ಅಯೋಧ್ಯೆಯಂತೆ ರಾಮನಗರದ ರಾಮದೇವರ ಬೆಟ್ಟ ಕೂಡ ಅಭಿವೃದ್ಧಿ ಮಾಡಿ: ಸಿಎಂ ಬೊಮ್ಮಾಯಿಗೆ ಅಶ್ವತ್ಥ್​ ನಾರಾಯಣ ಪತ್ರ

| Updated By: ವಿವೇಕ ಬಿರಾದಾರ

Updated on: Dec 21, 2022 | 7:10 PM

ಅಯೋಧ್ಯೆ ಮಾದರಿಯಲ್ಲೇ ರಾಮದೇವರ ಬೆಟ್ಟ ಕೂಡ ಅಭಿವೃದ್ಧಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್​ ನಾರಾಯಣ ಪತ್ರ ಬರೆದಿದ್ದಾರೆ.

ಅಯೋಧ್ಯೆಯಂತೆ ರಾಮನಗರದ ರಾಮದೇವರ ಬೆಟ್ಟ ಕೂಡ ಅಭಿವೃದ್ಧಿ ಮಾಡಿ: ಸಿಎಂ ಬೊಮ್ಮಾಯಿಗೆ ಅಶ್ವತ್ಥ್​ ನಾರಾಯಣ ಪತ್ರ
ಅಶ್ವಥ್​ ನಾರಾಯಣ
Follow us on

ರಾಮನಗರ: ಅಯೋಧ್ಯೆ (Ayodhya) ಮಾದರಿಯಲ್ಲೇ ರಾಮದೇವರ ಬೆಟ್ಟ ಕೂಡ ಅಭಿವೃದ್ಧಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್​ ನಾರಾಯಣ (Ashwath Narayan) ಪತ್ರ ಬರೆದಿದ್ದಾರೆ.ರಾಮದೇವರ ಬೆಟ್ಟ ಮುಜರಾಯಿ ಇಲಾಖೆ ಅಧೀನದಲ್ಲಿದೆ. ಹೀಗಾಗಿ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ, ರಾಮದೇವರ ಬೆಟ್ಟದಲ್ಲಿ ದೇವಸ್ಥಾನ ನಿರ್ಮಿಸಲು ತ್ವರಿತವಾಗಿ ಅಭಿವೃದ್ಧಿ ಸಮಿತಿ ರಚಿಸಬೇಕು ಎಂದು ಸಿಎಂ ಬೊಮ್ಮಾಯಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಮದೇವರ ಬೆಟ್ಟದಲ್ಲಿ ಕಾಕಾಸುರ ವಿಗ್ರಹ ಇರೋದು ಏಕೆ?

ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟದಲ್ಲಿ ಶ್ರೀರಾಮನ ದೇವಸ್ಥಾನವಿದೆ. ವನವಾಸದ ಸಮಯದಲ್ಲಿ ರಾಮ, ಸೀತೆ ಜೊತೆ ಈ ಬೆಟ್ಟಕ್ಕೆ ಬಂದು, 14 ದಿನಗಳ ಕಾಲ ತಂಗಿದ್ದರಂತೆ. ಈ ವೇಳೆ ಕಾಕಾಸುರ ಎಂಬ ರಾಕ್ಷಸ, ಸೀತೆಯನ್ನ ಕೆಣಿಕಿದ್ದನಂತೆ. ಹೀಗಾಗಿ ಶ್ರೀರಾಮ ಕಾಕಾಸುರನ ಒಂದು ಕಣ್ಣಿಗೆ ಬಾಣ ಬಿಟ್ಟು, ಕಣ್ಣು ಕಿತ್ತು ಹಾಕಿದ್ದ ಎಂಬ ಪ್ರತೀತಿ ಇದೆ.

ಹೀಗಾಗಿಯೇ ಬೆಟ್ಟದಲ್ಲಿರೋ ರಾಮನ ದೇವಸ್ಥಾನದ ಮುಂಭಾಗ ಕಾಕಾಸುರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ . ವಿಶೇಷ ಅಂದ್ರೆ ಕಾಕಾಸುರನ ಸಂಹಾರ ಆದ ನಂತರ ಈ ರಾಮದೇವರ ಬೆಟ್ಟದ ಮೇಲೆ ಕಾಗೆಗಳ ಹಾರಾಟ ಮಾಡುವುದಿಲ್ಲವಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:01 pm, Wed, 21 December 22