಂಚರಿಸಬೇಕು.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದ್ದೇ ಆದರೆ ಅಂತವರ ವಿರುದ್ಧ ಕೂನೂನು ರೀತ್ಯಾ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Fri, 10 March 23