AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಹಾರೈಸಿದ ಸಚಿವ ರಾಮಲಿಂಗಾರೆಡ್ಡಿ

ಕೋವಿಡ್‌ ನಿಂದಾಗಿ ಯಾವುದೇ ರೆಕ್ಯುಪ್ಮೆಂಟ್ ಆಗಿರಲಿಲ್ಲ. ಈ ವರ್ಷ ಹೊಸದಾಗಿ ರೆಕ್ಯುಪ್ಮೆಂಟ್ ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್‌ ಕಾರಣದಿಂದಾಗಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ, 8 ವರ್ಷಗಳ ನಂತರ ಅನುಮತಿ ಸಿಕ್ಕಿದೆ. ಈ ವರ್ಷ ರೆಕ್ಯುಪ್ಮೆಂಟ್ ಪಾರದರ್ಶಕವಾಗಿ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

KSRTC ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಹಾರೈಸಿದ ಸಚಿವ ರಾಮಲಿಂಗಾರೆಡ್ಡಿ
KSRTC ತಾಂತ್ರಿಕ ಸಹಾಯಕ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿದ ಕ್ಷಣ
TV9 Web
| Edited By: |

Updated on: Jan 18, 2024 | 7:36 AM

Share

ಬೆಂಗಳೂರು, ಜ.18: ಕೆಎಸ್​ಆರ್​ಟಿ‌ಸಿಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಗೆ ಹೊಸದಾಗಿ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ನೇಮಕ‌ ಆದೇಶ ನೀಡುವ ಕಾರ್ಯಕ್ರಮವನ್ನ ಕೆಎಸ್​ಆರ್​ಟಿಸಿ (KSRTC) ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿತ್ತು.‌ ಇದೇ ವೇಳೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy), ಕೆಎಸ್​ಆರ್​ಟಿಸಿ ಎಂಡಿ ಅನ್ಬುಕುಮಾರ ಭಾಗಿಯಾಗಿ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶಪತ್ರಗಳನ್ನ ನೀಡಿದ್ರು. ಇದೇ ವೇಳೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ನೇಮಕಾತಿಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಿ, ಅಭ್ಯರ್ಥಿಗಳಿಗೆ ಅವರಿಚ್ಚೆಯಂತೆಯೆ ಘಟಕಗಳನ್ನು ಸಹ ಆರಿಸಿಕೊಳ್ಳಲು ಗಣಕೀಕರಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ನೇಮಕಗೊಂಡಿರುವ ಸಿಬ್ಬಂದಿಗಳು ಶ್ರಮವಹಿಸಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿಗಮಕ್ಕೆ ಕೀರ್ತಿ ತರುವಂತೆ ತಿಳಿಸಿದರು.

ಕೋವಿಡ್‌ ನಿಂದಾಗಿ ಯಾವುದೇ ರೆಕ್ಯುಪ್ಮೆಂಟ್ ಆಗಿರಲಿಲ್ಲ. ಈ ವರ್ಷ ಹೊಸದಾಗಿ ರೆಕ್ಯುಪ್ಮೆಂಟ್ ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್‌ ಕಾರಣದಿಂದಾಗಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ, 8 ವರ್ಷಗಳ ನಂತರ ಅನುಮತಿ ಸಿಕ್ಕಿದೆ. ಈ ವರ್ಷ ರೆಕ್ಯುಪ್ಮೆಂಟ್ ಪಾರದರ್ಶಕವಾಗಿ ಮಾಡಲಾಗಿದೆ. 300 ಪೊಸ್ಟ್ ಗಳಿಗೆ ಅಭ್ಯರ್ಥಿಗಳನ್ನ ಭರ್ತಿ‌ಮಾಡಲು ಸರ್ಕಾರ ಸೂಚನೆ ನೀಡಿತ್ತು. ಅದ್ರಲ್ಲಿ ಸಧ್ಯ 262 ಅಭ್ಯರ್ಥಿಗಳನ್ನ ನೇಮಕ ಮಾಡಿಕೊಂಡಿದ್ದು,ಇವರಲ್ಲಿ 36 ಜನರನ್ನ ವೆಯಿಟಿಂಗ್ ಲೀಸ್ಟ್ ನಲ್ಲಿ ಇರಿಸಲಾಗಿದೆ. ಅಭ್ಯರ್ಥಿಗಳಿಗೆ ಅಧಿಸೂಚನೆಯ ಸಂಧರ್ಭದಲ್ಲಿ ನಿಗಧಿಪಡಿಸಲಾಗಿದ್ದ, ಎರಡು ವರ್ಷಗಳ ತರಭೇತಿ ಅವಧಿಯನ್ನ 1 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ತರಭೇತಿ ಭತ್ಯೆಯನ್ನ 9 ಸಾವಿರದಿಂದ 14 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡಿ ಅಂತ ಶುಭ ಹಾರೈಸಿದದ್ರು.

ಇದನ್ನೂ ಓದಿ: ಶಾಂತಲಾ ಸಿಗ್ನಲ್​ನಲ್ಲಿ 2 ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ದೊಣ್ಣೆಯಿಂದ ದಾಳಿ; ಇಬ್ಬರು ವಶ

ನಿಗಮದ ಪ್ರಸಕ್ತ ಕಾರ್ಯಾಚರಣೆಯ ಅಂಕಿಅಂಶಗಳ ವಿವರವು ಕೆಳಗಿನಂತಿವೆ

  • ವಿಭಾಗಗಳು – 17
  • ಘಟಕಗಳು – 83
  • ಬಸ್ಸು ನಿಲ್ದಾಣಗಳು – 175
  • ಸಾರಿಗೆ ಸೇವೆಗಳು – 7640
  • ಒಟ್ಟು ಬಸ್ಸುಗಳು – 8358
  • ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ – 27.84 ಲಕ್ಷ ಕಿಮೀ
  • ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ – 32.34 ಲಕ್ಷ,
  • ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಸಂಖ್ಯೆ -18.40 ಲಕ್ಷ,
  • ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಟಿಕೇಟ್ ಮೊತ್ತ- 5.48 ಕೋಟಿ,
  • ಒಟ್ಟು ಸಿಬ್ಬಂದಿ – 33932ನಿಗಮದಲ್ಲಿ ಪ್ರಸ್ತುತ 4588 ತಾಂತ್ರಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 353 ಮಹಿಳಾ ತಾಂತ್ರಿಕ ಸಿಬ್ಬಂದಿಗಳಿದ್ದಾರೆ. ಕೋವಿಡ್-19ರ ಕಾರಣ ಸ್ಥಗಿತಗೊಂಡಿದ್ದ 726 ತಾಂತ್ರಿಕ ಸಹಾಯಕ ಹುದ್ದೆಗಳಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಸುಮಾರು 8 ( ಕೊನೆಯ ನೇಮಕಾತಿ 2016 ನಡೆದದ್ದು) ವರ್ಷಗಳ ನಂತರ ಅನುಮತಿ ನೀಡಿದೆ. ನಿಗಮದ ಪದವೃಂದ & ನೇಮಕಾತಿ ನಿಯಮಾವಳಿಯನ್ವಯ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಆಯ್ಕೆ ಪ್ರಕ್ರಿಯೆಗೆ ಅರ್ಹರಿದ್ದು, ಅದರಂತೆ 554 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

    ಸರ್ಕಾರವು ಅನುಮತಿ ನೀಡಿದ 300 ಹುದ್ದೆಗಳ ನೇಮಕಾತಿಗೆ ನಿಗಮದ ವಿಶೇಷ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆದು ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ವಿಂಗಡಣೆ ಮಾಡಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅರ್ಹರಾದ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಪರಿಶೀಲನೆಯನ್ನು  2023ರ ಡಿಸೆಂಬರ್​ 26ರಿಂದ 28ರವರೆಗೆ ಹಾಗೂ ಹೆಚ್ಚುವರಿಯಾಗಿ (ಗೈರುಹಾಜರಾದ ಅಭ್ಯರ್ಥಿಗಳಿಗೆ) 2024ರ ಜನವರಿ 03ರಂದು ನಡೆಸಲಾಯಿತು. 2024ರ ಜನವರಿ 05ರಂದು 262 ಆಯ್ಕೆಯಾದ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಿಲು 7 ದಿನಗಳ ಕಾಲಾವಕಾಶ ನೀಡಲಾಗಿರುತ್ತದೆ.

    ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅರ್ಹ ಆಕ್ಷೇಪಣೆಗಳನ್ನು ಪುರಸ್ಕರಿಸಿ ಅಂತಿಮವಾಗಿ 2024ರ ಜನವರಿ 13 ರಂದು 264 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿರುತ್ತದೆ.  ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಜ. 17ರಂದು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ನೇರವಾಗಿ ಅವರ ಆಯ್ಕೆಯ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ನೇರವಾಗಿ ಘಟಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟು ಸ್ಥಳ ನಿಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಅನುಸರಿಸಲಾಗಿದೆ. ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು 03 ತಿಂಗಳ ಒಳಗಾಗಿಯೇ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.

    ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಧಿಸೂಚನೆ ಸಂದರ್ಭದಲ್ಲಿ ನಿಗಧಿಪಡಿಸಲಾಗಿದ್ದ 02 ವರ್ಷಗಳ ತರಬೇತಿ ಅವಧಿಯನ್ನು 01 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಮುಂದುವರೆದು, ಮಾಹೆಯಾನ ನಿಗಧಿಪಡಿಸಲಾಗಿದ್ದ ತರಬೇತಿ ಭತ್ಯೆಯನ್ನು ರೂ.9,100/- ರಿಂದ ರೂ.14,000/- ಕ್ಕೆ ಏರಿಕೆ ಮಾಡಲಾಗಿದೆ. ನಿಗಮವು 2000 ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿಗಾಗಿ ಸದ್ಯದಲ್ಲಿಯೇ ಚಾಲನಾ ಪರೀಕ್ಷೆಗೆ ಕ್ರಮ ಜರುಗಿಸಲಿದೆ. ಈ ಸಮಾರಂಭದಲ್ಲಿ ಶ್ರೀ. ವಿ.ಅನ್ಬುಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕ ರಾ ರ ಸಾ ನಿಗಮ, ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತೆ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು