Piyush Goyal Tweet: ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್, ಪ್ರಧಾನಿ ಮೋದಿ ರೀಟ್ವೀಟ್

ಗಮನಾರ್ಹವೆಂದರೆ ಈ‌ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ರೀಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರತಿಭೆ, ಸಂಪ್ರದಾಯ, ಬೊಂಬೆಗಳ ಪ್ರದರ್ಶನಕ್ಕೆ ಉತ್ತಮ ಕ್ರಮ ಎಂದು ಮೋದಿ ಶ್ಲಾಷಿಸಿದ್ದಾರೆ.

Piyush Goyal Tweet: ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್, ಪ್ರಧಾನಿ ಮೋದಿ ರೀಟ್ವೀಟ್
ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೇ ಖಾತೆ ಸಚಿವ ಪಿಯೂಶ್ ಗೋಯಲ್
Follow us
ಸಾಧು ಶ್ರೀನಾಥ್​
|

Updated on:Feb 16, 2021 | 2:34 PM

ದೆಹಲಿ: ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆಗಳ ಬಗ್ಗೆ ಕೇಂದ್ರ ರೈಲ್ವೇ ಖಾತೆ ಸಚಿವ ಪಿಯೂಶ್ ಗೋಯಲ್ ಅವರು ಟ್ವೀಟ್ ಮಾಡಿ, ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಆತ್ಮನಿರ್ಭರ ಭಾರತ್ ದತ್ತ ಹೆಜ್ಜೆಯಿಟ್ಟಂತಾಗಿದೆ ಎಂದು ಟ್ವೀಟ್ ಮಾಡಿರುವ ಪಿಯೂಶ್ ಗೋಯಲ್, ರೈಲ್ವೇ ಇಲಾಖೆಯಿಂದ ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಚನ್ನಪಟ್ಟಣದ ಬೊಂಬೆಗಳ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಸ್ಥಳೀಯ ಬೊಂಬೆ ಉತ್ಪಾದನೆಗೆ ಪೋತ್ಸಾಹ ನೀಡಿದಂತಾಗಿದೆ ಎಂದು ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್

ಗಮನಾರ್ಹವೆಂದರೆ ಈ‌ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ರೀಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರತಿಭೆ, ಸಂಪ್ರದಾಯ, ಬೊಂಬೆಗಳ ಪ್ರದರ್ಶನಕ್ಕೆ ಉತ್ತಮ ಕ್ರಮ ಎಂದು ಮೋದಿ ಶ್ಲಾಷಿಸಿದ್ದಾರೆ.

‘ಮನ್‌ ಕೀ ಬಾತ್‌’ನಲ್ಲಿ ಭಾರತ ಆಟಿಕೆಗಳ ತಯಾರಿಕಾ ಹಬ್ ಆಗಬೇಕು ಎಂದು ಬಯಸಿದ್ದ ಪ್ರಧಾನಿ ಮೋದಿ

ಆತ್ಮ ನಿರ್ಭರ ಭಾರತದ ಅಡಿಯಲ್ಲಿ ಭಾರತ ಜಗತ್ತಿನ ಆಟಿಕೆ ವಸ್ತು ತಯಾರಿಕೆಯ ಹಬ್ ಆಗಬಹುದು. ಇದಕ್ಕೆ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಅತ್ಯುತ್ತಮ ಉದಾಹರಣೆ ಹಾಗೂ ಮಾದರಿ. ಚನ್ನಪಟ್ಟಣದ ಆಟಿಕೆಗಳು ತಮ್ಮ ವಿಶಿಷ್ಟ ಶೈಲಿಯಿಂದ ಕೇವಲ ಚಿಕ್ಕಮಕ್ಕಳು ಮಾತ್ರವಲ್ಲ ಎಲ್ಲರ ಹೃದಯವನ್ನೂ ಗೆದ್ದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹಿಂದೆ ಶ್ಲಾಘಿಸಿದ್ದರು.

68ನೇ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಚಿಕ್ಕ ಮಕ್ಕಳ ಆಟಿಕೆ ತಯಾರಿಕೆಯಲ್ಲಿ ಭಾರತದ ಪಾಲುದಾರಿಕೆ ಹೆಚ್ಚಬೇಕು. ಅದರಲ್ಲೂ ಸ್ಥಳೀಯ ಆಟಿಕೆಗಳಿಗೆ ಹೆಚ್ಚು ಪ್ರಚಾರವನ್ನು ಮಾಡಬೇಕು. ಅಂಥ ಆಟಿಕೆಗಳಿಂದ ಮಕ್ಕಳ ಬೌದ್ಧಿಕ ವಿಕಸನವಾಗುವಂತಿರಬೇಕು ಎಂದು ಆಟಿಕೆ ತಯಾರಿಕರಿಗೆ ಕರೆ ನೀಡಿದ್ದರು.

ಬವಾಸ್ ಮಿಯಾ ಚನ್ನಪಟ್ಟಣ ಆಟಿಕೆಗಳ ಪಿತಾಮಹ ಚನ್ನಪಟ್ಟಣದ ಗೊಂಬೆಗಳು ಮರದ ಗೊಂಬೆಗಳಾಗಿವೆ. ಆಲೆಮರ ಅಥವಾ ಧೂಪಮರದ ಮೂಲಕ ಇಲ್ಲಿ ಆಟಿಕೆಗಳನ್ನು ತಯಾರಿಸಲಾಗುತ್ತದೆ. ಇದನ್ನು ನಮ್ಮ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಕರಕುಶಲತೆಯ ಈ ಗೊಂಬೆಗಳಿಗೆ ಭೌಗೋಳಿಕ ಸೂಚ್ಯ ಅಥವಾ ಜಾಗರ್ಫಿಕಲ್ ಐಡೆಂಟಿಫಿಕೇಶನ್ (Geographical Identification -GI ) ಲಭಿಸಿದೆ. ಈ ಗೊಂಬೆಗಳ ಜನಪ್ರಿಯತೆಯಿಂದಾಗಿ, ಚನ್ನಪಟ್ಟಣವನ್ನು ಗೊಂಬೆಗಳ ಊರು (ಆಟಿಕೆ-ಪಟ್ಟಣ) ಎಂದು ಕರೆಯಲಾಗುತ್ತದೆ.

ಮರದ ಗೊಂಬೆಗಳ ತಯಾರಿಕೆಯಲ್ಲಿ ಸ್ಥಳೀಯ ಕುಶಲಕರ್ಮಿಗಳಿಗೆ ತರಬೇತಿ ನೀಡಲು ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಪರ್ಷಿಯಾದ ಕುಶಲಕರ್ಮಿಗಳನ್ನು ಆಹ್ವಾನಿಸಿದ್ದರು. ಚನ್ನಪಟ್ಟಣ ಆಟಿಕೆಗಳಿಗಾಗಿ ಪ್ರಾಣತ್ಯಾಗ ಮಾಡಿದ ಬವಾಸ್ ಮಿಯಾ ಅವರನ್ನು ಚನ್ನಪಟ್ಟಣ ಆಟಿಕೆಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಆಟಿಕೆಗಳ ತಯಾರಿಕೆಗಾಗಿ ಜಪಾನಿಯರ ತಂತ್ರಜ್ಞಾನವನ್ನು ಅಳವಡಿಸಿಕೊಂಡರು. ಸ್ಥಳೀಯ ಕುಶಲಕರ್ಮಿಗಳು ತಮ್ಮ ಕಲೆಯನ್ನುಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡಿದರು. ಸುಮಾರು ಎರಡು ಶತಮಾನಗಳವರೆಗೆ, ಈ ಗೊಂಬೆಗಳ ತಯಾರಿಕೆಯಲ್ಲಿ ಧೂಪ ಮರವು ಪ್ರಮುಖ ಮರವಾಗಿತ್ತು. ಹಾಗೂ ಶ್ರೀಗಂಧದ ಮರಗಳನ್ನೂ ಕೆಲವೊಮ್ಮೆ ಬಳಸಿಕೊಳ್ಳಲಾಗುತ್ತದೆ.

Published On - 10:43 am, Tue, 16 February 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ