ರಾಮನಗರ, ಫೆ.06: ಆ ಒಂದು ಬಸ್ಸಿನ ಓಡಾಟದಿಂದಾಗಿ ಹಲವು ಗ್ರಾಮಗಳ ಜನ ರೋಸಿಹೋಗಿದ್ದಾರೆ. ಬಿಳಿ ಬಟ್ಟೆ ಧರಿಸಿ ಓಡಾಡೊದಕ್ಕೂ ಹೆದರುತ್ತಿದ್ದಾರೆ. ರಾಮನಗರ(Ramanagara)ದ ಬಸ್ಸು, ಬಸ್ ಸ್ಟ್ಯಾಂಡ್ನಿಂದ ಹೊರಟರೆ ಸಾಕು, ಇಡೀ ದಾರಿಯುದ್ದಕ್ಕೂ ಕರಿ ಹೊಗೆ ಸೂಸುತ್ತಾ, ಸುತ್ತ ಮುತ್ತಲಿನ ಇಡೀ ಪ್ರದೇಶವನ್ನು ಮಾಲಿನ್ಯ ಮಾಡುತ್ತಾ ಹೊರಡುತ್ತದೆ. ಕೆಎಸ್ಆರ್ಟಿಸಿ(KSRTC) ಯ ಕೆಎ 42 ಎಫ್ 0221, ನಂಬರಿನ ಈ ಬಸ್ಸು, ಈಗ ಗ್ರಾಮಸ್ಥರ ಹಾಗೂ ದಾರಿಯಲ್ಲಿನಡೆದುಕೊಂಡು ಹೋಗುವವರ ಪಾಲಿಗೆ ಕಂಟಕಪ್ರಾಯ ಆಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಉಸ್ತುವಾರಿ ಕ್ಷೇತ್ರ ರಾಮನಗರದಲ್ಲೇ ಬಸ್ಸುಗಳ ಸ್ಥಿತಿ ಹೀಗಾದರೆ, ರಾಜ್ಯದ ಸ್ಥಿತಿ ಏನು ಎಂದು ಜನ ಪ್ರಶ್ನಿಸಿದ್ದಾರೆ. ರಾಮನಗರ ಹಾಗೂ ಚನ್ನಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳಿಗೆ ತೆರಳುವ ಬಹುತೇಕ ಬಸ್ಸುಗಳ ಪರಿಸ್ಥಿತಿ ಹೀಗಿದೆ. ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆಯಲ್ಲಿ ಬಸ್ಸುಗಳ ಗುಣಮಟ್ಟ ಕುಂಠಿತಗೊಂಡಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇತ್ತ ವಿಭಾಗೀಯ ನಿಯಂತ್ರಾಧಿಕಾರಿ ಬಸ್ಸುಗಳ ಪರಿಶೀಲನೆ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ:ರಾಜ್ಯದಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಟೆಂಡರ್; ಸಾರಿಗೆ ಸಚಿವ ರಾಮಲಿಂಗರೆಡ್ಡಿ
ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ತೆರಳುವ ಬಸ್ಸುಗಳ ಸಂಖ್ಯೆ ತೀರಾ ಕಡಿಮೆ ಇದೆ. ಅದರಲ್ಲೂ ಬೇರೆ ಬೇರೆ ಹಳ್ಳಿಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಬಸ್ಸು ಸಿಗುತ್ತಿಲ್ಲ. ಈ ಕಾರಣ ವಿದ್ಯಾರ್ಥಿಗಳಿಗೆ ಸರಿಯಾಗಿ ತಮ್ಮ ಕಾಲೇಜಿಗೆ ತೆರಳಲು ಆಗುತ್ತಿಲ್ಲ. ಇಂಥದರ ನಡುವೆ ಇರುವ ಬಸ್ಸುಗಳು ಕೂಡ ಹೊಗೆ ಕಾರುತ್ತಾ, ಡಕೋಟ ಎಕ್ಸಪ್ರೆಸ್ ಸ್ಥಿತಿಗೆ ತಲುಪಿವೆ. ಇದರ ಬಗ್ಗೆ ಕೂಡಲೇ ಕ್ರಮವಹಿಸಿ ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Tue, 6 February 24