ಮೇಕೆದಾಟು ಯೋಜನೆ ಮಾಡುತ್ತೀರೋ, ಇಲ್ಲವೋ? ಕೋಡಿಹಳ್ಳಿ ಚಂದ್ರಶೇಖರ್ ವಾರ್ನಿಂಗ್
Kodihalli Chandrashekar: ನನ್ನ ತಾಯಿಯನ್ನೇ ಮೊದಲು ಅಮ್ಮ ಎಂದು ಕರೆಯುವುದು. ಆಮೇಲೆ ಗೊತ್ತಿರುವವರನ್ನ ಅವ್ವ, ಚಿಕ್ಕವ್ವ, ಅಜ್ಜಿ ಎನ್ನುತ್ತೇವೆ. ಇದು ಸಾಮಾನ್ಯಜ್ಞಾನ, ಇದನ್ನು ಸಿ.ಟಿ.ರವಿ ತಿಳಿದುಕೊಳ್ಳಬೇಕು ಎಂದು ರಾಮನಗರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪಾಠ ಹೇಳಿದರು.
ರಾಮನಗರ: ರಾಜ್ಯದ ರೈತರು ಮೇಕೆದಾಟು ವಿಚಾರದಲ್ಲಿ ಪದೇ ಪದೇ ಚಳವಳಿ ಮಾಡುವ ಅವಶ್ಯಕತೆ ಇಲ್ಲ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಚಳವಳಿ ಮಾಡಿದ್ದಾರೆ ಎಂದು ನಾವು ಪ್ರತಿ ಚಳುವಳಿ ಮಾಡುವ ಅವಶ್ಯಕತೆ ಇಲ್ಲ. ನಾವು ರಾಜ್ಯ ಸರ್ಕಾರಕ್ಕೆ ವಾರ್ನಿಂಗ್ ಮಾಡುತ್ತಿದ್ದೇವೆ. ನೀವು ಮೇಕೆದಾಟು ಯೋಜನೆ ಮಾಡುತ್ತೀರೋ, ಇಲ್ಲವೋ ಸ್ಪಷ್ಟಪಡಿಸಿ. ನೀವು ಮಾಡುವುದಿಲ್ಲ ಎನ್ನುವುದಾದರೆ ನಾವೇ ಅಡಿಗಲ್ಲು ಹಾಕುತ್ತೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೇಕೆದಾಟು ವಿಚಾರವಾಗಿ ಸಿ.ಟಿ.ರವಿ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಇದೊಂದು ಅತ್ಯಂತ ಮೂರ್ಖತನದ ಪ್ರಸ್ತಾಪವಾಗಿದೆ. ನಾನು ಮೊದಲು ತನ್ನ ತಾಯಿಗೆ ಮಗ. ನಂತರದಲ್ಲಿ ನಾನು ಎಲ್ಲರನ್ನು ತಾಯಿ, ಅವ್ವ ಎನ್ನಬಹುದು. ಮೊದಲು ನನ್ನ ತಾಯಿಯನ್ನೇ ಮೊದಲು ಅಮ್ಮ ಎಂದು ಕರೆಯುವುದು. ಆಮೇಲೆ ಗೊತ್ತಿರುವವರನ್ನು ಅವ್ವ, ಚಿಕ್ಕವ್ವ, ಅಜ್ಜಿ ಎನ್ನುತ್ತೇವೆ. ಇದು ಸಾಮಾನ್ಯಜ್ಞಾನ, ಇದನ್ನು ಸಿ.ಟಿ.ರವಿ ತಿಳಿದುಕೊಳ್ಳಬೇಕು ಎಂದು ರಾಮನಗರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪಾಠ ಹೇಳಿದರು.
ನಮ್ಮ ಸರ್ಕಾರ ದೃಢ ನಿರ್ಧಾರ ಅಥವಾ ಇಚ್ಛಾಶಕ್ತಿ ಇದೀಯೋ ಅಥವಾ ಇಲ್ಲವೋ ಎಂದು ತಿಳಿಸಬೇಕು. ಸರ್ಕಾರ ಕಾಲ ಮಿತಿ ಒಳಗೆ ಅಡಿಗಲ್ಲು ಹಾಕಬೇಕು. ಇದನ್ನೇ ನಾವು ಒತ್ತಾಯ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರ ರಾಜಕೀಯ ಲಾಭಕ್ಕಾಗಿ ಮಹಾದಾಯಿಯಂತೆ ಮೇಕೆದಾಟು ಯೋಜನೆಯನ್ನು ಕೂಡಾ ವಿವಾದವಾಗಿ ಮುಂದುವರೆಸಬಾರದು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ:
ನಾಳೆ ರಾಜ್ಯ ಸರ್ಕಾರದಿಂದ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯ ಅಧಿಕೃತ ಆಚರಣೆ; ಸಿಎಂಬ ಬೊಮ್ಮಾಯಿ ಘೋಷಣೆ
ಹಿಂದಿನ ಅನುಭವಗಳ ಮೇಲೆ ಕೊವಿಡ್ ನಿರ್ವಹಣೆಗೆ ಗಮನವಹಿಸಲಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
(Kodihalli Chandrashekar warns state Government about give clear picture about Mekedatu Project)